ನೆನಪಿನ ಓಣಿಯೊಳಗ ಮಿನುಗುತಾವ ದೀಪ

Author : ಅಹಿತಾನಲ (ನಾಗ ಐತಾಳ)

Pages 200

₹ 150.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

 

ನೆನಪಿನ ಓಣಿಯೊಳಗ ಮಿನುಗುತಾವ ದೀಪ... ಕೃತಿಯು ಕವಿ, ಸಾಹಿತಿ ಜಿ.ಎಸ್.ಶಿವರುದ್ರಪ್ಪ  ಅವರ ವ್ಯಕ್ತಿ-ಶಕ್ತಿ: ಕೆಲ ನೋಟಗಳನ್ನು  ಸಂಪಾಸಕರಾದ  ನಾಗ ಐತಾಳ(ಆಹಿತಾನಲ) ನಳಿನಿ ಮೈಯ ಅವರು ಮಾಡಿದ್ದಾರೆ. 

ಜಿ. ಎಸ್. ಶಿವರುದ್ರಪ್ಪನವರು  ಅಮೆರಿಕಕ್ಕೆ ಹೋದಾಗ ಅಮೆರಿಕ ಕನ್ನಡಿಗರೊಡನೆ ನಡೆಸಿದ ಸಂವಾದಗಳು,  ಅಮೆರಿಕದ ಕನ್ನಡಿಗರಲ್ಲಿ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಿವೆ. ಮಾತ್ರವಲ್ಲ; ಅಮೆರಿಕದಿಂದ ಹಲವು ಸಾಹಿತ್ಯಕ ಕೃತಿಗಳು ಪ್ರಕಟವಾಗಲು ಎಡೆಮಾಡಿಕೊಟ್ಟಿದೆ.  ಅಮೆರಿಕ ಕನ್ನಡಿಗರಲ್ಲಿ ಸುಪ್ತವಾಗಿ ಹರಿಯುತ್ತಿದ್ದ ಕನ್ನಡದ ತುಡಿತವನ್ನು ಗುರುತಿಸಿ, ಅದು ಹೊರಗೆಡಹಲು ಕಾರಣವಾದವರಲ್ಲಿ ಜಿಎಸ್‌ಎಸ್ ಪ್ರಮುಖರು.

ಈ ಸಂದರ್ಭದಲ್ಲಿ ಮೂಡಿದ ವೈಶಿಷ್ಟ್ಯಪೂರ್ಣವಾದ ಅನೇಕ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. .ಶಿವರುದ್ರಪ್ಪನವರು ತಮ್ಮ  ಕಾವ್ಯಸೂರ್ತಿಯನ್ನು, ಅದರ ಹಿಂದಿರುವ ಅಗೋಚರ ಶಕ್ತಿಯನ್ನು ತಾವೇ ಬೆರಗುಗಣ್ಣಿನಿಂದ ನೋಡಿದ ಕವನಗಳ ಅವಲೋಕನದಂಥ ಅಪರೂಪದ ವಸ್ತುವಿನಿಂದ ಹಿಡಿದು, ವಿಸ್ಮಯ ತಾಳಿದ ಲೇಖನದವರೆಗೆ ಬಗೆಬಗೆಯ ರೀತಿಯಲ್ಲಿ ಶಿವರುದ್ರಪ್ಪನವರ ಕಾವ್ಯ ಮಾಧುರ್ಯವನ್ನು ಸವಿದು ಇತರರಿಗೆ ಉಣಬಡಿಸುವ ಪ್ರಯತ್ನಗಳು ಇಲ್ಲಿವೆ.

About the Author

ಅಹಿತಾನಲ (ನಾಗ ಐತಾಳ)
(05 October 1932 - 29 October 2022)

ಅಹಿತಾನಲ ಎಂಬ ಕಾವ್ಯನಾಮದಿಂದ ಬರೆಯುವ ವಿಜ್ಞಾನಿ ನಾಗ ಐತಾಳ ಅವರು ಜನಿಸಿದ್ದು 1932ರ ಅಕ್ಟೋಬರ್‍ 5ರಂದು. ಮೂಲತಃ ಉಡುಪಿ ಜಿಲ್ಲೆಯ ಕೋಟದವರಾದ ಅವರು ಸದ್ಯ ಕ್ಯಾಲಿಫೋರ್ನಿಯಾದ ಅರ್‍ಕಾಡಿಯಾದ ನಿವಾಸಿ ಆಗಿರುವ ಐತಾಳರು ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿಯೂ ಪದವಿ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಅವರು ಅಧ್ಯಯನ ಮಾಡಿದ್ದಾರೆ.  ಭಾರತದಲ್ಲಿ ಪಿಎಚ್.ಡಿ. ಪದವಿ ಪಡೆದ ನಂತರ ಬಯೋಕೆಮಿಸ್ಟ್ರಿಯಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ಕೆನಡಾಕ್ಕೆ ಹೋದರು. ಅದಾದ ಮೇಲೆ ಅಮೆರಿಕೆಗೆ ಹೋದ ಅವರು 1975ರಿಂದ 2001ರ ವರೆಗೆ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಪ್ರಾಧ್ಯಾಪಕರಾಗಿ ...

READ MORE

Related Books