ನೀಲಿ ಬಣ್ಣದ ಸ್ಕಾರ್ಫು

Author : ಚೈತ್ರಿಕಾ ಹೆಗಡೆ

Pages 125

₹ 125.00




Year of Publication: 2021
Published by: ನಾಗರಾಜ ವೈದ್ಯ
Address: ಮೀಡಿಯಾ ಚೆರಿ, # 1022,ಶ್ರೀ ಕಾಲಭೈರೇಶ್ವರ ನಿಲಯ, ಎರಡನೇ ಅಡ್ಡರಸ್ತೆ, ಎಸ್ಎನ್ಎಸ್ ಇಂಡೇನ್ ಗ್ಯಾಸ್ ಏಜೆನ್ಸಿ ಹತ್ತಿರ, ರಾಜರಾಜೇಶ್ವರಿ ನಗರ -560 098
Phone: 8762329546

Synopsys

ಲೇಖಕಿ ಚೈತ್ರಿಕಾ ಹೆಗಡೆಯವರ ‘ನೀಲಿ ಬಣ್ಣದ ಸ್ಕಾರ್ಫು’ ಹನ್ನೆರಡು ಕಥೆಗಳನ್ನು ಒಳಗೊಂಡಿರುವ ಕಥಾ ಸಂಕಲನವಾಗಿದೆ. ಸಾಹಿತಿ ಸುಬ್ರಾಯ ಚೊಕ್ಕಾಡಿ ಈ ಕಥಾ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ.

ಸಮನ್ವಿತಾ ಪ್ರಕಾಶನದ ರಾಧಾಕೃಷ್ಣ ಅವರು,‘ ಈ ಸಂಕಲನದ ಹನ್ನೆರಡು ಕಥೆಗಳದೂವಿಭಿನ್ನ ಲೋಕ. ಇಲ್ಲಿನ ಕಥೆಗಳಲ್ಲಿ ಬೋಧನೆಯಿಲ್ಲ.ತೀರ್ಪುಗಳ ಹೇರಿಕೆಯಿಲ್ಲ. ಕಥೆಗಾರ್ತಿಯ ನಿರ್ಲಿಪ್ತತೆ ಇಡೀ ಕಥೆಯ ಓಘವನ್ನು ಸಾಕ್ಷಿಭಾವದಲ್ಲಿ ತೆರೆದಿಡುತ್ತದೆ. ಪ್ರತಿ ಕಥೆಯೂ ಸಹ ಅಂತ್ಯದ ತಿರುವಿನಲ್ಲಿ ಕಥೆಯ ಅನಂತ ಸಾಧ್ಯತೆಗಳನ್ನು ಎದುರಾಗಿಸುತ್ತದೆ. ಇವು ಓದುಗನದೇ ಕಥೆಯಾಗಿ ವಿಸ್ತಾರ ಹೊಂದುವ ಸಾಧ್ಯತೆ ಇಲ್ಲದ್ದಿಲ್ಲ. ಇಲ್ಲಿನ ಕತೆಗಳು ತಾವೇ ತಾವಾಗಿ ದೇಶಕಾಲದ ಚೌಕಟ್ಟನ್ನು ಒದಗಿಸುತ್ತಾ ಓದುಗರಿಗೆ ಏಕಕಾಲದಲ್ಲಿ ಕಥೆ ಓದುವ ಮತ್ತು ಕಥಾ ಚಿತ್ರವನ್ನು ನೋಡುವ ಶೈಲಿಯಲ್ಲಿದೆ. ಕಥೆಗಳ ಕಥನದಲ್ಲಿ ಹವಿಗನ್ನಡದ ಸವಿಯುಮನಸಿಗೆ ಮುದ ನೀಡುತ್ತಿದೆ ಎಂದಿದ್ದಾರೆ.

About the Author

ಚೈತ್ರಿಕಾ ಹೆಗಡೆ
(08 May 1994)

ಲೇಖಕಿ ಚೈತ್ರಿಕಾ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಂಚೀಮನೆಯವರು.ಶ್ರೀಧರ್ ಹೆಗಡೆ ಕಂಚೀಮನೆ ಹಾಗೂ ಅಂಬಿಕಾ ಹೆಗಡೆ ಮಗಳಾಗಿ 1994ರ ಮೇ 8 ರಂದು ಜನಿಸಿದರು. ಓದಿದ್ದು ಬಿಕಾಂ. ಮೊದಲಿನಿಂದಲೂ ಹಾಡು, ಕವಿತೆ ಬರೆಯುವುದರಲ್ಲಿ ಆಸಕ್ತಿಯಿಂದಾಗಿ ಕಥಾ ಬರವಣಿಗೆಯೂ ಶುರುವಾಯಿತು. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಧಾರಾವಾಹಿಗೆ ಸಂಭಾಷಣೆಗೆ ಅವಕಾಶ ಲಭ್ಯವಾಯಿತು. ಸದ್ಯ ಕಲರ್ಸ್ ಕನ್ನಡದ ಗೀತಾ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಿದ್ದಾರೆ. ಛಂದ ಪುಸ್ತಕ ಕಥಾ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ‘ನೀಲಿ ಬಣ್ಣದ ಸ್ಕಾರ್ಫು’ ಇವರ ಮೊದಲ ಕಥಾಸಂಕಲ. ...

READ MORE

Related Books