ನೆನಪು ತೆರೆವ ಕವಿಮನ

Author : ನಯನಾ ಕಾಶ್ಯಪ್

Pages 197

₹ 95.00
Year of Publication: 2006
Published by: ಮೌಲ್ಯ ಪ್ರಕಾಶನ
Address: ನಲ್ಲೂರು-574502, ಕಾರ್ಕಳ ತಾಲೂಕು, ಜಿಲ್ಲೆ ಉಡುಪಿ.
Phone: 9880128871

Synopsys

ವಿಶ್ವದ ಖ್ಯಾತ ಲೇಖಕ ಪಾಬ್ಲೋ ನೆರೂಡ ಅವರ ಆತ್ಮಕಥೆಯ ಸಂಗ್ರಹಾನುವಾದದ ಕೃತಿ-ನೆನಪು ತೆರೆವ ಕವಿಮನ. ಲೇಖಕಿ ನಯನಾ ಕಾಶ್ಯಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಖ್ಯಾತ ಲೇಖಕ ಜಿ. ರಾಜಶೇಖರ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ದಕ್ಷಿಣ ಅಮೆರಿಕ ಖಂಡದ ಚಿಲಿ ದೇಶದ ಕವಿ ಪಾಬ್ಲೋ ನರೂಡ ಕನ್ನಡ ಕಾವ್ಯ ಪ್ರೇಮಿಗಳಿಗೆ ಅಪರಿಚಿತನಲ್ಲ. ನರೂಡನ ಆತ್ಮಕಥೆ ‘ಮೆವ್ವಾ’ ಆಯ್ದ ಭಾಗಗಳ ಭಾಷಾಂತರವಾಗಿದೆ ಈ ಕೃತಿ. ಕನ್ನಡ ಮಾತಿನ ಲಯ, ಧ್ವನಿಗಳನ್ನು ತಮ್ಮ ಬರವಣಿಗೆಯಲ್ಲಿ ಯಥಾವತ್ತಾಗಿ ಮೂಡಿಸುವ ಸಾಮರ್ಥ್ಯವನ್ನು ಪಡೆದಿರುವವರು. ಮೂಲ ಕೃತಿಯ ಲವಲವಿಕೆ ಮತ್ತು ತೀವ್ರತೆಗಳನ್ನು ಕನ್ನಡ ನುಡಿಯ ಜಾಯಮಾನಕ್ಕೆ ವ್ಯತ್ಯಯ ಬಾರದಂತೆ ಅನುವಾದಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಕವಿಯ ಕಾಳಜಿ, ನಿಷ್ಕಳಂಕ ಜೀವನೋತ್ಸಾಹ ಮತ್ತು ಮುಗ್ಧತೆ ನೆರೂಡನ ಆತ್ಮಕಥೆ ಸಾದರಪಡಿಸುವ ಈ ಗುಣಗಳನ್ನು ಸ್ವಾರಸ್ಯ ಕೆಡದಂತೆ ಓದುಗರಿಗೆ ಮನಗಾಣಿಸುವುದರಲ್ಲಿ ನಯನಾ ಅವರ ಅನುವಾದ ಸಫಲವಾಗಿದೆ. ನರೂಡನ ಆತ್ಮಕಥೆ ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಕಾವ್ಯದ ಸಹೃದಯಿಗಳಿಗೆ ಮಾತ್ರವಲ್ಲ; ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇರುವ ಎಲ್ಲರಿಗೂ ಸಂತಸ ತರುವಂಥಾದ್ದಾಗಿದೆ’ ಎಂದು ಪ್ರಶಂಸಿಸಿದ್ದಾರೆ.

About the Author

ನಯನಾ ಕಾಶ್ಯಪ್
(04 April 1970)

ಕವಯತ್ರಿ, ಅನುವಾದಕಿ ನಯನಾ ಕಶ್ಯಪ್ ಅವರು 1970 ಏಪ್ರಿಲ್ 24 ರಂದು ಜನಿಸಿದರು. ಖ್ಯಾತ ಕಥೆಗಾರ್ತಿ ’ವೈದೇಹಿ’ಯವರ ಮಗಳು ನಯನಾ ಕಶ್ಯಪ್. ’ಮೆಟ್ಟಿಲ ಹಾದಿ’ ಅವರ ಕವನ ಸಂಕಲನ. ಚಿಲಿಯ ಕವಿ ಪಾಬ್ಲೊನರೂಡಾ ಆತ್ಮಕಥೆ “ನೆನಪು ತೆರೆವ ಕವಿಮನ” ಕೃತಿಯನ್ನು ಅನುವಾದಿಸಿದ್ದಾರೆ. “ಗುಲಾಬಿ ಟಾಕೀಸ್” ವೈದೇಹಿಯವರ ಕಥೆಗಳನ್ನು ಅನುವಾದಿಸಿದ್ದಾರೆ. ’ಜಾತ್ರ’ ವೈದೇಹಿಯವರ ಕೃತಿಯನ್ನು, ಸ್ವಾಮಿರಾಮ ಅವರ ಗಾಸ್ಟೆಲ್ ಆಫ್ ವರ್ಕ್ ’ಕಾಯಕ ಸಿದ್ದಾಂತ’ ಅನುವಾದ ಮಾಡಿದ್ಧಾರೆ. ಗೊರೂರು ಸಾಹಿತ್ಯ ಪ್ರಶಸ್ತಿ, ಕೊಡಗಿನ ಗೌರಮ್ಮ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ಧಾರೆ. ...

READ MORE

Related Books