ನವಕರ್ನಾಟಕ ಕೈಪಿಡಿ ರಂಗಭೂಮಿ

Author : ವಿವಿಧ ಲೇಖಕರು

Pages 208

₹ 250.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

ರಂಗಭೂಮಿ ಒಂದು ಜೀವಂತ ಕಲೆ. ಸಮಕಾಲೀನ ಸ್ಥಿತಿಗತಿಗಳಿಗೆ ಭಾವನಾತ್ಮಕವಾಗಿ ಮತ್ತು ವಿಚಾರಾತ್ಮಕವಾಗಿ ಸ್ಪಂದಿಸುತ್ತ ಹೊಸ ಹೊಸ ಪ್ರಯೋಗಗಳಿಗೆ ಪ್ರೇರೇಪಿಸುತ್ತ ನಿರಂತರವಾಗಿ ಸಕ್ರಿಯವಾಗುತ್ತ ಹೋಗುವ ಮಾಧ್ಯಮ. ಯಾಕೆಂದರೆ - ಶಾಸ್ತ್ರೀಯ ಸಂಗೀತ ಅಥವಾ ನೃತ್ಯದಂತೆ ಈ ಮಾಧ್ಯಮಕ್ಕೆ ಗುರು ಪರಂಪರೆಯಿಲ್ಲ. ಇದ್ದರೂ ಗುರುಗಳೆನ್ನಿಸಿಕೊಂಡವರು - ಕೊಳ್ಳುವವರು ಹತ್ತಾರು ಮಂದಿ. ಇಲ್ಲಿ ಪ್ರಯೋಗವೇ ಪರಂಪರೆಯಾಗಿದೆ. ಬದುಕಿನ ಪ್ರತಿಯೊಂದು ದಿನವೂ ಇಲ್ಲಿ ಪ್ರಯೋಗಾಭ್ಯಾಸ. ನವಕರ್ನಾಟಕ ಕೈಪಿಡಿ: ರಂಗಭೂಮಿ ಆರು ಪಾಶ್ಚಾತ್ಯ ರಂಗಪದ್ಧತಿಗಳು, ಅಖಾಡ, ಸಂಪ್ರದಾಯಿಕ, ಏಕಕಾಲಿಕ, ಬಹುಘಟಕ, ನಾಟಕೀಯ ಮತ್ತು ಯಥಾರ್ಥ ರಂಗಪದ್ಧತಿಗಳನ್ನು ವಿಶದಪಡಿಸಿದ್ದಾರೆ. ಜತೆಯಲ್ಲಿ ವಾಸ್ತವೋತ್ತರ ರಂಗಶೈಲಿಗಳನ್ನು ವಿವರಿಸಿದ್ದಾರೆ. ಹಾಗೆಯೇ-ಭಾರತೀಯ ಪರಂಪರೆಯನ್ನು ತಮ್ಮ ಹಿನ್ನೋಟದಿಂದ ಚಿತ್ರಿಸಿದ್ದಾರೆ. ಇತಿಹಾಸ ಮತ್ತು ಪ್ರಯೋಗ ಎರಡನ್ನೂ ಒಂದೇ ಧರಾತಳದಲ್ಲಿ ಒಟ್ಟಿಗೆ ವಿವೇಚಿಸಿ-ವಿವರಿಸಿ ಬರೆದಿರುವ ಈ ಕೃತಿ ಕನ್ನಡದಲ್ಲಿ ಮೊಟ್ಟಮೊದಲನೆಯದು ಎಂದರೆ ತಪ್ಪಿಲ್ಲ.

About the Author

ವಿವಿಧ ಲೇಖಕರು

. ...

READ MORE

Related Books