ನಿಮ್ಮಷ್ಟು ಸುಖಿ ಯಾರಿಲ್ಲ

Author : ವಿಶ್ವೇಶ್ವರ ಭಟ್

Pages 104

₹ 80.00




Year of Publication: 2014
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 0802661 7100

Synopsys

ಲೇಖಕ ಹಾಗೂ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಅಂಕಣಗಳ ಬರಹ-ನಿಮ್ಮಷ್ಟು ಸುಖಿ ಯಾರಿಲ್ಲ. ಸ್ವಾಮಿ ಅನಾಮಧೇಯಪೂರ್ಣ ಎಂಬ ಹೆಸರಿನಲ್ಲಿ ಅವರು 'ಬತ್ತದ ತೆನೆ' ಎಂಬ ಅಂಕಣ ಬರೆಯುತ್ತಿದ್ದು, ಆ ಲೇಖನಗಳನ್ನೇ ಇಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಬಹಳ ಸಂದರ್ಭಗಳಲ್ಲಿ ನಾವು ಸುಲಭವಾದ. ಸರಳವಾದ ಸಂಗತಿಗಳನ್ನು ಕ್ಲಿಷ್ಟಮಾಡಿಕೊಂಡು ಪೇಚಾಡುತ್ತೇವೆ. ನಾವು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದೊಂದೇ ಅಲ್ಲ. ಆಹ್ವಾನವನ್ನೂ ಮಾಡುತ್ತೇವೆ. ಸಣ್ಣ ಸಂಗತಿಗಳೇ ನಮಗೆ ಬೃಹದಾಕಾರವಾಗಿ ಕಾಡುತ್ತವೆ. ಅಷ್ಟಕ್ಕೂ, ಜೀವನ ಅಂದ್ರೆ ಇದೇನಾ? ಇಷ್ಟೇನಾ? ನಮ್ಮ ಬದುಕನ್ನು ಸುಂದರವಾಗಿ ಕಳೆಯಲು ನೂರಾರು ಮಾರ್ಗಗಳಿವೆ. ಮಾರ್ಗಗಳು ಅಷ್ಟೆಲ್ಲಾ ಇರಲಿ ಬಿಡಿ. ಆದರೆ ಆ ಸೌಂದರ್ಯವನ್ನು ಬೇರೆಲ್ಲೂ ಅರಸಬೇಕಾಗಿಲ್ಲ. ಅದನ್ನು ಹುಡುಕುವ ಮಾರ್ಗವಿದ್ದರೆ ಒಂದೇ. ನಮ್ಮ ಸುಖವನ್ನು ಸೃಷ್ಟಿಸಿಕೊಳ್ಳಬೆಕಾದವರು ನಾವೇ. ಅದು ನಮ್ಮೊಳಗೇ ಇದೆ. ಅದೇ ನಮಗೆ ಗೊತ್ತಿಲ್ಲ ಅದಕ್ಕಾಗಿ ಎಲ್ಲೆಲ್ಲೋ ಹುಡುಕುತ್ತೇವೆ. ಯಾರನ್ನೋ ಹುಡುಕಿಕೊಂಡು ಹೊಗುತ್ತೇವೆ. ನಮ್ಮನ್ನು ನಾವು ಪದೇಪದೆ ಭೇಟಿ ಮಾಡಿದರೆ, ನಮ್ಮೊಡನೆ ಕುಳಿತು ವಿಚಾರ ವಿನಿಮಯ ಮಾಡಿಕೊಂಡರೆ ಎಲ್ಲವೂ ಸಲೀಸು. ಅದಕ್ಕಾಗಿ ನಾವು ನಮಗೆ ಸಿಗಬೇಕು. ಆಗಲೇ ನಮ್ಮ ಸುಖ ಎಲ್ಲಿದೆಯೆಂಬುದು ತಿಳಿದೀತು. ಈ ಪುಸ್ತಕ ಓದಿದೆ ಬಳಿಕ ನಿಮ್ಮಲ್ಲಿರುವ ಸುಖ, ಸಂತಸ, ನೆಮ್ಮದಿ ನಿಮಗೆ ಸಿಗಲಿ. ಸಿಗುತ್ತದೆಂದು ಆಶಯ ನನ್ನದು. ಯೋಗಿ ದುರ್ಲಭಾಜೀ ಅವರು ಹೇಳುವುದೇನೆಂದರೆ, 'ನಮಗೆ ಬೇಕಿರುವುದು ಜೀವನದ ಕುರಿತಾದ ಸಿದ್ದಾಂತಗಳಲ್ಲ. ಸರಳವಾದ ಜೀವನ ಸೂತ್ರಗಳು. ಒಂದು ಎಳೆ ಸಿಕ್ಕರೆ ದಾರ, ದಾರದಿಂದ ಹಗ್ಗ ಮಾಡಿಕೊಳ್ಳುವ ಜಾಣ್ಮೆಯನ್ನು ಜೀವನವೇ ಕಲಿಸಿಕೊಡುತ್ತದೆ’ ಎಂದು ಕೃತಿಯ ಕುರಿತು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books