ನವದಿಗಂತದೆಡೆಗೆ

Author : ನಾಗರತ್ನ ಕೆ.ಪಿ.

Pages 108

₹ 130.00




Year of Publication: 2021
Published by: ಮನಿ ಪ್ರಕಾಶನ
Address: #560, 12ನೇ ಮುಖ್ಯ ರಸ್ತೆ, 20 ’ಬಿ’ಕ್ರಾಸ್, ಸಿ ಬ್ಲಾಕ್, ವಿಜಯನಗರ 3 ನೇ ಹಂತ ಮೈಸೂರು-570030
Phone: 9686535465

Synopsys

ಲೇಖಕಿ ಕೆ.ಪಿ. ನಾಗರತ್ನ ಅವರ ’ನವದಿಗಂತದೆಡೆಗೆ’ ಗ್ರಾಮೀಣ ಬದುಕಿನ ಸೊಗಡನ್ನು ಹಿಡಿದಿಟ್ಟಿರುವ ನಾಟಕ ಕೃತಿ. ನಗರ ಹಾಗೂ ಗ್ರಾಮೀಣ ಜೀವನಕ್ಕೂ ಸಾಕಷ್ಟು ವ್ಯತ್ಯಾಸವಿರಲು ಕೃಷಿ ಬದುಕೇ ಕಾರಣ ಎನ್ನುತ್ತಾರೆ ಲೇಖಕಿ. ಹಳ್ಳಿಗಾಡಿನ ಜನರು ವ್ಯವಸಾಯವನ್ನು ಅವಲಂಬಿಸಿ ಬದುಕುವವರು. ನೆಲೆ ಉತ್ತು, ಗೊಬ್ಬರ ಹಾಕಿ ಬೆಳೆ ತೆಗೆಯಬೇಕಾದರೆ ಶ್ರಮ ಹಾಕಲೇಬೇಕು. ಪ್ರಾಯಶಃ: ಆ ಕಾರಣದಿಂದಲೋ ಏನೋ ಮನೆ-ಮಂದಿಯೆಲ್ಲ ಹೊಲ-ಗದ್ದೆಗಳಲ್ಲಿ ಗೇಯ್ಕೆ ಮಾಡಬೇಕಾಗುತ್ತದೆ. ಹಾಗಾಗಿ, ದುಡಿಯುವ ಕೈಗಳಿಗೇ ಅಲ್ಲಿ ಬೆಲೆ ಸಿಗುತ್ತದೆ. ಕೃಷಿ ಜೀವನ ಶ್ರಮದ ದುಡಿಮೆಯನ್ನು ಬೇಡುವುದರಿಂದಾಗಿ ಗ್ರಾಮೀಣರಿಗೆ ಹೆಣ್ಣು ಹುಟ್ಟಿದರೆ ಅಷ್ಟು ಸಂಭ್ರಮವಿಲ್ಲ: ಗಂಡು ಹುಟ್ಟಿದರೆ ಸಡಗರ: ಹಬ್ಬದ ವಾತಾವರಣ. ಹೆಣ್ಣು ಗಂಡಿಗೆ ಸರಿಸಮನಾಗಿ ದುಡಿಯಬಲ್ಲಳು ಎಂದು ಹೇಳಿದರೆ ಅವರು ಒಪ್ಪಂದದ ಸಂದರ್ಭ ಇನ್ನೂ ಪ್ರಚಲಿತವಿರುವುದನ್ನು ನಾವು ಕಾಣಬಹುದು. ಪ್ರತಿಯೊಂದು ಇಲಾಖೆಯಲ್ಲೂ ಮಹಿಳೆಯರು ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದನ್ನು ಗ್ರಾಮೀಣರು ಕಾಣುತ್ತಾರೆ: ಆದರೆ ತಮಗೆ ಹೆಣ್ಣು ಮಗು ಹುಟ್ಟಿದಾಗ ದುಃಖಕ್ಕೆ ಒಳಗಾಗುತ್ತಾರೆ: ಹುಟ್ಟಿದ ಮಗುವನ್ನು ತಿರಸ್ಕಾರದಿಂದ ಕಾಣುತ್ತಾರೆ: ಇದೊಂದು ಹೊರೆ, ಅನಿಷ್ಟ ಎಂದೆಲ್ಲ ಭಾವಿಸುತ್ತಾರೆ. ಈ ಎಲ್ಲಾ ವಿಚಾರಗಳನ್ನು ಈ ನಾಟಕದಲ್ಲಿ ಕಟ್ಟಿಕೊಡುತ್ತಾರೆ.

