ನಾವು ಏಕೆ ಬದುಕಬೇಕು?

Author : ಪ್ರಮೋದ ಮೋಹನ ಹೆಗಡೆ

Pages 160

₹ 200.00




Year of Publication: 2022
Published by: ಸಾವಣ್ಣ ಪ್ರಕಾಶನ
Phone: 9036312786

Synopsys

ಲೇಖಕ ಪ್ರಮೋದ ಮೋಹನ ಹೆಗಡೆ ಅವರ ಕೃತಿ ನಾವು ಏಕೆ ಬದುಕಬೇಕು?. ಕೃತಿಯಲ್ಲಿ ಜಗದೀಶಶರ್ಮಾ ಸಂಪ ಅವರ ಮುನ್ನುಡಿಯ ಮಾತುಗಳಿವೆ. ಅವರು ಹೇಳುವಂತೆ ಕೃತಿಕಾರ ಇಲ್ಲೊಂದು ಯಾತ್ರೆ ಹೊರಟಿದ್ದಾರೆ. ಅದು ಬದುಕನ್ನು ನೋಡುತ್ತಾ ಹೊರಟಿದೆ. ಹಾಗಾಗಿ ಇದನ್ನು ಬದುಕಿನ ವಿಸ್ಟಾಡೋಮ್ ಪಯಣ ಎನ್ನಬಹುದು. ಒಮ್ಮೆ ಅತ್ತ ತಿರುಗಿ, ಇನ್ನೊಮ್ಮೆ ಇತ್ತ ಹೊರಳಿ, ಒಮ್ಮೆ ಮೇಲೆ ನೋಡಿ, ಒಮ್ಮೆ ಕೆಳಗೆ ನಿರುಕಿಸಿ, ಮೂಲೆಮೂಲೆಯನ್ನೂ ನೋಡಿ ಸಾಗುತ್ತಾ ಇದ್ದರೆ ಸಮಗ್ರವೂ ದೃಷ್ಟಿಗೋಚರ. ಹೀಗೆ ನೋಡಿದರೆ ಅವಗಾಹನೆಗೆ ಪೂರ್ಣತೆ. ಈ ಕೃತಿಯ ಸ್ವರೂಪ ಮತ್ತು ಸ್ವಭಾವ ಅಂತಹದ್ದು. ಕೃತಿಯಲ್ಲಿ ಇಬ್ಬರಿದ್ದಾರೆ. ಒಬ್ಬ ನಿರೂಪಕ, ಇನ್ನೊಬ್ಬರು ಕೇಶವಮೂರ್ತಿಗಳು. ಇಬ್ಬರ ನಡುವೆ ಸುದೀರ್ಘ ಸಂವಾದವಿದೆ. ಒಬ್ಬರು ಹಿರಿಯರು. ಎಂದರೆ ಬಹುಕಾಲ ಬದುಕನ್ನು ಕಂಡವರು. ಆಳಕ್ಕೆ ಇಳಿದವರು, ಅಗಲದಲ್ಲಿ ಸಂಚರಿಸಿದವರು, ಎತ್ತರಕ್ಕೆ ಏರಿದವರು. ಇನ್ನೊಬ್ಬ ತರುಣ. ತಾರುಣ್ಯದ ಹುರುಪು, ಗೊಂದಲ, ಅಸ್ಪಷ್ಟತೆ, ಅರಿವು, ಕುತೂಹಲ ಎಲ್ಲ ಮೇಳೈಸಿದವ. ಇಂತಹ ಇಬ್ಬರು ಮಾತನಾಡುತ್ತಾ ಕುಳಿತರೆ ಕೇಳುವ ಕಿವಿಗಳಿಗೆ ಭರಪೂರ ಆಹಾರ. ಇಲ್ಲಿ ಅದು ಸಂಭವಿಸಿದೆಯಾಗಿ ಈ ಕೃತಿ ಉಪಯುಕ್ತ ಎಂದಿದ್ದಾರೆ.

About the Author

ಪ್ರಮೋದ ಮೋಹನ ಹೆಗಡೆ

ಪದಚಿಹ್ನ  ಎಂಬ ಕಾವ್ಯನಾಮ ಹೊಂದಿರುವ ಇವರು ಹುಟ್ಟಿದ್ದು ಮಲೆನಾಡಿನ ಸುಂದರ ಊರು ತೀರ್ಥಹಳ್ಳಿಯಲ್ಲಿ ಮತ್ತು ಬೆಳೆದಿದ್ದು ಕರಾವಳಿಯ ಕುಮಟಾದಲ್ಲಿ. ಬೆಂಗಳೂರೆಂಬ ಮಾಯಾನಗರಿಯಲ್ಲಿ ಪ್ರಸ್ತುತ ವಾಸ. ಇಂಜಿನಿಯರಿಂಗ್ ಓದಿ ಪ್ರಸ್ತುತ ಪತ್ರಿಕೋದ್ಯಮದಲ್ಲಿ ವೃತ್ತಿ, ಅದಕ್ಕೆ ಕಾರಣ ಬರವಣಿಗೆಯ ಮೇಲಿರುವ ಪ್ರೀತಿ. ಕಲೆ, ಸಾಹಿತ್ಯ, ರಂಗಭೂಮಿ, ಮಾತುಗಾರಿಕೆ, ಹಾಸ್ಯ, ಎಲ್ಲದರಲ್ಲೂ ಅಪಾರ ಆಸಕ್ತಿ. ಸಮಾಜಮುಖಿ ಕೆಲಸಗಳನ್ನು ಮಾಡಲು ಪರಹಿತಮ್ ಫೌಂಡೇಶನ್ ಎಂಬ ಎನ್ ಜಿ ಓ ಸ್ಥಾಪನೆ. ಒಳ್ಳೆಯ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು, ಬೈಕ್ ರೈಡಿಂಗ್, ಅಲೆಮಾರಿಯ ಬದುಕು ಇಷ್ಟ. ಕೃತಿ: ಮೈಸೂರ್ ಪಾಕ್ ಹುಡುಗ ...

READ MORE

Related Books