ನೆಲಗುಣ

Author : ಗುರುರಾಜ್ ಎಸ್. ದಾವಣಗೆರೆ

Pages 434

₹ 250.00




Year of Publication: 2022
Published by: ನಾಗೇಶ ಹೆಗಡೆ ಅಭಿನಂದನಾ ಸಮಿತಿ
Address: C% ಭೂಮಿ ಬುಕ್ಸ್, # 150, ಮೊದಲ ಮುಖ್ಯ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು- 560020
Phone: 9449177628

Synopsys

‘ನೆಲಗುಣ’ ಕೃತಿಯು ಪರಿಸರ ತಜ್ಞ -ವಿಜ್ಞಾನ ಲೇಖನಗಳ ಬರಹಗಾರ ನಾಗೇಶ ಹೆಗಡೆ ಅವರ ಕುರಿತ ಅಭಿನಂದನಾ ಗ್ರಂಥವಾಗಿದೆ. ಗುರುರಾಜ್ ಎಸ್ ದಾವಣಗೆರೆ ಅವರು ಈ ಕೃತಿಯ ಪ್ರಧಾನ ಸಂಪಾದಕರು. ನಾಗೇಶ ಹೆಗಡೆ ಅವರ 50 ಕೃತಿಗಳ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಹಿರಿಯ ಸಾಹಿತಿ ಕೆ.ವಿ ಅಕ್ಷರ ಅವರು ಈ ಕೃತಿಯ ಕುರಿತು, ‘ನಾಗೇಶ ಹೆಗಡೆ ಅವರು ತಮ್ಮ ಕನ್ನಡವನ್ನು ಕಟ್ಟಿಕೊಂಡು, ಬಳಿಕ ತಮ್ಮ ಬರಹಗಳಿಂದ ಕನ್ನಡತನವನ್ನು ಕಟ್ಟಿದ್ದಾರೆ ಎನ್ನುತ್ತಾರೆ.

ಲೇಖಕಿ ವೈದೇಹಿ ಅವರು, ‘ನಾಗೇಶ ಹೆಗಡೆ ಅವರ ಬರಹಗಳು ಬರಹಕ್ಕಾಗಿ ಬರಹಗಳಲ್ಲ ಅವು,  ಲೇಖಕನ ಜೀವ ನೊಂದು ಇದೀಗ ನಾನು ಮಾತಾಡದೇ ಕಳೆಯೆ ಎಂಬಂತೆ ಹೊಮ್ಮಿದ ಬರಹಗಳು’ ಎಂದು ಪ್ರಶಂಸಿಸಿದ್ದಾರೆ. ಲೇಖಕ ರಘುನಾಥ ಚ. ಹ.ಅವರು ‘ತರಾಸು, ಅನಕೃ ಅವರನ್ನು ಓದುವ ಸಂಸ್ಕೃತಿ ಬೆಳೆಸಿದವರು ಎನ್ನುತ್ತೇವೆ. ನಾಗೇಶ ಹೆಗಡೆ ಪತ್ರಿಕೆಗಳಿಗೆ ಬರೆಯುವ ಬರಹಗಾರರ ತಲೆಮಾರೊಂದನ್ನು ರೂಪಿಸಿದ ಮೇಷ್ಟ್ರು’ ಎಂದು ಶ್ಳಾಘಿಸಿದ್ದಾರೆ. 

About the Author

ಗುರುರಾಜ್ ಎಸ್. ದಾವಣಗೆರೆ

ಲೇಖಕ ಗುರುರಾಜ್ ಎಸ್. ದಾವಣಗೆರೆ ಅವರು ಮೂಲತಃ ದಾವಣಗೆರೆಯ ಹಲುವಾಗಿಲು ಗ್ರಾಮದವರು. ಗಣಿತ ಅಧ್ಯಾಪಕರು. ಬೆಂಗಳೂರಿನ ಪೂರ್ಣಪ್ರಜ್ಞಾ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದಾರೆ. ಪ್ರಮುಖ ಪತ್ರಿಕೆಗಳಿಗೆ ವಿಜ್ಞಾನ -ತಂತ್ರಜ್ಞಾನ ಪರಿಸರ ಕುರಿತ ಬರಹ ಇವರ ಆಸಕ್ತಿ. ಪಕ್ಷಿವೀಕ್ಷಣೆ, ಆಕಾಶ ವೀಕ್ಷಣೆ, ವನ್ಯಜೀವಿ ಗಣತಿ, ಛಾಯಾಗ್ರಹಣ, ಟ್ರೆಕ್ಕಿಂಗ್, ಭಾಷಣ, ಚರ್ಚೆ-ಸಂವಾದಗಳಲ್ಲಿ ನಿರಂತರ ಭಾಗಿ, ಆಧುನಿಕ ವಿಜ್ಞಾನ-ತಂತ್ರಜ್ಞಾನ ಮತ್ತು ಸಮಕಾಲೀನ ಶೈಕ್ಷಣಿಕ ಚಿಂತನೆ ಮತ್ತು ಅನುಷ್ಠಾನಗಳ ಕುರಿತು ವಿಶೇಷ ಆಸಕ್ತಿ. ಕೃತಿಗಳು : ಡೇಟಾ ದೇವರು ಬಂದಾಯ್ತು ...

READ MORE

Related Books