ನಿಸ್ವಾರ್ಥ ರಾಜಕಾರಣದ ಕನ್ನಡಿ ಟಿ. ಸಿದ್ದಲಿಂಗಯ್ಯ

Author : ಡಿ.ಕೆ. ಚಿತ್ತಯ್ಯ ಪೂಜಾರ್

Pages 88

₹ 90.00




Year of Publication: 2020
Published by: ಗಾಂಧಿಯಾನ ಟ್ರಸ್ಟ್
Address: ನಂ.277/ಎ, ಚಂದ್ರಗಿರಿ, ಗಾಂಧಿಕುಟೀರ, 5ನೇ ಕ್ರಾಸ್, ವಿಧಾನ ಸೌಧ ಲೇಔಟ್, ಲಗ್ಗೆರೆ, ಬೆಂಗಳೂರು- 560058

Synopsys

‘ಗಾಂಧಿಯಾನ ಟ್ರಸ್ಟ್’ ನ ‘ನಮ್ಮ ಸುತ್ತಿನ ಗಾಂಧಿಗಳು’ ಎನ್ನುವ ಮಾಲೆಯಲ್ಲಿ ಪ್ರಕಟವಾದ ಕೃತಿ ‘ನಿಸ್ವಾರ್ಥ ರಾಜಕಾರಣದ ಕನ್ನಡಿ ಟಿ. ಸಿದ್ದಲಿಂಗಯ್ಯ’. ಲೇಖಕ ಡಾ.ಡಿ.ಕೆ. ಚಿತ್ತಯ್ಯ ಪೂಜಾರ್ ಈ ಕೃತಿಯನ್ನು ರಚಿಸಿದ್ದಾರೆ. ಅಪ್ಪಟ ದೇಶ ಪ್ರೇಮಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸರ್ವಸ್ವವನ್ನೂ ತೊರೆದು ನಾಡಿನ ರಕ್ಷಣೆ ಹಾಗೂ ಬಿಡುಗಡೆಗಾಗಿ ಟೊಂಕಕಟ್ಟಿ ನಿಂತ ಯೋಧ ಟಿ. ಸಿದ್ದಲಿಂಗಯ್ಯ. ಶಿವಪುರ ಧ್ವಜ ಸತ್ಯಾಗ್ರಹದ ಅಧ್ಯಕ್ಷರಾಗಿದ್ದ ಅವರು ತಮ್ಮ ಸರಳತೆ, ಸಜ್ಜನಿಕೆ, ನಿಸ್ವಾರ್ಥಕ್ಕೆ ಹೆಸರಾಗಿದ್ದವರು. ಮಹಾತ್ಮ ಗಾಂಧಿ ಚಿಂತನೆಗಳ ಸಂದೇಶವನ್ನು ತಮ್ಮ ಕಾರ್ಯಗಳ ಮೂಲಕ ಸಾರುತ್ತಾ ಬದುಕಿದವರು. ಇಂದಿನ ಯುವ ಪೀಳಿಗೆಗೆ ಇಂತಹ ವ್ಯಕ್ತಿತ್ವವು ಅಧ್ಯಯನ ಯೋಗ್ಯ. ಈ ಕೃತಿಯಲ್ಲಿ ಸಿದ್ದಲಿಂಗಯ್ಯ ಅವರ ಬಾಲ್ಯದಿಂದ ಸ್ವಾತಂತ್ರ್ಯ ಹೋರಾಟದ ಬದುಕನ್ನು ಕಟ್ಟಿಕೊಡಲಾಗಿದೆ.

About the Author

ಡಿ.ಕೆ. ಚಿತ್ತಯ್ಯ ಪೂಜಾರ್

ಲೇಖಕ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಅವರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ದವಡ ಬೆಟ್ಟಗ್ರಾಮದವರು. ದವಡಬೆಟ್ಟ, ಮಧುಗಿರಿ, ಚನ್ನಪಟ್ಟಣ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, 1996-97 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವೀಧರರು. 2001ರಲ್ಲಿ ಡಾ.ಜಿ.ಆರ್. ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ  ‘ನಿಡುಗಲ್ಲು:ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧವನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಡಾಕ್ಟರೇಟ್ ಪದವೀಧರರು. ಚಿತ್ತಯ್ಯ ಅವರು ಶಾಸ್ತ್ರೀಯ ಭಾಷೆಯಲ್ಲಿಅಧ್ಯಯನ ನಡೆಸಿದ್ದು, ಸೃಜನಶೀಲ ಮತ್ತು ಸಂಶೋಧನಾ ಬರಹಗಳಾಗಿ 29 ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ಅಕ್ಷರ ಮಂದಿರದ ಅಪೇಕ್ಷೆಯಂತೆ ಮಕ್ಕಳಿಗೆ ಮೀಸಲಾದ 50 ಪುಸ್ತಕಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಇವರಿಗೆ 2017ನೇ ಸಾಲಿನ ರಾಜ್ಯಮಟ್ಟದ ‘ಶ್ರೀವಿಜಯಾ ಸಾಹಿತ್ಯ ...

READ MORE

Related Books