ನೆಮ್ಮದಿ ಕುಟುಂಬ

Author : ಸಿ.ಆರ್. ಚಂದ್ರಶೇಖರ್

Pages 40

₹ 50.00




Year of Publication: 2019
Published by: ಜನಪ್ರಕಾಶನ
Address: #8, 11ನೇ ಮುಖ್ಯರಸ್ತೆ, 39ನೇ ಎ ಕ್ರಾಸ್, 4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು- 560041
Phone: 9731105526

Synopsys

‘ನೆಮ್ಮದಿ ಕುಟುಂಬ’ ಕೆಲವು ಸಲಹೆಗಳು ಡಾ.ಸಿ.ಆರ್. ಚಂದ್ರಶೇಖರ್ ಅವರ ಪ್ರಶ್ನೋತ್ತರ-ಸಂದರ್ಶನ ಸಂಕಲನ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಇವೇ ಮೊದಲಾದ ನಾನಾ ಬಗೆಯ ಸಮಸ್ಯೆಗಳಿಂದ ನರಳುತ್ತಿರುವ ಸಮಾಜ ನಮ್ಮದು. ಇಂತಹ ಸಮಾಜದಲ್ಲಿ ಸಹಜವಾಗಿ ಜನರಲ್ಲಿ ಮಾನಸಿಕ ಸಮಸ್ಯೆಗಳೂ ಹೆಚ್ಚು. ದುರಾದೃಷ್ಟವಶಾತ್ ನಮ್ಮಲ್ಲಿ ಮಾನಸಿಕ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳನ್ನು ಸೂಚಿಸುವ ಮಾನಸಿಕ ವೈದ್ಯರ ಸಂಖ್ಯೆ ವಿರಳ. ಇಂತಹ ಕೊರತೆಯನ್ನು ನೀಗುವ ನಿಟ್ಟಿನಲ್ಲಿ ಡಾ.ಸಿ.ಆರ್. ಚಂದ್ರಶೇಖರ್ ರವರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯಲ್ಲಿ ಸುದೀರ್ಘಕಾಲ ಮಾನಸಿಕ ವೈದ್ಯರಾಗಿ ದುಡಿದವರು ಡಾ.ಸಿ.ಆರ್. ಚಂದ್ರಶೇಖರ್ ರವರು ಈ ಕೃತಿಯಲ್ಲಿ ತಮ್ಮ ವೃತ್ತಿ ಅನುಭವಗಳೊಂದಿಗೆ ನೆಮ್ಮದಿಯ ಕುಟುಂಬಕ್ಕಾಗಿ ಹಲವು ಸಲಹೆಗಳನ್ನು ನೀಡಿದ್ದಾರೆ.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books