ನಿಸ್ವಾರ್ಥ ಸೇವೆಯ ಹಾದಿಯಲ್ಲಿ ಡಾ. ಈಡಾ ಸ್ಕಡರ್

Author : ನೇಮಿಚಂದ್ರ

Pages 48

₹ 25.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ , ಬೆಂಗಳೂರು - 560 001
Phone: 08022161900

Synopsys

‘ನಿಸ್ವಾರ್ಥ ಸೇವೆಯ ಹಾದಿಯಲ್ಲಿ , ಡಾ. ಈಡಾ ಸ್ಕಡರ್’- ಖ್ಯಾತ ಲೇಖಕಿ ನೇಮಿಚಂದ್ರ ಅವರ ಕೃತಿ. ಡಾ. ಈಡಾ ಸೋಫಿಯಾ ಸ್ಕಡರ್ ಭಾರತೀಯ ವೈದ್ಯಕೀಯ ರಂಗ ಕಂಡ ಅಪರೂಪದ ಮಹಿಳೆ. ಕ್ರೈಸ್ತ ಧರ್ಮದಲ್ಲಿ ಮಿಷನರಿ ಎಂಬ ಧರ್ಮ ಪ್ರಚಾರಕರಿರುತ್ತಾರೆ. ಜಗತ್ತಿನ ಮೂಲೆಮೂಲೆಗಳಿಗೆ ಹೋಗಿ ಜನಸಾಮಾನ್ಯರಿಗೆ ವಿದ್ಯೆ, ಆರೋಗ್ಯ, ಸಾಮಾಜಿಕ ನ್ಯಾಯ, ಆರ್ಥಿಕ ಬೆಳವಣಿಗೆ ಮುಂತಾದ ಸಮಾಜ ಸುಧಾರಣಾ ಕೆಲಸಗಳನ್ನು ಮಾಡುತ್ತಿರುತ್ತಾರೆ. 

ಅಮೆರಿಕದಲ್ಲಿ ‘ರಿಫಾರ್ಮ್ಡ್ ಚರ್ಚ್’ ಮೂಲಕ ನಾಲ್ಕು ತಲೆಮಾರಿನ ವೈದ್ಯರು ಭಾರತಕ್ಕೆ ಬಂದು, ನೆಲೆಸಿ ಅಪರೂಪದ ಆರೋಗ್ಯ ಸೇವೆಗಳನ್ನು ಒದಗಿಸಿದವರು. ಈ ನಾಲ್ಕು ತಲೆಮಾರಿನ ವೈದ್ಯರಲ್ಲಿ ಮೂರನೆಯ ತಲೆಮಾರಿನ ವೈದ್ಯ ಈಡಾ ಸೋಫಿಯಾ ಸ್ಕಡರ್. ಈಡಾ ಕ್ರೈಸ್ತ ಮಿಷನರಿ ಮನೆತನದಲ್ಲಿ ಹುಟ್ಟಿದರೂ ಮಿಷನರಿ ಯಾಗಲು ಇಚ್ಛಿಸಿರಲಿಲ್ಲ. ಆದರೆ ಭಾರತದಲ್ಲಿರುವಾಗ ಒಂದು ರಾತ್ರಿಯಲ್ಲಿಯೇ ಮೂವರು ಮಹಿಳೆಯರು ಮರಣವನ್ನಪ್ಪುವುದನ್ನು ನೋಡುತ್ತಾರೆ. ಅವರ ಜೀವವನ್ನು ಉಳಿಸಬಹುದಾದ ಸ್ತ್ರೀ ವೈದ್ಯರು ಅಲ್ಲಿರುವುದಿಲ್ಲ. ಪುರುಷ ವೈದ್ಯರು ಸ್ತ್ರೀಯರನ್ನು ಪರೀಕ್ಷಿಸಿ ಚಿಕಿತ್ಸೆ ನೀಡುವುದಕ್ಕೆ ಅಂದಿನ ಸಾಮಾಜಿಕ ನೀತಿ ನಿಯಮಗಳು ಅಡ್ಡಿಯಾಗುತ್ತವೆ. ಹಾಗಾಗಿ, ಅವರು ಸಾಯುವುದು ಅನಿವಾರ್ಯವಾಗುತ್ತದೆ. ಇದನ್ನು ಕಂಡ ಈಡಾ ಸೋಫಿಯಾ ಸ್ಕಡರ್ ಜನಸೇವೆಗೆ ಮುಂದಾಗುತ್ತಾರೆ. ತಮ್ಮ ಇಡೀ ಬದುಕನ್ನು ಇಂಥಹ ಮಹತ್ವದ ಕಾರ್ಯಕ್ಕೆ ಮೀಸಲಿಡುವ ಈ ಮಹಾನ್ ಚೇತನದ ಬದುಕಿನ ಕುರಿತಾಗಿ ಲೇಖಕಿ ನೇಮಿಚಂದ್ರ ಅವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

About the Author

ನೇಮಿಚಂದ್ರ
(16 July 1959)

ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...

READ MORE

Related Books