ನಿಘಂಟು ರಚನಾ ವಿಜ್ಞಾನ

Author : ವಿಲ್ಯಂ ಮಾಡ್ತಾ

Pages 92

₹ 15.00




Year of Publication: 1994
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಭಾಷಾ ಅಧ್ಯಯನದ ಒಂದು ಪ್ರಮುಖ ವಲಯವಾದ ನಿಘಂಟು ವಿಜ್ಞಾನ ಹಾಗೂ ನಿಘಂಟು ರಚನಾ ವಿಜ್ಞಾನಗಳನ್ನು ಶಾಸ್ತ್ರೀಯವಾಗಿ ವಿವೇಚಿಸುವ ಕೃತಿ ಇದಾಗಿದ್ದು , ನಿಘಂಟು ರಚನೆಯ ತಾತ್ವಿಕ ಶೋಧನೆ ಮತ್ತು ನಿಘಂಟು ರಚನೆಯ ಆನ್ವಯಿಕ ನೆಲೆಗಳ ವಿವೇಚನೆಯ ಪ್ರಯತ್ನ ಇಲ್ಲಿದೆ. ನಿಘಂಟು, ಶಬ್ದಕ್ಕೆ ಅರ್ಥ ತಿಳಿಸುವ ಜ್ಞಾನ ಶಾಖೆಯಷ್ಟೇ ಆಗಿರದ ಕಾಲದಿಂದ ಕಾಲಕ್ಕೆ ಒಂದು ಪ್ರದೇಶದ ಸಂಸ್ಕೃತಿ ಹಾಗೂ ಸಾಮಾಜಿಕ ಒತ್ತಡಗಳನ್ನು ದಾಖಲಿಸುವ ಕೃತಿಯೂ ಆಗಿರುವುದು ಸಾಧ್ಯ ಎನ್ನುವುದನ್ನು ಈ ಪುಸ್ತಕ ಸಾದ್ಯವಾಗಿಸಿದೆ. ಈ ಕೃತಿಯಲ್ಲಿರುವ ಅಧ್ಯಾಯಗಳೆಂದರೆ: ನಿಘಂಟು ವಿಜ್ಞಾನ ,ನಿಘಂಟು ರಚನೆ ,ಕನ್ನಡ ನಿಘಂಟುಗಳ ಬೆಳವಣಿಗೆ ,ವೃತ್ತಿ ಪದಕೋಶಗಳ : ಸಂಕ್ಷಿಪ್ತ ಚರಿತ್ರ ,ಪ್ರಾಯೋಗಿಕ ಪ್ರಶ್ನಾವಳಿಗಳು ,ವೃತ್ತಿ ಪದಕೋಶ ,ಸ್ವರೂಪ ಮತ್ತು ರಚನೆ

About the Author

ವಿಲ್ಯಂ ಮಾಡ್ತಾ
(17 January 1940 - 09 November 2004)

ಡಾ. ವಿಲ್ಯಂ ಮಾಡ್ತಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪಟ್ಟಣದವರು. ಕನ್ನಡ , ಇಂಗ್ಲಿಷ್, ತುಳು, ಕೊಂಕಣಿ ಭಾಷೆಯಲ್ಲಿ ವಿವಿಧ ಪ್ರಕಾರದ ಸಾಹಿತ್ಯ ರಚಿಸಿದವರು.  ವೈಜ್ಞಾನಿಕ ಚಿಂತನೆಗಳ ಬರಹಗಾರರು ಹೌದು. ಅಖಿಲ ಭಾರತ ಕೊಂಕಣಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು, 1997ರ ಜನವರಿಯಲ್ಲಿ ಮುಂಬೈಯಲ್ಲಿ ಜರುಗಿದ 17ನೇ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರು. ಕೃತಿಗಳು: ಕನ್ನಡ ಭಾಷೆಯ ರೂಪುರೇಷೆಗಳು (197೫), ಕರ್ನಾಟಕ ಜಾಪನದ (1989), ಜಾನಪದ ವೈಜ್ಞಾನಿಕ ಅಧ್ಯಯನ ಮತ್ತು ಸಂಕೇತ ವೈಜ್ಞಾನಿಕ ವಿಶ್ಲೇಷಣೆ (1989), ಕನ್ನಡ ವ್ಯಾಕರಣ ಸಮಸ್ಯೆಗಳು: ಭಾಷಾ ವೈಜ್ಞಾನಿಕ ...

READ MORE

Related Books