ನವನಿರ್ಮಾಣದ ಒಳಪದರಗಳು

Author : ಹೂ.ವೆ. ಶೇಷಾದ್ರಿ

Pages 160

₹ 75.00




Year of Publication: 1996
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ʼನವನಿರ್ಮಾಣದ ಒಳಪದರಗಳುʼ ಪ್ರಬಂಧ ಬರಹವನ್ನು ಲೇಖಕ ಹೂ.ವೆ.ಶೇಷಾದ್ರಿ ಅವರು ರಚಿಸಿದ್ದಾರೆ. ಬದುಕಿನಲ್ಲಿ ಸುಖ ಕಾಣಲು ಮನುಷ್ಯನಿಗೆ ಮುಖ್ಯವಾಗಿ ಬೇಕಾದ್ದೇನು ಎಂಬದರ ಆಳವಾದ ವಿಶ್ಲೇಷಣೆ. ಜೊತೆಗೆ ರಾಷ್ಟ್ರದ ನವನಿರ್ಮಾಣದ ಪ್ರಯತ್ನಗಳ ಸಾರ್ಥಕತೆ ಹೇಗೆ ಎನ್ನುವ ಕುರಿತು ಚಿಂತನೆ ಇದೆ. ಈ ಫಲವಾಗಿ ಮೂಡಿದ ಪ್ರಬಂಧಗಳ  ಸಂಗ್ರಹವಿದು. ಒಂದು ದೇಶ ಉತ್ತಮ ರಾಷ್ಟ್ರವಾಗಿ ರೂಪುಗೊಳ್ಳಲು ಏನೆಲ್ಲಾ ಬಗೆಗಳನ್ನು ಒಳಗೊಂಡಿರಬೇಕು ಎನ್ನುವ ಕುರಿತಾದ ವಿಮರ್ಶಾತ್ಮಕ ಲೇಖನಗಳನ್ನು ಈ ಪ್ರಬಂದಗಳು ಒಳಗೊಂಡಿದೆ. ಭಾಷೆಯು ಸರಳವಾಗಿ ಓದು ಹೆಚ್ಚು ಆಪ್ತವೆನಿಸುತ್ತದೆ. 

About the Author

ಹೂ.ವೆ. ಶೇಷಾದ್ರಿ
(26 May 1926 - 14 August 2005)

ಖ್ಯಾತ ಲೇಖಕ ಶೇಷಾದ್ರಿಯವರು (26-05-1926) ಹುಟ್ಟಿದ್ದು ಹೊಂಗಸಂದ್ರದಲ್ಲಿ. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ (19476) ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವೀಧರರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರು. 1980ರಲ್ಲಿ ಕ್ಷೇತ್ರೀಯ (ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು) ಪ್ರಚಾರ ಕಾರ‍್ಯ ನಿರ್ವಹಣೆ, ಸಂಘದ ಪ್ರಧಾನ ಕಾರ‍್ಯದರ್ಶಿಯಾಗಿಯೂ ಆಗಿದ್ದರು.ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಬರೆದರು.  ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷ್‌ನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಲೇಖನ, ವಿಮರ್ಶಾತ್ಮಕ ವಿಶ್ಲೇಷಣೆಗಳನ್ನು ಬರೆದರು. ಕೃತಿಗಳು-ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ...

READ MORE

Related Books