ಇಂದೋರ್ ಮಲ್ಹೋತ್ರ ಅವರು ಮೂಲದಲ್ಲಿ ರಚಿಸಿದ ಕೃತಿಯನ್ನು ಲೇಖಕ ಮಹಾಂತೇಶ ಬಿದರಿಮಠ ಅವರು ‘ಇಂದಿರಾಗಾಂಧಿ; ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ವೈಯಕ್ತಿಕ ಹಾಗೂ ರಾಜಕೀಯ ಜೀವನಚರಿತ್ರೆ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. 2014ರವರೆಗೆ ಕೃತಿಯ ಕೆಲವೆಡೆ ಅಂಶಗಳನ್ನು ಪರಿಷ್ಕರಿಸಿ ನೀಡಲಾಗಿದೆ ಎಂದು ಅನುವಾದಕರು ಹೇಳಿದ್ದಾರೆ. ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶಗಳ ಪೈಕಿ, ಗಮನ ಸೆಳೆಯುತ್ತಿರುವ ಭಾರತದ ಪ್ರಧಾನಿಯಾಗಿ ಅದರಲ್ಲೂ ಮಹಿಳೆಯಾಗಿ ಆಡಳಿತದ ಬಿಗುವು, ಜಾಣ್ಮೆ ಮೆರೆದಿದ್ದ ಇಂದಿರಾಗಾಂಧಿ ಅವರ ಜೀವನ ಚರಿತ್ರೆ ಅಧ್ಯಯನ ಯೋಗ್ಯವಾಗಿದೆ. ಇಂದಿರಾಗಾಂಧಿ ಅವರ ವ್ಯಕ್ತಿಗತ-ರಾಜಕೀಯ ಬದುಕು ಸೇರಿದಂತೆ ವ್ಯಕ್ತಿತ್ವದ ಸಮಗ್ರತೆಯನ್ನು ಕಟ್ಟಿಕೊಡುವ ಕೃತಿ ಇದು.
©2023 Book Brahma Private Limited.