ಕೃತಿಗೆ ಮುನ್ನುಡಿ ಬರೆದಿರುವ ಗಿರೀಶ್ ವೈ. ಎಸ್ ಅವರು, ‘ನವದಿಗಂತದೆಡೆಗೆಯೂ ಅದ್ಭುತ ನಾಟಕ, ಕರುಣೆ, ಪ್ರೀತಿ, ಹಾಸ್ಯ, ನೋವು, ನಲಿವು ಎಲ್ಲವೂ ಮಿಳಿತಗೊಂಡಿವೆ. ಬರವಣಿಗೆಯಲ್ಲಿನ ದೇಶಿ ಶೈಲಿ ನಮ್ಮತನವನ್ನು ಎತ್ತಿ ತೋರಿಸುವಂತಿದೆ. ಹಳ್ಳಿಯ ಜನರ ಸಾಮರಸ್ಯದ ಬದುಕು ಹಾಗೂ ಅವರ ಮುಗ್ಧ ಮನಸ್ಸುಗಳ ಅನಾವರಣ ಬಹಳ ಸುಂದರವಾಗಿ ಮೂಡಿ ಬಂದಿದೆ. ಈ ನಾಟಕವು ಹೆಣ್ಣುಮಕ್ಕಳ ಅಸ್ತಿತ್ವ ಹಾಗೂ ಅವರ ದೃಢ ನಿರ್ಧಾರಗಳನ್ನು ಕುರಿತು ಬಿಂಬಿತವಾಗಿದ್ದರೂ ಹೆಣ್ಣು, ಗಂಡು ಇಬ್ಬರಿಗೂ ಸ್ಫೂರ್ತಿಯ ನೆಲೆಯಾಗುವುದರಲ್ಲಿ ಅನುಮಾನವಿಲ್ಲ. ಹೀಗೆಯೇ, ನಿಮ್ಮಿಂದ ಮತ್ತಷ್ಟು ಸಮಾಜವನ್ನು ತಿದ್ದುವ, ಎಲ್ಲರಲ್ಲೂ ಸಾಮರಸ್ಯವನ್ನು ಮೂಡಿಸುವ, ಸೋತವನು ಗೆದ್ದು ಭೀಗುವಂತೆ ಮಾಡುವ, ಬಿದ್ದವನು ಎದ್ದು ನಿಲ್ಲುವಂತೆ ಮಾಡುವ, ಜಿಗುಪ್ಪೆಗೊಂಡವನಿಗೆ ಚೈತನ್ಯ ತುಂಬುವಂತಹ ಕೃತಿ ಇದು’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ನಾಗರತ್ನ ಕೆ.ಪಿ.

ಲೇಖಕಿ ನಾಗರತ್ನ ಕೆ.ಪಿ. ಅವರು ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕುರುಬರಹಳ್ಳದೊಡ್ಡಿಯವರು. ಎಂ.ಎ ಪದವೀಧರರು. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ R.G.N.F. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕಿರಿಯ ಸಂಶೋಧನಾ ವಿದ್ಯಾರ್ಥಿವೇತನ ಪಡೆದು ಪಿಎಚ್.ಡಿ. ಪದವಿಗಾಗಿ  ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ. ಪ್ರಸ್ತುತ ಮಹಾರಾಜ ಕಾಲೇಜಿನಲ್ಲಿ ಸಂಶೋಧಕಿಯಾಗಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸ್ವಯಂ ಸೇವಕಿಯಾಗಿದ್ದು, 2015ರಲ್ಲಿ "ರಾಜ್ಯಮಟ್ಟದ ಅತ್ಯುತ್ತಮ ಸ್ವಯಂ ಸೇವಂ' ಪ್ರಶಸ್ತಿಯನ್ನು ಕರ್ನಾಟಕದ ರಾಜ್ಯಪಾಲರಿಂದ ಪಡೆದಿರುತ್ತಾರೆ. ಕೃತಿಗಳು: ನವದಿಗಂತದೆಡೆಗೆ( ನಾಟಕ) ...

READ MORE

Related Books