ನೆಗೆಟಿವ್ ಮನಸ್ಸು

Author : ಸಿ.ಆರ್. ಚಂದ್ರಶೇಖರ್

Pages 90

₹ 90.00




Year of Publication: 2019
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-02
Phone: 08022107704

Synopsys

ಮಾನವನ  ಮನಸ್ಸು ಅತ್ಯಂತ ಸಂಕೀರ್ಣ, ಸೂಕ್ಷ್ಮ. ಸಕಾರಾತ್ಮಕ ಭಾವನೆಗಳಾದ ನೆಮ್ಮದಿ, ಆತ್ಮವಿಶ್ವಾಸ, ಪ್ರೀತಿ, ಸಂತಸಗಳು ಇದ್ದಲ್ಲಿ ಬದುಕು ಸಹಜವಾಗಿ ಸುಂದರವಾಗಿ ನಳನಳಿಸುತ್ತದೆ. ಅದಿಲ್ಲದೇ, ಭಯ, ಕೋಪ, ಮತ್ಸರ, ಕೀಳರಿಮೆ, ದುಃಖ ಮುಂತಾದ ನಕಾರಾತ್ಮಕ ಭಾವನೆಗಳು ತುಂಬಿಕೊಂಡಲ್ಲಿ ವ್ಯಕ್ತಿಗೆ ಮಾತ್ರವಲ್ಲ; ಕುಟುಂಬದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಂತಹ ನಕಾರಾತ್ಮಕ ಮಾತು, ಚಿಂತನೆ ನಡವಳಿಕೆಗೆ ಕಾರಣಗಳೇನು ಎಂಬುದನ್ನು ಈ ಕೃತಿ ಚರ್ಚಿಸುತ್ತಾ ಮಾನಸಿಕ ಸಧೃಡತೆಗೆ ಬೇಕಾದ ಸಿದ್ಧತೆಯನ್ನು ತಿಳಿಸುತ್ತದೆ.

ನಕಾರಾತ್ಮಕ ಮನಸ್ಸಿನ ಆಲೋಚನೆಗಳ ಲಕ್ಷಣಗಳೇನು?  ಅದನ್ನು ಧನಾತ್ಮಕವಾಗಿ ಬದಲಿಸಿಕೊಳ್ಳಲು ಬೇಕಾದ ಸೂಕ್ತ ಮಾಹಿತಿಯನ್ನು ಒದಗಿಸುತ್ತದೆ. ಇಲ್ಲಿರುವ ಸಲಹೆಗಳು ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿ, ಮನಶಾಂತಿ ಕಂಡುಕೊಳ್ಳಬಹುದಾದ ಮಾರ್ಗಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books