ನೆನಪಿನಂಗಳದಲ್ಲಿ ಶಂಕರ್ ನಾಗ್

Author : ಗಣೇಶ್‌ ಕಾಸರಗೋಡು

Pages 200

₹ 140.00




Year of Publication: 2009
Published by: ಅಮ್ಮ ಪ್ರಕಾಶನ
Address: 37/19, ಬಿಎಂಶ್ರೀ ಅಡ್ಡರಸ್ತೆ, ರಾಜೀವಗಾಂಧಿ ಮುಖ್ಯರಸ್ತೆ, ಜರಗನಹಳ್ಳಿ, ಬೆಂಗಳೂರು-78

Synopsys

ಪತ್ರಕರ್ತ ಗಣೇಶ್ ಕಾಸರಗೋಡು ಬರೆದಿರುವ ನಟ, ನಿರ್ದೇಶಕ ಶಂಕರ್‌ನಾಗ್ ಕುರಿತು ’ನೆನಪಿನಂಗಳದಲ್ಲಿ ಶಂಕರ್ ನಾಗ” ಪುಸ್ತಕವು ಹಲವು ಕಾರಣಗಳಿಗಾಗಿ ವಿಶೇಷ. ಈ  ಪುಸ್ತಕ ಈಗ ಬ್ರೈಲ್ ಲೀಪಿಯಲ್ಲಿ ಮುದ್ರಣಗೊಂಡಿದೆ.

ಕನ್ನಡದ ಶ್ರೇಷ್ಠ ನಿರ್ದೇಶಕ, ನಟನೊಬ್ಬನ ಸಾಧನೆಯನ್ನು ಅಂಧರು ಓದುವಂತಾಗಿದೆ. ಚಿತ್ರೋದ್ಯಮವನ್ನೇ ಬೆರಗುಗೊಳಿಸುವ ಈ ಪುಸ್ತಕವು ಕನ್ನಡ ಚಿತ್ರರಂಗದ ಸಾಕಷ್ಟು ಹಿರಿಮೆ ಗರಿಮೆಗಳನ್ನೂ, ಅನುಭವಗಳನ್ನು ಬಿತ್ತರಿಸುವಂತದ್ದು. ಶಂಕರ್ ನಾಗ್ ಅವರ ಕಾರ್ಯ ವೈಖರಿ, ನಿರ್ದೇಶನ, ಚಿತ್ರರಂಗವನ್ನು ಕಟ್ಟಿಬೆಳೆಸಿದ ಪರಿ, ಜನರೊಡನೆ ಬೆರೆತುಹೋದ ಅಮೂಲ್ಯ ಕ್ಷಣಗಳ ಬಗ್ಗೆ ಈ ಪುಸ್ತಕ ಕಟ್ಟಿ ಕೊಡುತ್ತದೆ.

 

About the Author

ಗಣೇಶ್‌ ಕಾಸರಗೋಡು

ಗಣೇಶ್ ಕಾಸರಗೋಡು ಹುಟ್ಟಿದ್ದು ಕಾಸರಗೋಡಿನಲ್ಲಿ ಓದಿದ್ದೂ ಅಲ್ಲೇ. ಎಂ.ಎ. (ಕನ್ನಡ) ಪದವಿಯಲ್ಲಿ ರ್‍ಯಾಂಕ್ ವಿಜೇತರು. ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿದ್ದರು. ನಂತರ ಬಂದಿದ್ದು ಪತ್ರಿಕೋದ್ಯಮಕ್ಕೆ. ಮೊದಲು 'ಚಿತ್ರ ದೀಪ', ನಂತರ 'ಚಿತ್ರ ತಾರಾ', ಆ ನಂತರ 'ಅರಗಿಣಿ'. ಕಾಲಾನುಕ್ರಮದಲ್ಲಿ ಸಂಯುಕ್ತ ಕರ್ನಾಟಕ', 'ಕರ್ಮವೀರ', 'ವಿಜಯ ಕರ್ನಾಟಕ' ದಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ, ಸದ್ಯಕ್ಕೆ 'ಸುವರ್ಣ ಟೈಂಸ್ ಆಫ್ ಕರ್ನಾಟಕ' ದಲ್ಲಿ ಅಂಕಣಕಾರ. ಪತ್ರಿಕೋದ್ಯಮದ ಸೇವೆ ಗುರುತಿಸಿ - ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ , ಮಂತ್ರಾಲಯದ ವಿಜಯ ವಿಠಲ ಪ್ರಶಸ್ತಿ , ಪತ್ರಕರ್ತರ ವೇದಿಕೆ ಪ್ರಶಸ್ತಿ , ...

READ MORE

Related Books