ನೆಲಕ್ಕೆ ಬಿದ್ದ ನಕ್ಷತ್ರ

Author : ಅಜರುದ್ದೀನ್ ಎ ಮರಿಯಮ್ಮನಹಳ್ಳಿ

Pages 92

₹ 100.00




Year of Publication: 2020
Published by: ಮೇಘ ಪಬ್ಲಿಕೇಷನ್ಸ್
Address: ನಿವೇಶನ 419, ಮನೆ ಸಂಖ್ಯೆ.119, 4ನೇ ಅಡ್ಡರಸ್ತೆ, ರಾಜಗೋಪಾಲನಗರ ಬೆಂಗಳೂರು-560 058
Phone: 08022340799

Synopsys

ಲೇಖಕ ಅಜರುದ್ದೀನ್ ಎ ಮರಿಯಮ್ಮನಹಳ್ಳಿ ಅವರು ಬರೆದ ಲೇಖನಗಳ ಸಂಕಲನ ’ನೆಲಕ್ಕೆ ಬಿದ್ದ ನಕ್ಷತ್ರ’. ಒಟ್ಟು 23 ಲೇಖನಗಳು ಸಂಕಲನಗೊಂಡಿವೆ. ಕೃತಿಗೆ ಮುನ್ನುಡಿ ಬರೆದ ನಾಗಣ್ಣ ಕಿಲಾರಿ,’ವಿಭಿನ್ನ ನೆಲೆಯ, ದೃಷ್ಟಿಕೋನದ ಬರಹಗಳು ಇಲ್ಲಿವೆ. ಕನ್ನಡ ಪತ್ರಿಕೋದ್ಯಮ, ಸಾಹಿತ್ಯ ಪತ್ರಿಕೆ, ಅಜರ್-ಪತ್ರಿಕೆ ಮತ್ತು ಸಂಪಾದಕೀಯ ಬರಹಗಳೂ ಇವೆ. ಅಲ್ಲದೆ, ಪಿ. ಲಂಕೇಶ, ಪೂರ್ಣಚಂದ್ರ ತೇಜಸ್ವಿ, ನಟರಾಜ್ ಹುಳಿಯಾರ್, ಜಯಂತ್ ಕಾಯ್ಕಿಣಿ ಹಾಗೂ ಗಾಂಧಿ, ಲೋಹಿಯಾ, ಅಂಬೇಡ್ಕರ್‌ ಅವರ ಬರಹವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ದೊಡ್ಡ ಬರಹಗಾರನಿಗೆ ಇರಬೇಕಾದ ಸೂಕ್ಷತೆ, ಒಳನೋಟ ಅಜರುದ್ದೀನ್ ಅವರು ಹೊಂದಿದ್ದಾರೆ. ಎಲ್ಲ ಅನುಭವಗಳು ಆ ಕ್ಷಣ ನೋವು, ದು:ಖ ನೀಡಬಹುದು. ನೆನಪಿನ ಕವಾಟ ಸೇರುವ ಎಲ್ಲ ಅನುಭವಗಳು ಅನಂತರ ಮಧುರತೆ ಮುಗುಳ್ಳಗೆಯನ್ನು ಮೂಡಿಸುತ್ತವೆ. ಅಂತೆ ಈ ಬರಹಗಳು.’ ಎಂದು ಪ್ರಶಂಸಿದ್ದಾರೆ.

 


 

About the Author

ಅಜರುದ್ದೀನ್ ಎ ಮರಿಯಮ್ಮನಹಳ್ಳಿ

ಲೇಖಕ ಅಜರುದ್ದೀನ್ ಎ ಮರಿಯಮ್ಮನಹಳ್ಳಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯವರು. ಪ್ರಸ್ತುತ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ.  ಕೃತಿಗಳು: ನೆಲಕ್ಕೆ ಬಿದ್ದ ನಕ್ಷತ್ರ (ಕವನ ಸಂಕಲನ) ...

READ MORE

Related Books