ನಟ ನಾಡೋಜ

Author : ಶಿವರಾಮಯ್ಯ

Pages 188

₹ 150.00




Year of Publication: 2008
Published by: ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್
Address: ಕೃಷ್ಣಾಪುರದೊಡ್ಡಿ, ನಂ. 119, 3ನೇ ತಿರುವು, 4ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು - 563 104
Phone: 080-23409512

Synopsys

’ನಟ ನಾಡೋಜ’ ಇದು ವರನಟ ರಾಜ್ ಕುಮಾರ್‌ ಅವರ ಜೀವನ ಚರಿತ್ರೆ. ರಾಜಕುಮಾರ್‌ ಅವರ ಹುಟ್ಟಿನಿಂದ ಅವರ ಸಾಯುವವರೆಗಿನ ಜೀವನದ ಎಲ್ಲಾ ಘಟ್ಟಗಳ ಚಿತ್ರಣ ಈ ಕೃತಿಯಲ್ಲಿದೆ. ಈ ಕೃತಿಯು ನಾಲ್ಕು ಭಾಗಗಳನ್ನು ಒಳಗೊಂಡಿದ್ದು, ಹಂತ ಹಂತವಾಗಿ ರಾಜ್ ಕುಮಾರ್‌ ಜೀವನವನ್ನು ಅನಾವರಣ ಮಾಡಲಾಗಿದೆ.  ರಾಜ್ ಕುಮಾರ್‌ ಅವರ ಮನೆತನದ ಹಿನ್ನೆಲೆ, ಮನೆತನದ ಪರಿಚಯ, ರಾಜ್ ಕುಮಾರ್‌ ಬೆಳೆದ ಬಗೆ, ರಂಗಭೂಮಿಯ ಪ್ರವೇಶ, ತಂದೆಯ ಅಗಲಿಕೆ, ಮದುವೆ, ಇವು ಮೊದಲ ಭಾಗದಲ್ಲಿದ್ದರೆ, ಎರಡನೇ ಭಾಗದಲ್ಲಿ ರಾಜ್ ಕುಮಾರನ ಚಿತ್ರರಂಗ ಪ್ರವೇಶ,  ಮುತ್ತುರಾಜ ರಾಜಕುಮಾರನಾದ ಬಗೆ, ನಟ ಗಾಯಕನಾದದ್ದು, ಗೋಕಾಕ ಚಳುವಳಿ, ಮುಂತಾದ ಲೇಖನಗಳಿವೆ. ಮೂರನೇ ಭಾಗದಲ್ಲಿ ವಿರಪ್ಪನ್ ನ ಅಡಗುತಾನದಲ್ಲಿ ರಾಜಕುಮಾರ್‌ ಕಳೆದ ದಿನಗಳ ಅನುಭವ, ಮತ್ತು ವಿರಪ್ಪನ್ ಬಗ್ಗೆ ರಾಜ್ಕುಮಾರ್‌ ಹೊಂದಿದ್ದ ಅಭಿಪ್ರಾಯವನ್ನು ನೀಡಲಾಗಿದೆ. ನಾಲ್ಕನೇ ಭಾಗದಲ್ಲಿ ಅಪ್ಪಟ ದೇಸಿ ಪ್ರತಿಭೆ, ಕನ್ನಡಿಗರ ಮೌಲ್ಯಪ್ರಜ್ಞೆ ರಾಜ್‌, ಪಾರ್ವತಮ್ಮನವರು, ಕುವೆಂಪು-ರಾಜಕುಮಾರ್‌-ದೇವರಾಜ್ ಅರಸು, ಎಂಬ ಲೇಖನಗಳಿವೆ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books