ನುಡಿ ನೋಟ

Author : ವರದರಾಜ ಚಂದ್ರಗಿರಿ

Pages 134

₹ 150.00




Year of Publication: 2019
Published by: ಚಿಂತನ ಬಯಲು
Address: ಮೊಡಂಪಾಪು ಅಂಚೆ, ಬಂಟ್ವಾಳ - 574219
Phone: 9449772651

Synopsys

ವಿಚಾರ ಸಂಕಿರಣ, ಗೋಷ್ಠಿ ಹೀಗೆ ವಿವಿಧೆಡೆ ಪ್ರಾಧ್ಯಾಪಕ ಡಾ. ವರದರಾಜ ಚಂದ್ರಗಿರಿ ಅವರು ನೀಡಿರುವ ಉಪನ್ಯಾಸಗಳ ಲೇಖನಗಳ ಸಂಗ್ರಹ ರೂಪವೇ ಈ  ಕೃತಿ-ನುಡಿ ನೋಟ. ಉಪನ್ಯಾಸಗಳ ಸಾರಾಂಶ, ಟಿಪ್ಪಣಿಗಳ ಲೇಖನಗಳಿವೆ. ಹಳಗನ್ನಡ ಸಾಹಿತ್ಯದಿಂದ ಹೊಸ ಕಾಲದ ಕವಿಗಳ ಕಾವ್ಯಾಸ್ವಾದನೆಯ ವರೆಗೆ ಉಪನ್ಯಾಸಗಳ ಮೂಲಕ ಚರ್ಚಿಸಲಾಗಿದೆ. ವಿಸ್ತೃತ ಓದು, ಸಂಶೋಧನೆಗೂ ಈ ಕೃತಿ ಉಪಯುಕ್ತ. 

About the Author

ವರದರಾಜ ಚಂದ್ರಗಿರಿ

ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದ ಡಾ. ವರದರಾಜ ಚಂದ್ರಗಿರಿ ಅವರು ಖ್ಯಾತ ಸಾಹಿತಿ, ಚಿಂತಕರಾಗಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಪರಿಚಿತರಾಗಿದ್ದಾರೆ. ಅವರು ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರಾಗಿ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ...

READ MORE

Related Books