ನ್ಯಾಸ್ತನೆ ನೆಲಬಾಲನೆ

Author : ಕೆ.ವೈ. ನಾರಾಯಣಸ್ವಾಮಿ

Pages 310

₹ 220.00




Year of Publication: 2019
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-02
Phone: 0802210774

Synopsys

ಕವಿ, ಚಿಂತಕ ಕೆ.ವೈ. ನಾರಾಯಣಸ್ವಾಮಿ ಅವರು ನಾಟಕಕಾರರು. ಅವರ ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಹಲವು ಪ್ರಯೋಗಗಳೊಂದಿಗೆ ತನ್ನದೆಯಾದ ಹೊಸ ಗಡಿಗಳನ್ನು ಶೋಧಿಸುತ್ತವೆ.

“ನ್ಯಾಸ್ತನೆ ನೆಲಬಾಲನೆ”ಯಲ್ಲಿ ಚಕ್ರರತ್ನ, ಅನಭಿಜ್ಞ ಶಕುಂತಲ, ಪಂಪಭಾರತ, ಕೈವಾರ ನಾರೇಯಣ, ವಿನುರ ವೇಮನ ಈ ನಾಟಕಗಳ ಸಂಗ್ರಹವಾಗಿದೆ. ಸಮಕಾಲೀನ ಸಂದರ್ಭದ ನೆಲೆಯಲ್ಲಿ ಜಾಗತಿಕ ರಾಜಕಾರಣವನ್ನು ದೇಸೀಯ ವಿದ್ಯಮಾನಗಳನ್ನು ಮುಖಾಮುಖಿಯಾದಂತೆ ರಚಿಸಿದ್ದಾರೆ.

ಪುರಾಣಕ್ಕೆ ಸಂಬಂಧಿಸಿದ ವಸ್ತುವಿನ ಜೊತೆಗೆ ಚಾರಿತ್ರಿಕ ಸಂದರ್ಭದ ಹಲವು ವ್ಯಕ್ತಿಗಳನ್ನು, ಸಂಗತಿಗಳನ್ನು, ನಾಟಕಕ್ಕೆ ವಸ್ತುವಾಗಿ ಬಳಸಿಕೊಂಡು, ಹೊಸ ದೃಷ್ಟಿಕೋನದ ಹೊಳಹನ್ನು ನೀಡಿರುವುದು ಈ ನಾಟಕ ಕೃತಿಯ ವೈಶಿಷ್ಟ್ಯ. 

About the Author

ಕೆ.ವೈ. ನಾರಾಯಣಸ್ವಾಮಿ
(05 June 1965)

ಕನ್ನಡ ಸಾಹಿತ್ಯ ಲೋಕ, ರಂಗಭೂಮಿ ಮತ್ತು ಅಕಾಡೆಮಿಕ್ ವಲಯಗಳಲ್ಲಿ ಕೆ.ವೈ.ಎನ್ ಎಂದೇ ಚಿರಪರಿಚಿತರಾಗಿರುವ ಕೈ.ವೈ.ನಾರಾಯಣಸ್ವಾಮಿಯವರು ಮೂಲತಃ ಕೋಲಾರದವರು. ಕೋಲಾರ ಜಿಲ್ಲೆಯ ಮಾಸ್ತಿ ಬಳಿ ಇರುವ ಮಾಲೂರು ತಾಲೋಕಿನ ‘ಕುಪ್ಪೂರು’ ಕೆವೈಎನ್ ಅವರ ಹುಟ್ಟೂರು. ತಂದೆ-ಯಾಲಪ್ಪ ಮತ್ತು ತಾಯಿ- ಮುನಿಯಮ್ಮ. ಇವರ ಪೂರ್ಣ ಹೆಸರು ‘ಕುಪ್ಪೂರು ಯಾಲಪ್ಪ ನಾರಾಯಣಸ್ವಾಮಿ’. ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಾಸ್ತಿಯಲ್ಲಿ ಮುಗಿಸಿದ ನಂತರ ಬೆಂಗಳೂರಿಗೆ ಬಂದು ಪದವಿ ಶಿಕ್ಷಣ ಪಡೆದು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ಮುಗಿಸುತ್ತಾರೆ. ಇವರ ಪಿ.ಎಚ್.ಡಿ ಪ್ರಬಂಧವಾದ ‘ನೀರ ದೀವಿಗೆ’ ಈ ದೇಶದ ಸಂಸ್ಕೃತಿಯನ್ನು ...

READ MORE

Related Books