ನಾಟಕೀಯ

Author : ಪ್ರೇಮಕುಮಾರ್ ಹರಿಯಬ್ಬೆ

Pages 98

₹ 160.00




Year of Publication: 2023
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ನಾಟಕೀಯ’ ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥಾಸಂಕಲನವಾಗಿದೆ. ಸಾಮಾನ್ಯರ ಬದುಕು, ಕಷ್ಟಗಳು, ಗ್ರಾಮೀಣ ಪರಿಸರಗಳನ್ನು ಈ ಕಥೆಗಳು ಕಟ್ಟಿಕೊಡುತ್ತವೆ. ಗ್ರಾಮೀಣ ಜನರು ಘನತೆವೆತ್ತ ಬದುಕು ಕಟ್ಟಿಕೊಳ್ಳುವಾಗ ತೊಡಕಾಗುವ ರಾಜಕೀಯ ಹುನ್ನಾರಗಳನ್ನು ಬಯಲಾಗಿಸುತ್ತವೆ. ಕಥೆಗಳಲ್ಲಿ ಕೆಂಡದಂಥ ವಾಸ್ತವಗಳಿವೆ. ಕರುಳಿಗೆ ತಂಪೆನಿಸುವ ವಾತ್ಸಲ್ಯವೂ ಇದೆ. ಹರಿಯಬ್ಬೆ ಅವರ ಕಥನ ಕೌಶಲ, ವಸ್ತುವಿನ ಆಯ್ಕೆ, ಸಂಕೀರ್ಣವಾದದ್ದನ್ನೂ ಸರಳವಾಗಿ ನಿಭಾಯಿಸುವ ಬಗೆಯೇ ಅಚ್ಚರಿ, ಅಬ್ಬರಿಸದೆ, ಘೋಷಿಸದೆ, ಗೊಣಗದೆ ಆಪಾದಿಸಲೋ ಒಲ್ಲದ ಒಂದು ಸಂವೇದನಾಶೀಲ ಮನಸ್ಸು ಕತೆಗಳನ್ನು ಕಟ್ಟುತ್ತದೆ. ಫಲಾಪೇಕ್ಷೆ ಇಲ್ಲದೆ ಅಪರೂಪವೆನಿಸುವ ಶುದ್ಧಮನಸ್ಸಿನ ಒಳಗೆ ಓಡಾಡುವ ಪಾತ್ರಗಳು, ಇಲ್ಲಿ ಮಾತನಾಡುತ್ತವೆ  ಕಾಡುತ್ತವೆ.

About the Author

ಪ್ರೇಮಕುಮಾರ್ ಹರಿಯಬ್ಬೆ
(07 May 1953)

ಹಿರಿಯ ಪತ್ರಕರ್ತ ಹಾಗೂ ಲೇಖಕ ಪ್ರೇಮಕುಮಾರ ಹರಿಯಬ್ಬೆ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹರಿಯಬ್ಬೆ ಗ್ರಾಮದವರು. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಅವರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲಾ ವರದಿಗಾರರಾಗಿ, ನಂತರ ಪ್ರಜಾವಾಣಿ ಭಾನುವಾರದ ವಿಶೇಷ ಪುರವಣಿಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿ ಸದ್ಯ ನಿವೃತ್ತರು.  ಕೃತಿಗಳು: ಸತ್ತವರು (1980), ದೇವಕಣಗಿಲೆ (2010), ಅಕಾಲ(2021) ಇವು ಮೂರು ಕಥಾ ಸಂಕಲನಗಳು. ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ  ಇವರಿಗೆ 2018ನೇ ಸಾಲಿನ ‘ವಾರ್ಷಿಕ ಪ್ರಶಸ್ತಿ’ ಲಭಿಸಿದೆ.  ...

READ MORE

Related Books