ನವ್ಯ ಕಾವ್ಯ -1

Author : ವಿ.ಕೃ. ಗೋಕಾಕ (ವಿನಾಯಕ)

Pages 408

₹ 375.00




Year of Publication: 1988
Published by: ಐಬಿಎಚ್ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085
Phone: 9845070613

Synopsys

ವಿನಾಯಕ ಕಾವ್ಯನಾಮದಿಂದ ಬರೆಯುವ ಜ್ಞಾನಪೀಠ ಪುರಸ್ಕೃತ ಕವಿ ಗೋಕಾಕರ ಸಮಗ್ರ ಕವಿತೆಗಳ ಸಂಕಲನ ಒಂದು ಸಂಪುಟ. ಬೇಂದ್ರೆ ನೇತೃತ್ವದ ಧಾರವಾಡದ ಗೆಳೆಯರ ಗುಂಪಿನ ಸದಸ್ಯರಾಗಿದ್ದ ಗೋಕಾಕರು ತಮ್ಮ ಕಾವ್ಯ ರಚನೆಯನ್ನು ಆರಂಭಿಸಿದ್ದು ನವೋದಯ ಕಾವ್ಯ ಪರಂಪರೆಯಲ್ಲಿ. ಕನ್ನಡದಲ್ಲಿ  ನವ್ಯ ಸಾಹಿತ್ಯದ ಆರಂಭವನ್ನು ಅಧಿಕೃತವಾಗಿ ಘೋಷಣೆ ಮಾಡಿದವರು ಕೂಡ ಗೋಕಾಕರೇ. ಗೋಕಾಕರು ತಮ್ಮ ಸಮಗ್ರ ಕಾವ್ಯ ಸಂಗ್ರಹ ಪ್ರಕಟಿಸುವ ಸಂದರ್ಭದಲ್ಲಿ ವಿವಿಧ ಕಾಲಘಟ್ಟದಲ್ಲಿ ಪ್ರಕಟಿಸಿದ ತಮ್ಮ ಕವಿತೆಗಳ ಸಂಕಲನಗಳಲ್ಲಿನ ಕವಿತೆಗಳನ್ನು ನವ್ಯ-ನವೋದಯ ಎಂದು ವಿಂಗಡಿಸಿದರು. ಹೀಗಾಗಿ ಗೋಕಾಕರ ಸಮಗ್ರ ಕಾವ್ಯದ ಒಟ್ಟು ನಾಲ್ಕು ಸಂಪುಟಗಳಿವೆ. ಎರಡು ನವೋದಯ ಕಾಲಘಟ್ಟದ ಮತ್ತು ಆಶಯಗಳನ್ನು ಕೇಂದ್ರವಾಗಿಟ್ಟುಕೊಂಡ ಸಂಪುಟಗಳು ಪ್ರಕಟವಾಗಿವೆ. ಹಾಗೆಯೇ ಎರಡು ಸಂಪುಟಗಳು ನವ್ಯ ಮಾದರಿಯ ಸಂಪುಟಗಳು. ಈ ಸಂಪುಟವು ಎರಡು ನವ್ಯ ಕವಿತೆಗಳ ಸಂಪುಟಗಳ ಪೈಕಿ ಮೊದಲನೆಯದು. ಗೋಕಾಕರ ನವ್ಯ ಮಾದರಿಯ ಕವಿತೆಗಳು ಒಂದೆಡೆಯಲ್ಲಿ ದೊರೆಯುವುದು ಈ ಸಂಪುಟದ ವಿಶೇಷ. ಮೊದಲ ಬಾರಿಗೆ ಈ ಸಂಪುಟಗಳನ್ನು ಪ್ರಕಟಿಸಿದ್ದ ಐಬಿಎಚ್‌ ಅವುಗಳನ್ನು ಈಗ ಮರುಮುದ್ರಣ ಮಾಡಿದೆ.

ಸಾಹಿತಿ ವಿ.ಕೃ ಗೋಕಾಕರು ಸುಮಾರು 1950 ರಿಂದೀಚೆಗೆ ಬರೆಗ ನವ್ಯ ಕವಿತೆಗಳು ಎರಡು ಸಂಪುಟಗಳಲ್ಲಿವೆ. ಊರ್ಣನಾಭ, ಪ್ರಜ್ಞಾಪ್ರಭಾತ, ದ್ಯಾವಾ-ಪೃಥಿವೀ, ನವ್ಯ ಕವಿತೆಗಳು , ಉಗಮ, ಕಾಶ್ಮೀರ ಮೊದಲಾದ ಭಾವಗೀತ-ನೀಳ್ಗವನಗಳು 1950 ರಿಂದ 1966ರ ವರೆಗೆ ಬರೆದವುಗಳು. ಸಸ್ಯಸೃಷ್ಟಿ, ನವ್ಯ ನೀಳ್ಗವನಗಳು, ಕ್ಲಿಷ್ಟ ನವ್ಯ ಕವನಗಳು ಮುಂತಾದವುಗಳನ್ನು ಅವರು 1966ರ ಈಚೆಗೆ ಬರೆದರು. ಆಗ ಅವರು ನಡೆಸುತ್ತಿದ್ದ ಸಮನ್ವಯ ಎಂಬ ತ್ರೈಮಾಸಿಕದಲ್ಲಿಯೂ ಕೆಲವು ಪ್ರಕಟವಾದವು. ಅವರು 1965-66 ರಿಂದ ಬರೆದ ನವ್ಯ ಕವಿತೆಗಳನ್ನು ಎರಡನೆಯ ಸಂಪುಟದಲ್ಲಿ ಸೇರಿಸಲಾಗಿದೆ. 

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books