ನೆರಳಿನ ರೇಖೆಗಳು

Author : ಎಂ.ಎಸ್.ರಘುನಾಥ್

Pages 170

₹ 150.00




Year of Publication: 2017
Published by: ಸಾಹಿತ್ಯ ಅಕಾಡೆಮಿ
Address: ರವೀಂದ್ರ ಭವನ 35, ಫಿರೋಜ್‌ ಶಹಾ ರಸ್ತೆ, ನವದೆಹಲಿ 110001

Synopsys

’ನೆರಳಿನ ರೇಖೆಗಳು’ ಅಮಿತಾವ್ ಘೋಷ್‌ ಅವರ ಪ್ರಸಿದ್ದ ಕೃತಿ ’ದ ಶ್ಯಾಡೋ ಲೈನ್ಸ್’ ನ ಕನ್ನಡ ಅನುವಾದ.  ತರುಣನಾದ ನಿರೂಪಕ, ಅವನ ಸುತ್ತಲಿನವರ ಕಥೆಗಳ ಮೂಲಕ, ಭೌತಿಕ, ರಾಜಕೀಯ ಹಾಗೂ ಕಾಲಾನುಕ್ರಮದ ಜೋಡಣೆಯ ಗಡಿಗಳಲ್ಲಿ, ಕಾಲದ ಮುಖಾಂತರ ಪ್ರಯಾಣಿಸುತ್ತಾನೆ. ಆದರೆ ಅವನು ದೊಡ್ಡವನಾಗುತ್ತಿದ್ದಂತೆ ಅರ್ಧ ನೆನಪಿನಲ್ಲಿದ್ದು, ಹಾಗೂ ಕಾಲ್ಪನಿಕವಾಗಿದ್ದ ಚೂರುಪಾರು ಕಥೆಗಳು ಅವನ ಮನಸ್ಸಿಗೆ ಬರುತ್ತವೆ. ಸಂಕೀರ್ಣವಾದ ಅಂತರ್ ಸಂಪರ್ಕಗೊಂಡ ಜಗತ್ತಿನ ಚಿತ್ರ ಕಟ್ಟಲು ಪ್ರಯತ್ನಿಸುತ್ತಾನೆ. ಅದರಲ್ಲಿ ಸರಹದ್ದು ಅಥವಾ ಗಡಿರೇಖೆಗಳಿಗೆ ಅರ್ಥವಿರುವುದಿಲ್ಲ. ಜನಗಳು ಹಾಗೂ ರಾಷ್ಟ್ರಗಳನ್ನು ವಿಭಜಿಸಲು ಎಳೆಯುವ 'ನೆರಳಿನ ರೇಖೆಗಳು ಮಾತ್ರ ನೆನಪುಗಳು, ಸಂಬಂಧಗಳು ಹಾಗೂ ರೂಪಕಗಳ ಸಂಕೀರ್ಣ ಜಾಲದಿಂದಾಚೆಗೆ, ಅಮಿತಾವ್ ಘೋಷ್ ತೀವ್ರವಾದ ಲವಲವಿಕೆಯುಳ್ಳ ಪ್ರಭಾವಶಾಲಿ ಕಥೆಯೊಂದನ್ನು ಹೆಣೆದಿದ್ದಾರೆ. ರಾಷ್ಟ್ರ ಎಂಬ ವಿಚಾರವೇ ಭ್ರಮೆ ಎಂಬುದನ್ನು ಹೊರಗೆಡವುತ್ತಾ, ನಿಮ್ಮ ಮನೆಯೇ ಹಠಾತ್ತನೆ ನಿಮ್ಮ ಶತ್ರುವಾಗಬಲ್ಲ ಅಸಂಗತ ರೀತಿಯನ್ನು ಇಲ್ಲಿ ಚಿತ್ರಿಸಲಾಗಿದೆ. ಎಂ. ಎಸ್. ರಘುನಾಥ್ ಇದನ್ನು ಕನ್ನಡಕ್ಕೆ ತಂದಿದ್ದಾರೆ. 

 

About the Author

ಎಂ.ಎಸ್.ರಘುನಾಥ್
(08 January 1950)

ಮೂಲತಃ ಮೈಸೂರಿನವರಾದ ಎಂ.ಎಸ್.ರಘುನಾಥ್ ಅವರು ಜನಿಸಿದ್ದು 1950 ಜನವರಿ 8 ರಂದು. ಮೈಸೂರು ಹಾಗೂ ಬೆಂಗಳೂರನಲ್ಲಿ ಶಿಕ್ಷಣ ಪಡೆದಿರುವ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ರಾಜ್ಯದ ಹಲವಾರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ನೆರಳಿನ ರೇಖೆಗಳು ಅನುವಾದಿತ ಕೃತಿಗೆ ಶಿವಮೊಗ್ಗ ಕರ್ನಾಟ ಸಂಘ ಪುಸ್ತಕ ಬಹುಮಾನ ಬಂದಿದೆ. ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ ನೀಲಿಗುಚ್ಚ(ಯೂರೋಪಿಯನ್ ಆಯ್ದ ಕಥೆಗಳ ಅನುವಾದ), ಜವಹರಲಾಲ್‌ ನೆಹರೂ, ಪ್ರವಾಹಕ್ಕೆ ಎದುರಾಗಿ, ನೆರಳಿನ ರೇಖೆಗಳು, ಕರ್ನಲ್‌ಗೆ ಯಾರು ಬರೆಯುವುದಿಲ್ಲ, G.P Rajarathnam, Caught in the world of Binaries ...

READ MORE

Related Books