ನೂರು ಸಿಂಹಾಸನಗಳು

Author : ಕೆ. ಪ್ರಭಾಕರನ್

Pages 62

₹ 63.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 9900998686

Synopsys

 ಲೇಖಕ ಜಯಮೋಹನ್ ಅವರ ನೂರು ಸಿಂಹಾಸನಗಳು ಕಾದಂಬರಿಯನ್ನು ಅನುವಾದಕರಾದ ಪ್ರಭಾಕರನ್ ಕೆ ಕನ್ನಡಕ್ಕೆ ತಂದಿದ್ದಾರೆ. 
 
ಸಮಾಜದ ತೀರ ಹಿಂದುಳಿದ ವರ್ಗದಿಂದ ಬಂದು ಸಮಾಜ ಸುಧಾರಕರ ಆಶ್ರಯದಲ್ಲಿ ವಿದ್ಯೆ ಕಲಿತು ಸಿವಿಲ್ ಸರ್ವೀಸ್‍ನಲ್ಲಿ ಉತ್ತೀರ್ಣಗೊಂಡ ಒಬ್ಬ ಐಎಎಸ್ ಅಧಿಕಾರಿಯ ವ್ಯಥೆಯ ಕಥೆಯನ್ನು ಈ ಕಾದಂಬರಿ ಚಿತ್ರಿಸುತ್ತದೆ.   ಬಾಲ್ಯದ ದಿನಗಳಲ್ಲಿ ತಾಯಿಯೊಂದಿಗೆ ಆಹಾರಕ್ಕಾಗಿ ಅಲೆದಾಡುತ್ತಾ "ಕಾಪ್ಪಾಗೆ ಅನ್ನ, ಕಾಪ್ಪಾಗೆ ಅನ್ನ" ಎಂದು ಬೊಬ್ಬಿಡುತ್ತ ಕಳೆದ ದಿನಗಳನ್ನು ಸ್ಮರಿಸುತ್ತ, ಇಂದಿನ ಐಷಾರಾಮಿ ದಿನಗಳಿಗೆ ತಾಳೆ ಹಾಕುತ್ತ ಅಸಮಾಧಾನಗೊಂಡು ತನ್ನ ಅಸಹಾಯಕತೆಗಾಗಿ ಮರುಗುವ ಒಂದು ಹೃದಯಸ್ಪರ್ಶಿ ಚಿತ್ರಣ. ವ್ಯವಸ್ಥೆ ಬದಲಿಸಲು ಒಂದು ಕುರ್ಚಿ ಸಾಲದು, ನೂರು ಸಿಂಹಾಸನಗಳೇ ಬೇಕೆಂದು ಸಾರುವ ಕಥನ ಇದಾಗಿದೆ.
 

About the Author

ಕೆ. ಪ್ರಭಾಕರನ್
(26 April 1957)

ವೃತ್ತಿಯಿಂದ ಎಂಜಿನಿಯರ್‌ ಆಗಿರುವ ಕೆ. ಪ್ರಭಾಕರನ್‌ ಅವರು ಮೆಸ್ಕಾಮ್‌ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ)ದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದರು (2014ರ ವರೆಗೆ). ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಸದ್ಯ ಶಿವಮೊಗ್ಗ ನಿವಾಸಿ. ಸಾಹಿತ್ಸಯ ಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಮಲೆಯಾಳಂನಿಂದ ’ಕನಸನೂರಿನ ಕಿಟ್ಟಣ್ಣ’ ಕೃತಿಯನ್ನು ಕನ್ನಡೀಕರಿಸಿದ್ದಾರೆ. ...

READ MORE

Related Books