ನೆಲದೊಡಲ ಚಿಗುರು

Author : ನಾರಾಯಣ ರೆಡ್ಡಿ

Pages 168

₹ 203.00




Year of Publication: 2013
Published by: ನವಕರ್ನಾಟಕ ಪಬ್ಲಿಕೇಶನ್‌ ಪ್ರೈವೇಟ್‌ ಲಿಮಿಟೇಡ್‌

Synopsys

ನೆಲದೊಡಲ ಚಿಗುರು ನಾರಾಯಣ ರೆಡ್ಡಿ ಅವರ ಬದುಕು, ಚಿಂತನೆಯನ್ನು ಒಳಗೊಂಡಿರುವ ಕೃತಿಯಾಗಿದೆ. ಈ ಕೃತಿಯು “ಸಿದ್ದವನಹಳ್ಳಿ ಕೃಷ್ಣಶರ್ಮ ಸ್ಮಾರಕ ಸಾಹಿತ್ಯ ಪ್ರಶಸ್ತಿ”ಯನ್ನು 2013 ರಲ್ಲಿ ಪಡೆದುಕೊಂಡಿದೆ. ಕೃಷಿಯನ್ನು ನಂಬಿ ಬದುಕುತ್ತಿದ್ದ ದೇಶ ನಮ್ಮದು. ಅದೊಂದು ಸಂಸ್ಕೃತಿಯೇ ಆಗಿದ್ದುದರಿಂದ ಜನರಿಗೆ ಅದೊಂದು ಜೀವನಮಾರ್ಗವಾಗಿತ್ತು. ಆದರೆ, ಬಹುರಾಷ್ಟ್ರೀಯ ಕಂಪನಿಗಳ ಕುತಂತ್ರದಿಂದ, ಸರ್ಕಾರದ ತಿರಸ್ಕಾರದಿಂದ ಇಂದು ಕೃಷಿಯು ತನ್ನ ಹಿಂದಿನ ವೈಭವ ಕಳೆದುಕೊಂಡಿದೆ. ಕೃಷಿಯೆಂದರೆ ತಿರಸ್ಕಾರದಿಂದ ಕಾಣುವ, ಮೈನೋಯದ ಗಿಲೀಟು ವೃತ್ತಿಗಳನ್ನು ಹುಡುಕಿಕೊಂಡಿರುವ ಇಂದಿನ ಬಹುಪಾಲು ಯುವಕರಿಗೆ ಕೃಷಿಯೆಂದರೆ ಎಲ್ಲೂ ಸಲ್ಲದವರು ಸೇರುವ ಜಾಗ ! ಆದರೆ, ಶ್ರಮಸಂಸ್ಕೃತಿಯನ್ನೇ ಜೀವನದ ಧ್ಯೇಯವನ್ನಾಗಿಸಿಕೊಂಡು ಚೆಂದದ ಬದುಕು ಕಟ್ಟಿಕೊಂಡ, ಜಗತ್ತಿಗೆ ದಾರಿದೀಪವಾದ ಮಹನೀಯರು ಈ ಕ್ಷೇತ್ರದಲ್ಲಿ ಹಲವರಿದ್ದಾರೆ. ಅವರಲ್ಲಿ ಪ್ರಮುಖರು ಸಾವಯವ ಕೃಷಿತಜ್ಞ, ನಾಡೋಜ ಡಾ. ಎಲ್. ನಾರಾಯಣ ರೆಡ್ಡಿ. ಎಲ್ಲರ ಪ್ರೀತಿಯ ವರ್ತೂರು ನಾರಾಯಣ ರೆಡ್ಡಿ. ನಾರಾಯಣ ರೆಡ್ಡಿಯವರು ‘ಶ್ರೀ’ ಪದ್ಧತಿಯಲ್ಲಿ ಭತ್ತ ಬೆಳೆಯುವುದನ್ನು ಈ ನಾಡಿಗೆ ಪರಿಚಯಿಸಿದವರು. ಕೃಷಿಯಲ್ಲಿ ಅವರು ಅನೇಕ ಸಂಶೋಧನೆಗಳನ್ನು, ಪ್ರಯೋಗಗಳನ್ನು ನಡೆಸಿದ್ದಾರೆ.

About the Author

ನಾರಾಯಣ ರೆಡ್ಡಿ

ಕೃಷಿಕರಾದ ನಾರಾಯಣ ರೆಡ್ಡಿ ಅವರು ಸಾವಯವ ಕೃಷಿಯ ಪ್ರಾಮುಖ್ಯತೆ, ಅಗತ್ಯತೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಪಾದಿಸಿ ನುಡಿದಂತೆಯೇ ನಡೆದವರು. ಸಾವಯವ ಕೃಷಿಗೆ ರಾಜ್ಯದಲ್ಲಿ ನೆಲೆ, ಸ್ಥೈರ್ಯ ಎರಡೂ ರೂಪಿಸಿಕೊಟ್ಟವರು. ಪ್ರಗತಿಪರ ರೈತ ಮತ್ತು ಕೃಷಿತಜ್ಞರಾಗಿದ್ದ ಅವರು ಮೂಲತಃ ದೊಡ್ಡಬಳ್ಳಾಪುರದವರು. ಇವರು ಸಾವಯವ ಕೃಷಿಯ ಸಾಧನೆಗಾಗಿ 'ನಾಡೋಜ ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ. ಕೃಷಿಗೆ ಸಂಬಂಧಿಸಿದಂತೆ ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ ಮಾತ್ರವಲ್ಲ ಕೃತಿಗಳನ್ನು ರಚಿಸಿದ್ದಾರೆ. ‘ಸುಸ್ಥಿರ ಕೃಷಿ ಪಾಠಗಳು’ ಅವರ ಪ್ರಕಟಿತ ಕೃತಿ. ...

READ MORE

Related Books