ನೆನಪಿನೋಣಿಯಲ್ಲಿ

Author : ಹೇಮಾ ಹೆಬ್ಬಗೋಡಿ

Pages 320

₹ 325.00




Year of Publication: 2022
Published by: ಅನಿಕೇತನ ಪುಸ್ತಕ
Address: ಭವಾನಿ, ಹೇರಿಕುದ್ರು ಅಂಚೆ, ಕುಂದಾಪುರ ತಾಲೂಕು, ಉಡುಪಿ- 576230
Phone: 8747022581

Synopsys

ಲೇಖಕಿ ಹೇಮಾ ಹೆಬ್ಬಗೋಡಿ ಅವರ ಅನುವಾದಿತ ಕೃತಿ ʻನೆನಪಿನೋಣಿಯಲ್ಲಿ: ಅಕಿರಾ ಕುರೋಸೋವಾ ಆತ್ಮಕತೆʼ. ಚಿತ್ರಜಗತ್ತಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಾನ್‌ ನಿರ್ದೇಶಕ ಎಂದೇ ಮನ್ನಣೆ ಪಡೆದಿರುವ ಜಪಾನಿನ ಚಿತ್ರ ನಿರ್ದೇಶಕ ಅಕಿರಾ ಕುರೋಸೋವಾ. 5 ದಶಕಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಇವರು ಇಂದಿಗೂ ಸಿನಿಮಾ ಪ್ರಿಯರಿಗೆ ಅಚ್ಚುಮೆಚ್ಚು ಹಾಗೂ ದಾರಿದೀಪ. ʻರಾಶೋಮನ್‌ʼ ಇವರ ಅತ್ಯಂತ ಪ್ರಸಿದ್ದಿಯನ್ನು ಪಡೆದ ಹಾಗೂ ಹೆಸರನ್ನೂ ತಂದುಕೊಟ್ಟ ಚಿತ್ರವಾಗಿದೆ. ಹೀಗೆ ಸಹ ನಿರ್ದೇಶಕನಾಗಿ ಚಿತ್ರ ರಂಗ ಪ್ರವೇಶಿಸಿ ಬಳಿಕ ಸುಮಾರು 33 ಚಿತ್ರಗಳನ್ನು ಮಾಡಿ ಜನಮನ್ನಣೆ ಗಳಿಸಿದ ಅಕಿರಾ ಅವರ ಜೀವನ ಕತೆಯನ್ನು ಇಲ್ಲಿ ಹೇಳಲಾಗಿದೆ. ಮಧ್ಯಮ ವರ್ಗದ ಕುಟುಂಬದಿಂದ ಕಲಾವಿದನಾಗಿ ಬಂದ ಬಾಲ್ಯದ ನೆನಪು, ತನ್ನ ಜೀವನಕ್ಕೆ ಅಣ್ಣನ ಪ್ರಭಾವ, ನೋವುಗಳು, ವಿಶ್ವ ಶ್ರೇಷ್ಠ ಸಿನಿಮಾಗಳನ್ನು ನಿರ್ದೇಶಿಸಿದ ಸಾಹಸ, ಜಗತ್ಪ್ರಸಿದ್ದ ಸಿನಿಮಾಕರ್ಮಿಯಾದ ಬಗೆ ಹೀಗೆ ಅಕಿರಾ ಅವರ ಸಂಪೂರ್ಣ ಜೀವನ ಕತೆಯನ್ನು ಹೇಮಾ ಹೆಬ್ಬಗೋಡಿ ಅವರು ಕನ್ನಡಿಗರಿಗೆ ತಲುಪಿಸಿದ್ದಾರೆ.

About the Author

ಹೇಮಾ ಹೆಬ್ಬಗೋಡಿ

ಹೇಮಾ ಹೆಬ್ಬಗೋಡಿ ಅವರು ಕನ್ನಡದಲ್ಲಿ ಎಂ.ಎ. ಹಾಗೂ ಪಿ.ಎಚ್ ಡಿ. ಪದವೀಧರರು. ಕನ್ನಡ ಉಪನ್ಯಾಸಕಿಯಾಗಿ ಹಾಗೂ ಕೆಲವು ಕಾಲ ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬರವಣಿಗೆ ಆಸಕ್ತಿದಾಯಕ ವಿಷಯವಾಗಿದ್ದು, ಇಂಗ್ಲೀಷ್‌ ಹಾಗೂ ಹಿಂದಿಯಿಂದ ಲೇಖನ, ಕತೆ, ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು: ಹೆಸರಿಲ್ಲದ ಹೂ (ಅನುವಾದ), ಉರಿವ ಬನದ ಕೋಗಿಲೆಗಳು (ಅನುವಾದಿತ ಲೇಖನಗಳ ಸಂಗ್ರಹ) ...

READ MORE

Related Books