ನವಕರ್ನಾಟಕ ಸಚಿತ್ರ ಸರಳ ವ್ಯಾಕರಣ

Author : ಬಿ.ಎಸ್. ರುಕ್ಕಮ್ಮ

Pages 104

₹ 130.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 08022161900

Synopsys

ನವಕರ್ನಾಟಕ ಸಚಿತ್ರ, ಸರಳ ವ್ಯಾಕರಣ-ಪ್ರೊ. ಬಿ.ಎಸ್. ರುಕ್ಕಮ್ಮ ಅವರ ಕೃತಿ. ಯಾವುದೇ ಭಾಷೆಗೆ ಒಂದು ವ್ಯಾಕರಣ ಇದ್ದೇ ಇರುತ್ತದೆ. ವ್ಯಾಕರಣ ಇಲ್ಲದಿದ್ದರೆ ಆ ಭಾಷೆಯ ಶಿಸ್ತು ರೂಪುಗೊಳ್ಳದು. ಮಕ್ಕಳಿಗೆ ಸರಳವಾಗಿ ಭಾಷೆಯೊಂದರ ವ್ಯಾಕರಣ ತಿಳಿಸುವತ್ತ ಈ ಕೃತಿಯು ಹೆಚ್ಚು ಗಮನ ನೀಡಿದೆ. ಹೊಸ ಹೊಸ ವಿಧಾನಗಳ ಪ್ರಯೋಗ ಮಾಡಿದೆ. ಮಕ್ಕಳಿಗೆ ಮನರಂಜನೆ ಉಂಟು ಮಾಡುವಂತೆ ಚಿತ್ರಗಳನ್ನು ಬಿಡಿಸಿದೆ. ಪ್ರಾಥಮಿಕ ಕಲಿಕೆಗೆ ಮೂಲವಾದ ವ್ಯಾಕರಣವನ್ನು ಗಂಭೀರವಾಗಿ ಪರಿಗಣಿಸಿ, ಅತ್ಯಂತ ಸರಳವಾಗಿ ತಿಳಿಸಲು ಈ ಕೃತಿಯಲ್ಲಿಯ ಪ್ರಯತ್ನಗಳು ಕನ್ನಡಿ ಹಿಡಿಯುತ್ತವೆ.

About the Author

ಬಿ.ಎಸ್. ರುಕ್ಕಮ್ಮ

ರುಕ್ಕಮ್ಮ ಬಿ.ಎಸ್. ಅವರು  ಎಂ.ಎ.(ಕನ್ನಡ) ಸ್ನಾತಕೋತ್ತರ ಪದವೀಧರರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ೨೩-೯-೧೯೩೪ ರಂದು ಮೈಸೂರಿನ  ಬಿ.ಟಿ. ಶ್ರೀನಿವಾಸ ಐಯ್ಯಂಗಾರ್, ಸೀತಮ್ಮ ದಂಪತಿಗಳಿಗೆ ಮಗಳಾಗಿ ಜನಿಸಿದರು. ಇವರ  ಕೃತಿಗಳು : ಶಾಲೆಯ ಮಕ್ಕಳು (ಕಾದಂಬರಿ) ೧೯೫೮. ಅನುವಾದ: ಕೀಟಗಳ ಒಡನಾಡಿ ಫೇಬರ್‌ ಜೀವನ ಮತ್ತು ಕೃತಿ ೧೯೬೦, ಸಮ್ಮುಕ್ತ ಕೌಮುದೀ ಸಂಗ್ರಹ (ಸಂಪಾದಿತ) ೧೯೬೩, ಮೇರಿಕ್ಯೂರಿ ಜೀವನ ಚರಿತ್ರೆ ೧೯೬೮, ಪಾಪು ಅಮ್ಮನಿಗೆ ಹೇಳಿದ ಕಥೆಗಳು (ಮಕ್ಕಳ ಸಾಹಿತ್ಯ) ೧೯೭೧, ಕಚ (ವ್ಯಕ್ತಿಚಿತ್ರ) ೧೯೭೩, ಹರಿಹರ ೧೯೭೩, ವ್ಯಾಪಾರಿ ನುಂಗಣ್ಣ (ಮಕ್ಕಳ ಸಾಹಿತ್ಯ) ...

READ MORE

Related Books