ವಿ.ಆರ್. ಕಾರ್ಪೆಂಟರ್ ಅವರ ಕಾದಂಬರಿ ‘ನೀಲಿ ಗ್ರಾಮ’. ವಿಜಯ ನೆಕ್ಟ್ಸ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ನೀಲಿ ಗ್ರಾಮ ಕಾದಂಬರಿ ಕಾರ್ಪೆಂಟರ್ ಅವರ ಜನಪ್ರಿಯ ಕಾದಂಬರಿ. ತನ್ನ ದಿನನಿತ್ಯದ ಬದುಕಿನಲ್ಲೂ ಬಂಡಾಯಗಾರನಾಗಿ ಕಾಣುವ ವಿ.ಆರ್.ಕಾರ್ಪೇಂಟರ್ ನೀಲಿಗ್ರಾಮದಂಥ ಫ್ಯಾಂಟಸಿ ಕಾದಂಬರಿಯನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಗೆರಿಲ್ಲಾ ಬರಹಗಾರನಾಗಿ ಗೋಚರಿಸಿದ್ದಾರೆ.
ಈ ಕೃತಿಯ ಬಗ್ಗೆ ಈ ಹಿಂದೆ ಮಾತನಾಡಿದ್ದ ಹಿರಿಯ ಕವಿ ಸುಬ್ಬು ಹೊಲೆಯಾರ್, ನೀಲಿಗ್ರಾಮದ ಓದುಗರಿಗೆ ಕಲ್ಪನಾಲೋಕವನ್ನೆ ಪರಿಚಯಿಸುತ್ತಿರುವ ವಿ.ಆರ್.ಕಾರ್ಪೇಂಟರ್ ಮುಖಾಂತರ ಕನ್ನಡಕೊಬ್ಬ ಹಾರಿಪಾಟರ್ ಸಿಕ್ಕಂತಾಗಿದೆ ಎಂದು ಪ್ರಶಂಸಿದ್ದರು.
ವಿ. ಆರ್. ಕಾರ್ಪೆಂಟರ್ ಯಲಹಂಕ ಸಮೀಪದ ವೆಂಕಟಾಲದಲ್ಲಿ 1981ರಲ್ಲಿ ಜನಿಸಿದರು. ಅವರ ಮೂಲ ಹೆಸರು- ನರಸಿಂಹಮೂರ್ತಿ ವಿ.ಆರ್. ತಂದೆ ರಾಮಯ್ಯ, ತಾಯಿ-ಸಿದ್ದಗಂಗಮ್ಮ. 9ನೇ ತರಗತಿಯವರೆಗೆ ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಸುಮಾರು ಹದಿನೈದು ವರ್ಷಗಳ ಕಾಲ ಬಡಗಿ ವೃತ್ತಿ. ಅದರ ನಡುವೆಯೇ ಲಂಕೇಶ್ ಪತ್ರಿಕೆಯ ಪ್ರಭಾವದಿಂದ ಸಾಹಿತ್ಯ ಲೋಕಕ್ಕೆ ಬಂದ ಅವರು ಒಂದಷ್ಟು ಕಾಲ ಕನ್ನಡ ಟೈಮ್ಸ್ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಿಗ್ನಲ್ ಟವರ್, ಐದನೇ ಗೋಡೆಯ ಚಿತ್ರಗಳು, ಕಾರ್ಪೆಂಟರ್ ಪದ್ಯಗಳು (ಕವನ ಸಂಕಲನ), ಅಪ್ಪನ ಪ್ರೇಯಸಿ ಮತ್ತು ನೀಲಿಗ್ರಾಮ (ಕಾದಂಬರಿಗಳು) ಪ್ರಕಟವಾಗಿವೆ. ಕಾರ್ಪೆಂಟರ್ ...
READ MORE