ನೆನಪಿನಂಗಳ

Author : ಟಿ. ನಾಗರಾಜು

Pages 148

₹ 130.00




Year of Publication: 2018
Published by: ಟಿ. ನಾಗರಾಜು

Synopsys

ಲೇಖಕ ಟಿ. ನಾಗರಾಜು ಅವರ ಅನುಭವ ಲೇಖನ ಕೃತಿ ʻನೆನಪಿನಂಗಳʼ. ಪುಸ್ತಕವು ಕರ್ನಾಟಕ ಸಂಗೀತ ಲೋಕದ ವಿವಿಧ ಆಯಾಮಗಳನ್ನು ಹೇಳುತ್ತಾ ವೇದ ಕಾಲದ ಸಾಮವೇದದಿಂದ ಆರಂಭಿಸಿ ಈಗಿನ ಕಾಲದವರೆಗಿನ ಸಂಗೀತ ಪರಂಪರೆಯನ್ನು ಅವಲೋಕಿಸುತ್ತದೆ. ಜೊತೆಗೆ ಸಂಘಟಕ- ಕಾರ್ಯಕರ್ತನ ಕೆಲವು ಪ್ರಸಂಗಗಳು ಹಾಗೂ ಚಾಮರಾಜನಗರದ ಸಾಂಸ್ಕೃತಿಕ ವೈಶಿಷ್ಟ್ಯತೆಗಾಳನ್ನು ಹೇಳುತ್ತದೆ. ಪುಸ್ತಕದ ಮುನ್ನುಡಿಯಲ್ಲಿ ಎಂ.ಆರ್.ವಿ. ಪ್ರಸಾದ್‌, “ಶ್ರೇಷ್ಠ ವಾಗ್ಗೇಯಕಾರ, ಶ್ರೀ ತ್ಯಾಗರಾಜರ ಸ್ಕೂಲ ಪರಿಚಯ ಮತ್ತು ಅವರ ಸಂಗೀತ ಸಾಧನೆಗಳೊಂದಿಗೆ ಪುಸ್ತಕ ಆರಂಭಗೊಳ್ಳುತ್ತದೆ. ಸಂಗೀತ ಪಿತಾಮಹ ಶ್ರೀ ಪುರಂದರದಾಸರ ಹಿರಿಮೆಯನ್ನು ಪ್ರಸ್ತಾಪಿಸುತ್ತಾ, ಲೇಖಕ ಟಿ. ನಾಗರಾಜು ಅವರು ತಮ್ಮ ಕೆಲವು ಚಿಂತನೆಗಳನ್ನು ಸೂಕ್ತವಾಗಿಯೇ ಓದುಗರ ಮುಂದೆ ತೆರೆದಿಡುತ್ತಾರೆ. ಎಲ್ಲ ವೇದಿಕೆಗಳಲ್ಲಿ ತ್ರಿಮೂರ್ತಿ (ಶ್ರೀ ತ್ಯಾಗರಾಜರು, ಶ್ರೀ ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ರೀ ಶ್ಯಾಮಾಶಾಸ್ತಿ)ಗಳ ಮತ್ತು ಅವರ ನಂತರದ ವಾಗ್ಗೇಯಕಾರರ ಕೃತಿಗಳನ್ನು ಪ್ರಮುಖವಾಗಿ ಪ್ರಸ್ತುತಪಡಿಸುವಂತೆ, “ಕರ್ನಾಟಕ ಸಂಗೀತ ಕ್ಷೇತ್ರದ ಪಿತಾಮಹ'ನೆಂದೇ ಗುರುತಿಸಲ್ಪಡುವ ಶ್ರೀ ಪುರಂದರದಾಸರ ಕೃತಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿಲ್ಲವೆಂಬ ಪ್ರಾಮಾಣಿಕ ಕಳಕಳಿಯನ್ನು ಶ್ರೀಯುತ ಟಿ. ನಾಗರಾಜು ಅವರು ಗಮನಿಸಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಶ್ರೀ ಪುರಂದರದಾಸರ ಕೃತಿಗಳನ್ನು ಸಂಶೋಧಿಸಿ, ಪರಿಷ್ಕರಿಸಿ, ವೇದಿಕೆಗಳಲ್ಲಿ, ಮುದ್ರಿಕೆಗಳಲ್ಲಿ ಅವುಗಳನ್ನು ಇನ್ನಷ್ಟು ವ್ಯಾಪಕವಾಗಿ ಬಳಸುವಂತಾಗಬೇಕೆಂಬ ತಮ್ಮ ಅದಮ್ಯ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಅದರ ಜೊತೆಗೇ, 'ಸಮಗ್ರ ಕರ್ನಾಟಕ ಸಂಗೀತದ ಏಳ್ಗೆಗೆ ಕನ್ನಡ ಸಂಗೀತ, ಕನ್ನಡ ಕೃತಿಗಳು ಹಾಗೂ ದಾಸ ಶ್ರೇಷ್ಠರ ಕೃತಿಗಳನ್ನು ಮೀರಿ ಕರ್ನಾಟಕ ಶಾಸ್ತ್ರೀಯ ಸಂಗೀತವು ಬೆಳೆಯುವ ಆವಶ್ಯಕತೆ ಇದೆ' ಎಂಬ ಎಚ್ಚರಿಕೆಯನ್ನೂ ಅವರು ನೀಡುತ್ತಾರೆ. ಕರ್ನಾಟಕ ಸಂಗೀತ ಜಗತ್ತಿನ ವಸ್ತುಸ್ಥಿತಿಯ ವಿಶ್ಲೇಷಣೆಯ ಜೊತೆಗೆ, ಸಂಗೀತ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹತ್ತಾರು ಉಪಯುಕ್ತ ಸಲಹೆಗಳ ಪಟ್ಟಿಯನ್ನೇ ಲೇಖಕರು ನೀಡಿದ್ದಾರೆ” ಎಂದು ಹೇಳಿದ್ಧಾರೆ.

About the Author

ಟಿ. ನಾಗರಾಜು

ಲೇಖಕ ಟಿ. ನಾಗರಾಜು ಅವರು ಕರ್ನಾಟಕ ಶಾಸ್ರ್ತೀಯ ಸಂಗೀತಗಾರರು. ಇವರ ಸಂಗೀತದ ಮೊದಲ ಗುರು ತಾಯಿ ಪಾರ್ವತಿ. ಸಂಗೀತ ಕ್ಷೇತ್ರದಲ್ಲಿ ತಮ್ಮ ಅನುಭವಗಳ ಕುರಿತು ಹಲವಾರು ಪುಸ್ತಕಗಳನ್ನು ಬರೆದಿರುತ್ತಾರೆ. ಎಲ್.ಐ..ಸಿ. ಕಂಪೆನಿಯಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ನಿವೃತ್ತಿಯನ್ನು ಹೊಂದಿದ್ದಾರೆ. ಕೃತಿಗಳು: ʻಕೂಗಿ ಹೇಳುತಿದೆ ಅಂತರಾಳʼ, ʻಸವಿನೆನಪುಗಳುʼ, ʻನೆನಪಿನಂಗಳʼ, ʻಅಡಿಗಡಿಗೂ ಗುರುವಂದನೆʼ ಇತ್ಯಾದಿ... ...

READ MORE

Related Books