ನರ್ಮದೆಯ ನಾಡಿನಲ್ಲಿ

Author : ವೆಂಕಟೇಶ ಮಾಚಕನೂರ

Pages 136

₹ 130.00




Year of Publication: 2018
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್‌ ರಸ್ತೆ, ಹುಬ್ಬಳ್ಳಿ

Synopsys

ವೆಂಕಟೇಶ ಮಾಚಕನೂರ ಅವರ ಮಧ್ಯಪ್ರದೇಶ ರಾಜ್ಯದ ಪ್ರವಾಸ ಕಥನ. ಭಾರತದ ಮಧ್ಯ ಭಾಗವಾಗಿರುವ ಈ ರಾಜ್ಯವನ್ನು ವೆಂಕಟೇಶ ಅವರು ’ನರ್ಮದೆಯ ನಾಡಿನಲ್ಲಿ’ ಎಂದು ಗುರುತಿಸಿದ್ದಾರೆ. ತಮ್ಮ ಪ್ರವಾಸದ ಅನುಭವಗಳ ಜೊತೆಯಲ್ಲಿಯೇ ಆ ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ ಮಹತ್ವವನ್ನು ಕಟ್ಟಿಕೊಟ್ಟಿರುವುದು ಈ ಪುಸ್ತಕದ ವಿಶೇಷ.

About the Author

ವೆಂಕಟೇಶ ಮಾಚಕನೂರ

.ಲೇಖಕ ವೆಂಕಟೇಶ ಮಾಚಕನೂರ ಮೂಲತಃ ಧಾರವಾಡದವರು. ನರ್ಮದೆಯ ನಾಡಿನಲ್ಲಿ, ಉತ್ಕಲ ವಂಗ  (ಪ್ರವಾಸ ಕಥನ), ಅಪೂರ್ವ ಪೂರ್ವ, ಉತ್ತರ ವಿಹಾರ ಇತ್ಯಾದಿ ಕೃತಿಗಳು.  ...

READ MORE

Reviews

ವೆಂಕಟೇಶ ಮಾಚಕನೂರ ಬರೆದಿರುವ ’ನರ್ಮದೆಯ ನಾಡಿನಲ್ಲಿ’ ಮಧ್ಯಪ್ರದೇಶ ರಾಜ್ಯದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಕುರಿತಾದ ಪ್ರವಾಸ ಕಥನ. ಇದು ಕೇವಲ ಪ್ರವಾಸ ಕಥನವಾಗಿರದ ಅದರಾಚೆ ಇಡಿಯಾಗಿ ಮಧ್ಯಪ್ರದೇಶದ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ವಿಚಾರಗಳೊಂದಿಗೆ ಅಲ್ಲಿನ ಜನರ ಜೀವನ ಶ್ರಮವನ್ನೂ ಸಹ ತೆರೆದಿಡುವಲ್ಲಿ ಯಶಸ್ವಿಯಾಗಿದೆ. ಜೊತೆಗೆ, ಲೇಖಕರು ತಮ್ಮ ಪ್ರವಾಸದ ಸಂದರ್ಭದಲ್ಲಿನ ಅಪರೂಪದ ಅನುಭವಗಳನ್ನೂ ಸಹ ದಾಖಲಿಸಿರುವುದರಿಂದ ವಿಶಿಷ್ಟವೆನಿಸುತ್ತದೆ. ಭಾರತದ ಮಧ್ಯಭಾಗವಾಗಿರುವ ಮಧ್ಯಪ್ರದೇಶವು ನಮ್ಮ ದೇಶದ ವೈವಿಧ್ಯಮಯ ಬದುಕು ಬವಣೆಗಳು, ರಾಜಕೀಯ ಸ್ಥಿತ್ಯಂತರಗಳ ಪ್ರತೀಕವಾಗಿಯೂ ನೋಡಬಹುದಾದ ಸಾಧ್ಯತೆಗೆ ಪೂರಕವಾದ ವಿವರಗಳನ್ನು ಸಂಗ್ರಹಿಸಿ ಕೃತಿಯಲ್ಲಿ ನೀಡಿದ್ದಾರೆ. ವೆಂಕಟೇಶ ಮಾಚಕನೂರ ಅವರಿಗೆ ವಿಶ್ವ ಸುತ್ತುವ ಕ್ರಿಯೆಯು ಕೇವಲ ಇಷ್ಟದ ಹವ್ಯಾಸವಷ್ಟೇ ಆಗಿರದೆ ಆ ಸಂದರ್ಭದಲ್ಲಿ ತಾವು ಮುಖಾಮುಖಿಯಾದ ಅಲ್ಲಿನ ಸಂಗತಿ, ಸ್ಥಳ, ಸಂಸ್ಕೃತಿ-ಸಂಪ್ರದಾಯಗಳ ಕುರಿತಾದ ಹೊಸದೊಂದು ಅನುಭವಕ್ಕೆ ತಮ್ಮನ್ನು ತಾವೇ ತೆರೆದುಕೊಂಡು, ಆ ಅನುಭವಗಳೆಲ್ಲವನ್ನೂ ಇಲ್ಲಿನ ಐತಿಹಾಸಿಕ ಸಂಗತಿಗಳೊಂದಿಗೆ ಸಮೀಕರಿಸಿ ಹೇಳುವುದರ ಮೂಲಕ ಓದುಗನಿಗೆ ದಾಟಿಸುತ್ತಾರೆ. ಇದು ಓದಿದ ನಂತರವೂ ಬಹುಕಾಲ ನೆನಪಿನಲ್ಲುಳಿಯುವ ಕೃತಿ.

- ಕಲ್ಲೇಶ್ ಕುಂಬಾರ್, ಬೆಳಗಾವಿ 

ಕೃಪೆ: ಹೊಸತು 2019 ಜನೆವರಿ

Related Books