ನೀವು ದೇವರನ್ನು ನಂಬಬೇಡಿ

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 200

₹ 120.00




Year of Publication: 2020
Published by: ಸಾವಣ್ಣ ಪ್ರಕಾಶನ
Address: ನಂ57,1ನೇ ಮಹಡಿ, ಪುಟ್ಟಣ್ಣರಸ್ತೆ, ಬಸವನಗುಡಿ, ಬೆಂಗಳೂರು
Phone: 9036312786

Synopsys

ದೇವರ ಬಗ್ಗೆ ಅನೇಕ ಚರ್ಚೆ, ಜಿಜ್ಞಾಸೆಗಳು ಮೂಡುತ್ತಲೇ ಇರುತ್ತವೆ. ದೇವರನ್ನು ಕಾಣಲು ಏನು ಮಾಡಬೇಕು, ಏನೂ ಮಾಡಬಾರದು. ಏನು ಮಾಡಿದರೆ ದೇವರು ಕಾಣಿಸುವನು, ದೇವರು ಇದ್ದಾನೋ ಇಲ್ಲವೋ? ಈ ಪ್ರಶ್ನೆಗಳಿಗೆ ಸಿದ್ಧ ಉತ್ತರ ಇನ್ನೂ ಸಿಕ್ಕಿಲ್ಲ. ಈ ಜಿಜ್ಞಾಸೆಗೆ ಸಂಬಂಧಿಸಿದಂತೆ ಉತ್ತರ ಸಿಗದಿದ್ದರೂ ದೇವರ ಬಗ್ಗೆ ಬೇರೆಯದೇ ಆದ ಚಿಂತನೆ-ಹೊಸ ದೃಷ್ಟಿಕೋನವನ್ನು ನೀಡುವ ಕೃತಿ ಇದು.  ಸಾರ್ವತ್ರಿಕವಾದ ವೈಚಾರಿಕ ಚಿಂತನಾ ಬರಹಗಳ ಕೃತಿ. 

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books