ನೋಟ ನಿಲುವು

Author : ಕೆ. ಮರುಳಸಿದ್ದಪ್ಪ

Pages 216

₹ 95.00




Year of Publication: 2002
Published by: ಅಂಕಿತ ಪುಸ್ತಕ
Address: ನಂ.53, ಶ್ಯಾಮ್‌ಸಿಂಗ್‌ ಕಾಂಪ್ಲೆಕ್ಸ್‌, ಗಾಂಧಿಬಜಾರ್‌ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು
Phone: 080-26617100/2667755

Synopsys

'ನೋಟ ನಿಲುವು' ಪ್ರೇಕ್ಷಣೀಯ ನೋಟದ ಜೊತೆಗೆ ಆಯಾ ಪ್ರದೇಶಗಳ ಚರಿತ್ರೆ ಹಾಗೂ ಸಮಕಾಲೀನ ವಾಸ್ತವಗಳ ಬಗ್ಗೆ ಲೇಖಕರು ತೆಗೆದುಕೊಂಡ ನಿಲುವುಗಳನ್ನು ಕೃತಿಯ ಉದ್ದಕ್ಕೂ ದಾಖಲಿಸಿದ್ದಾರೆ.

ವಿಶೇಷವಾಗಿ ಬ್ರಿಟನ್ ನ ಸಾಂಸ್ಕೃತಿಕ ಹಿನ್ನೆಲೆ, ರಂಗಭೂಮಿ, ಶಿಕ್ಷಣ, ಸಾಮಾಜಿಕ ಹಾಗೂ ರಾಜಕೀಯ ಕುರಿತು ವಿವರವಾಗಿ ಚರ್ಚಿಸಿದ್ದಾರೆ. ಲೇಖಕರು ಪ್ರವಾಸದ ಸ್ಥಳಗಳ ಬಗ್ಗೆ ದೂರದರ್ಶನ ಜಾಲದಲ್ಲಿ ಪ್ರಸಾರವಾಗುತ್ತಿದ್ದ ಎಲ್ಲ ಬಗೆಯ ಚರ್ಚೆ, ಸಂವಾದ, ಸುದ್ದಿ ವಿವರಗಳು, ನಡೆಯುವಾಗ, ರೈಲು, ಬಸ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಕಣ್ಣು ಕಿವಿಗಳನ್ನು ತೆರೆದಿಟ್ಟುಕೊಂಡು ಎಲ್ಲವನ್ನೂ ಆಸಕ್ತಿಯಿಂದ ನೋಡಿ, ಕೇಳುತ್ತಿದ್ದ ವಿಷಯಗಳು ಹಾಗೂ ಪ್ರವಾಸಿ ತಾಣಗಳ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮಾಹಿತಿ ಒಳಗೊಂಡ ಕಿರು ಪುಸ್ತಿಕೆಗಳು ಮತ್ತು ಕರಪತ್ರಗಳನ್ನು ಸೇರಿ 'ನೋಟ 'ನಿಲುವು' ಎಂಬ ಪ್ರವಾಸಕಥನ ರೂಪಿಸಿದ್ದಾರೆ. 

About the Author

ಕೆ. ಮರುಳಸಿದ್ದಪ್ಪ
(12 January 1940)

ಡಾ. ಕೆ. ಮರುಳಸಿದ್ದಪ್ಪ ಚಿಕ್ಕಮಗಳೂರು ಜಿಲ್ಲೆಯ ಕಾರೇಹಳ್ಳಿ ಗ್ರಾಮದವರು. ತಂದೆ ಉಜ್ಜನಪ್ಪ, ತಾಯಿ ಕಾಳಮ್ಮ. ರಂಗಭೂಮಿ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ‌ದ್ದರು. ಭಾರತೀಯ ಜಾನಪದ ಸಮೀಕ್ಷೆ, ಲಾವಣಿಗಳು, ಷಟ್ಟದಿ, ಜಾನಪದ ಸಾಹಿತ್ಯ ರಚನಕಾರರು, ಕನ್ನಡ ನಾಟಕ ಸಮೀಕ್ಷೆ, ನೋಟನಿಲುವು, ರಕ್ತಕಣಗೀತೆ ಅವರ ಪ್ರಕಟಿತ ಪುಸ್ತಕಗಳು. 'ಆಧುನಿಕ ಕನ್ನಡ ನಾಟಕ ವಿಮರ್ಶೆ' ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿರುವ ಅವರು  ಹಲವು ಇಂಗ್ಲೀಷ್ ನಾಟಕಗಳನ್ನು ಕನ್ನಡೀಕರಿಸಿದ್ದಾರೆ. ಕಿ.ರಂ. ನಾಗರಾಜ ಅವರ ಜೊತೆ ಸೇರಿ ’ವಚನ ಕಮ್ಮಟ’ ಸಂಪಾದಿಸಿದ್ದಾರೆ. ...

READ MORE

Related Books