ನುಡಿಶೋಧ

Author : ಕೃಷ್ಣಮೂರ್ತಿ ಹನೂರು

Pages 212

₹ 80.00




Year of Publication: 2004
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560039
Phone: 080-22107741

Synopsys

ಹದಿನಾರು ಲೇಖನಗಳ ಕಟ್ಟನ್ನು ಹೊಂದಿರುವ ಈ ಕೃತಿ ಕುಮಾರವ್ಯಾಸನಿಂದ ಚದುರಂಗರವರೆಗೆ ಹಲವು ಸಾಹಿತ್ಯ ಬಗೆಗಳನ್ನು ನಮ್ಮ ಮುಂದಿಡುತ್ತದೆ. ಕವಿ ಮತ್ತು ಸಾಹಿತ್ಯ ಪ್ರಕಾರದ ವಿಮರ್ಶೆಯಂತೆ ಕಂಡುಬಂದರೂ ಕ್ಷೇತ್ರಕಾರ್ಯ ಜಗತ್ತನ್ನೂ ಓದುಗರ ಮುಂದೆ ತೆರದಿಡುತ್ತದೆ. ವಿವಿಧ ಕಾಲಘಟ್ಟದ ಕವಿತ್ವಗಳ ತೌಲನಿಕ ವಿಮರ್ಶೆ ಓದುಗರಿಗೆ ಹೊಸ ಸಾಹಿತ್ಯ ಸಾಧ್ಯತೆಗಳ ದಾರಿಯನ್ನು ತೋರಿಸುತ್ತದೆ. ಜಾನಪದ ಹಿನ್ನೆಲೆಯಲ್ಲಿ ಕುಮಾರವ್ಯಾಸನನ್ನು ಪರಿವೀಕ್ಷಿಸುವ, ಕುವೆಂಪು-ತೇಜಸ್ವಿ ನಡುವೆ ಬರಹಗಳ ದೃಷ್ಟಿಕೋನವನ್ನು ಕಟ್ಟಿಕೊಟ್ಟಿರುವ ಕೃಷ್ಣಮೂರ್ತಿ ಹನೂರರವರು ಒಂದು ಸಮೃದ್ಧ ಓದನ್ನು ಕನ್ನಡಿಗರಿಗೆ ಅರ್ಪಿಸಿದ್ದಾರೆ.

About the Author

ಕೃಷ್ಣಮೂರ್ತಿ ಹನೂರು

ಜಾನಪದ ತಜ್ಞ, ಕತೆಗಾರ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಮಾಡಿ ಸಂದರ್ಶಕ ಪ್ರಾಧ್ಯಾಪಕರಾಗಿ. 40 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಆಜ್ಞಾತನೊಬ್ಬನ ಆತ್ಮ ಚರಿತ್ರೆ ಕಾದಂಬರಿ ಓದುಗರ ಮೇರೆಯಿಲ್ಲದ ಮೆಚ್ಚುಗೆ ಪಡೆದಿದೆ. ಅದೀಗ ಇಂಗ್ಲೀಷ್ ಗೆ ಅನುವಾದಗೊಂಡು ಪ್ರಕಟವಾಗಿದೆ. ಕೇರಿಗೆ ಬಂದ ಹೋರಿ, ಕತ್ತಲಲ್ಲಿ ಕಂಡ ಮುಖ ಮತ್ತು ಕಳೆದ ಮಂಗಳವಾರ ಮುಸ್ಸಂಜೆ ಅವರ ಕಥಾಸಂಕಲನಗಳು. ಬಾರೋ ಗೀಜಗನೆ, ನಿಕ್ಷೇಪ ಅವರ ಕಾದಂಬರಿಗಳು. ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಅವರು ಸಂಪಾದಿಸಿದ ವಿಶ್ವಕೋಶ ಎನ್ ಸೈಕ್ಲೋಪೀಡಿಯಾ ಆಫ್ ಫೋಕ್ ಕಲ್ಚರ್ ...

READ MORE

Related Books