ನೂಲ ಏಣಿಯ ನಡಿಗೆ

Author : ಎಚ್. ಲಕ್ಷ್ಮೀನಾರಾಯಣಸ್ವಾಮಿ

Pages 277

₹ 300.00
Year of Publication: 2020
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: #176, 12ನೇ ಕ್ರಾಸ್, ಅಗ್ರಹಾರ ದಾಸರಹಳ್ಳಿ, ಮಾಗಡಿ ಮುಖ್ಯರಸ್ತೆ, ಬೆಂಗಳೂರು- 560079

Synopsys

‘ನೂಲ ಏಣಿಯ ನಡಿಗೆ’ ಎಚ್. ಲಕ್ಷ್ಮಿ ನಾರಾಯಣಸ್ವಾಮಿ ಅವರ ಕೃತಿ. ಈ ಕೃತಿಗೆ ಅಗ್ರಹಾರ ಕೃಷ್ಣಮೂರ್ತಿ ಮುನ್ನುಡಿ ಬರೆದು ‘ಇದು ಕೇವಲ ದಲಿತ (ಎಲ್ . ಎಚ್) ಕವಿಯೊಬ್ಬರ ಕೃತಿಗಳ ಅಧ್ಯಯನ ಅಥವಾ ಸಮೀಕ್ಷೆಯಾಗಿರದೆ ಇಡೀ ಕನ್ನಡ ದಲಿತಕಾವ್ಯದ ಸಿಂಹಾವಲೋಕನ, ಅದು ನಡೆದು ಬಂದ ದಾರಿ, ಅದರ ಸಮರ್ಥ ವಿಶ್ಲೇಷಣೆ, ಹಿನ್ನೆಲೆ ಇತ್ಯಾದಿಗಳನ್ನು ನಿರೂಪಿಸುವ ಮಹತ್ವದ ಕೃತಿಯಾಗಿದೆ. ದಲಿತ ಸಾಹಿತ್ಯದ ಉಗಮವನ್ನು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಎಂಬ ಎರಡು ನೆಲೆಯಲ್ಲಿ ಗ್ರಹಿಸಿ; ವಚನ ಯುಗದ ಮಾದಾರ ಚೆನ್ನಯ್ಯನೇ ಆದಿಕವಿ, ವಿಮರ್ಶಕ ಎಂದು ಸರಿಯಾಗಿಯೇ ಯೋಚಿಸಿದ್ದಾರೆ. ಡೋಹರ ಸಮುದಾಯದ ಕುಮಾರ ಕಕ್ಕಯ್ಯ ಪೋಳ ಆಧುನಿಕ ದಲಿತ ಸಾಹಿತ್ಯವನ್ನು ಅರ್ಥೈಸಲು, ವಿಮರ್ಶಿಸಲು ದಲಿತ, ದಲಿತೇತರ ವಿಮರ್ಶಕರ ಅಗತ್ಯ, ಅವರ ನಡುವಿನ ಇತಿಮಿತಿಗಳ ಪ್ರಶ್ನೆಗಳನ್ನು ಈ ಕೃತಿ ಮುಂದೊಡ್ಡಿದೆ. ಎಲ್.ಎಚ್. ಅವರ ಕಾವ್ಯವನ್ನು ಅರ್ಥೈಸುವ ಅನೇಕ ಅಪೂರ್ವ ಒಳನೋಟಗಳನ್ನು ಡಾ. ಸ್ವಾಮಿ ನೀಡಿದ್ದಾರೆ. ದಲಿತ ಮತ್ತು ದಲಿತೇತರ ಆತ್ಮಕಥೆಗಳಲ್ಲಿ ದಲಿತ ಕಥನಗಳು ಭಾರತದ ನೈಜಸ್ಥಿತಿಯನ್ನು ನಿರೂಪಿಸುತ್ತದೆನ್ನುವ ಸ್ವಾಮಿ ಆತ್ಮಕಥೆ ಎಂಬುದು ಪುರೋಹಿತಶಾಹಿ ಪರಿಕಲ್ಪನೆ ಎಂದು ನಿರಾಕರಿಸುತ್ತಲೇ, ದಲಿತ ಕಥನಕ್ಕೆ ಮನಸಾಕ್ಷಿ/ಅಂತಃಸಾಕ್ಷಿ ಎಂಬ ಹೊಸ ದೃಷ್ಟಿಯನ್ನು ನೀಡುತ್ತಾರೆ. ಒಂದು ಮುಕ್ತ ಮನಸ್ಸು ಅದರಲ್ಲಿಯೂ ದಲಿತ ಲೋಕದೊಳಗಿನಿಂದಲೇ ಬಂದ ಎಚ್ಚರದ ಪ್ರಜ್ಞೆ ಹೇಗೆ ತನ್ನ ಸಮುದಾಯದ ನಾಲ್ಕು ದಶಕಗಳ ಸೃಜನಶೀಲ ಸಾಹಿತ್ಯ ಮತ್ತು ಹೋರಾಟನನ್ನು, ಏಕಮಾತ್ರ ಲೇಖಕನ ಕೃತಿಗಳ ಮೂಲಕ ಸಾಕ್ಷಾತ್ಕರಿಸಿಕೊಳ್ಳುತ್ತಿದೆ ಎಂಬುದನ್ನು ಕಂಡು ನನಗೆ ಅಚ್ಚರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About the Author

ಎಚ್. ಲಕ್ಷ್ಮೀನಾರಾಯಣಸ್ವಾಮಿ

ಲೇಖಕ ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರು (1987) ಬೆಂಗಳೂರಿನವರು. ಬೆಂಗಳೂರು ವಿ.ವಿ ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸದ್ಯ, ಅದೇ ಕೇಂದ್ರದಲ್ಲಿ ಹಿರಿಯ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.  ಕೃತಿಗಳು: ಗೆಳತಿ ಮತ್ತೊಮ್ಮೆ ಯೋಚಿಸು, ಮುಟ್ಟಿನ ನೆತ್ತರಲ್ಲಿ’, ಉರಿವ ಕೆಂಡದ ಸೆರಗು (ಕವನ ಸಂಕಲನಗಳು), ಜಾಲಿಮರದ ಜೋಳಿಗೆಯಲ್ಲಿ ಎಂಬ ಖಂಡಕಾವ್ಯ ಕೃತಿ, ಇವರ ‘ತೊಗಲ ಚೀಲದ ಕರ್ಣ’ ಕೃತಿಗೆ 2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಲಭಿಸಿದೆ.ತೊಗಲ ಚೀಲದ ಕರ್ಣ, ಸಾಣೆಗಲ್ಲು, ಬಹುಪರಾಕಿನ ಸಂತೆಯೊಳಗೆ (ವಿಮರ್ಶಾ ಕೃತಿ) ಡಾ. ಎಸ್ ಎನ್ ಲಕ್ಷ್ಮೀನಾರಾಯಣ ಭಟ್ಟರ ಕುರಿತ ಕಿರು ಹೊತ್ತಿಗೆ ಪ್ರಕಟಿಸಿದ್ದಾರೆ. ಬೆಂಗಳೂರು ಸಾರಿಗೆ ಸಂಸ್ಥೆ ನೀಡುವ ...

READ MORE

Related Books