ನೆಲದ ಹುಣ್ಣು

Author : ಪ್ರವೀಣ್ ಬಿ.ಎಂ

Pages 88

₹ 80.00




Year of Publication: 2019
Published by: ಸಂವಹನ ಪ್ರಕಾಶನ
Address: ಶಿವರಾಮ ಪೇಟೆ, ಮೈಸೂರು

Synopsys

ಜೀವಸಂಕುಲವನ್ನು ಕಾಡುತ್ತಿರುವ ಸಾವು-ನೋವು , ಹರಿತ ಮು‌ಳ್ಳಿನ ಕೆಳಗೆ ಇಂದಿನ ಮನುಷ್ಯ ಬದುಕಬೇಕಾಗಿರುವ ಬಿಕ್ಕಟ್ಟು, ಸಂಕಟ ಲೇಖಕ ಪ್ರವೀಣ್ ಬಿ.ಎಂ ಅವರ ‘ನೆಲದ ಹುಣ್ಣು’ ಕವನಸಂಕಲನದಲ್ಲಿ ಅಮೂರ್ತವಾಗಿ ಮಡುಗಟ್ಟಿ ನಿಂತಿದೆ. ಈ ಸಂಕಲನದಲ್ಲಿ ಮೂವತ್ತೊಂಬತ್ತು ಕವಿತೆಗಳಿವೆ. ಇಲ್ಲಿಯ ಎಲ್ಲಾ ಕವಿತೆಗಳು ವಾಚ್ಯದ ಸಾಧಾರಣ ಗುಣವನ್ನು ಮೀರಿ ಸೂಚವೂ ಧ್ವನಿಪೂರ್ಣವೂ ಆದ ಬಂಧುರ ರಚನೆಯಾಗಿರುವುದು ವಿಶೇಷವಾಗಿದೆ. ಇನ್ನು ಜೀವಸಂಕುಲ ಹಿಂಸೆಯಿಂದ ಮನುಕುಲ ಬಿಡುಗಡೆಯಾಗುವ ಪ್ರಶ್ನೆಗೆ ಬುದ್ಧನ ಜೀವಪರ ಕಾಳಜಿ, ಸ್ವಸ್ಥ -ನಿಶ್ಚಿಂತ-ಶಾಂತಸ್ಥಿತಿ ಪರ್‍ಯಾಯವೆಂಬುದನ್ನು ಇಲ್ಲಿಯ ಕವಿತೆಗಳು ಧ್ವನಿಸುತ್ತವೆ. ದೇವರು ಧರ್ಮದ ಹೆಸರಿನಲ್ಲಿ ನಡೆಯುವ ಬೂಟಾಟಿಕೆ: ಮತಾಂಧತೆಯ ದಳ್ಳುರಿಯಲ್ಲಿ ನಲುಗುತ್ತಿರುವ ಅಮಾಯಕರ ಅಸಹಾಯಕ ಸ್ಥಿತಿಯನ್ನು ಕಾವ್ಯ ಆಳವಾದ ವಿಷಾದದದಲ್ಲಿ ಅನಾವರಣಗೊಳಿಸಿದೆ. ಸಮಾಜದಲ್ಲಿ ಸರ್ವತ್ರ ಸಾಂಕ್ರಾಮಿಕ ರೋಗದಂತೆ ಹರಡಿರುವ ಕೊಳಕುತನದ ವಾಸ್ತವ ಸ್ಥಿತಿಯನ್ನು ವರ್ಣಿಸುತ್ತಲೇ ಮನುಷ್ಯನ ಬಹುಮುಖಿಯಾದ ಧೂರ್ತತನ ಬಯಲಾಗುವ ಕಾಲ ಹತ್ತಿರ ಬರುತ್ತಿದೆ ಎನ್ನುವುದನ್ನು ಇಲ್ಲಿನ ಕವಿತೆಗಳಲ್ಲಿ ಕಾಣಬಹುದಾಗಿದೆ.

About the Author

ಪ್ರವೀಣ್ ಬಿ.ಎಂ
(10 March 1983)

ಲೇಖಕ ಪ್ರವೀಣ್ ಬಿ.ಎಂ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬಿಳಸನೂರಿನವರು. 1983 ಮಾರ್ಚ್ 10 ರಂದು ಜನನ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ರಂಗಭೂಮಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಬುಗುರಿ (ನಿ.ಮೈಮ್ ರಮೇಶ್), ನಿರಾಕರಣ (ನಿ.ಮೈಮ್ ರಮೇಶ್), ಥ್ಯಾಂಕ್ಯೂ ಮಿಸ್ಟರ್ ಗ್ಲಾಡ್ (ನಿ.ಮೈಮ್ ರಮೇಶ್), ಹೆಣದ ಬಟ್ಟೆ (ಪ್ರೇಮಚಂದ್ರ ಕಾದಂಬರಿ ಆಧಾರಿತ, ನಿರ್ದೇಶನ ಜನ್ನಿ), ಜಲಗಾರ (ನಿ. ಕೃಷ್ಣ ಜನಮನ), ಸಾಂಬಶಿವ ಪ್ರಹಸನ(ಡಾ.ಚಂದ್ರಶೇಖರ ಕಂಬಾರ, ನಿ.ಶೇಖ್ ಅಹಮದ್) ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ಕೃತಿಗಳು: ನೆಲಮುಟ್ಟದ ಕೂಗು, ನೆಲದ ಹುಣ್ಣು, ಮಾತಿಲ್ಲ ಗುರುತು ಇದೆ ...

READ MORE

Related Books