ಒಡಲ ಭಾಷೆ

Author : ಡಿ. ಅಂಜನಪ್ಪ ಚಳ್ಳಕೆರೆ

Pages 280

₹ 225.00




Year of Publication: 2014
Published by: ಸಿ.ವಿ.ಜಿ. ಇಂಡಿಯಾ
Address: ಕಸ್ತೂರ್ ಬಾ ಭವನ, ಗಾಂಧಿ ಭವನ ಕ್ಯಾಂಪಸ್, ಕುಮಾರಪಾರ್ಕ್ ಈಸ್ಟ್, ಬೆಂಗಳೂರು- 560001
Phone: 08022340799

Synopsys

‘ಒಡಲ ಭಾಷೆ’ ಲೇಖಕ ಡಿ.ಅಂಜನಪ್ಪ ಚಳ್ಳಕೆರೆ ಅವರ ವಿಮರ್ಶಾ ಸಂಕಲನ. ದಲಿತ ಸಾಹಿತ್ಯದ ಗಂಭೀರ ಚಿಂತಕರಾದ ಡಿ. ಅಂಜನಪ್ಪ ಚಳ್ಳಕೆರೆ ಅವರ ಒಡಲ ಭಾಷೆ ವಿಭಿನ್ನವಾದ ಚಿಂತನೆಗಳಿಂದ ಕೂಡಿದೆ. ದಲಿತ ಚಿಂತನೆ ಎಂದಾಕ್ಷಣ ರೊಚ್ಚು, ಆಕ್ರೋಶಗಳಿಂದ ಕೂಡಿದುದು ಎಂಬ ಪೂರ್ವಾಗ್ರಹದ ಕ್ಲಿಷೆಯೇ ತುಂಬಿಕೊಂಡಿರುವ ಸಂದರ್ಭದಲ್ಲಿ ಅಂಥ ಯಾವ ಆವೇಶಕ್ಕೂ ಒಳಗಾಗದೇ ತಮ್ಮ ಚಿಂತನೆಗಳನ್ನು ಇಲ್ಲಿ ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ. ವಿಷಯವನ್ನು ಮಂಡಿಸಿರುವ ಕ್ರಮ, ಅದನ್ನು ಹಂತ-ಹಂತವಾಗಿ ವಿಶ್ಲೇಷಿಸುವ ರೀತಿಗಳಲ್ಲಿ ಒಂದು ಬಗೆಯ ಒಳನೋಟಗಳಿಂದ ಕೂಡಿದ ಸಮತೋಲನ ಕಾಣುತ್ತದೆ. ದಲಿತ ಸಾಹಿತ್ಯದ ಬಗ್ಗೆ ಇಂಥ ಆರೋಗ್ಯಕರ ಚಿಂತನೆ ಇಂದಿನ ಅಗತ್ಯವಾಗಿದೆ.

ಜಾತಿ ಮತ್ತು ಅಸ್ಪೃಶ್ಯತೆಯ ಬಗ್ಗೆ ಕನ್ನಡ ಸಾಹಿತ್ಯದಲ್ಲಿ ನಡೆದಿರುವ ಚಿಂತನೆ, ಚರಿತ್ರೆಯನ್ನು ಹೊಸ ರೀತಿಯಲ್ಲಿ ಕಟ್ಟಿಕೊಳ್ಳಬೇಕಾದ ಅಗತ್ಯತೆ ಬಗ್ಗೆ ಹೇಳುವ ಲೇಖನಗಳು ಗಂಭೀರವಾದ ವಾಗ್ವಾದವನ್ನು ಕಟ್ಟಿಕೊಡುತ್ತವೆ. ಇದಕ್ಕೆ ವಿವರಣೆ ಎಂಬಂತೆ ಸಿದ್ಧಲಿಂಗಯ್ಯ ಮತ್ತು ದೇವನೂರರ ಕೃತಿಗಳನ್ನು ವಿಮರ್ಶೆಗೆ ಒಳಪಡಿಸುತ್ತಾರೆ. ದಲಿತರು ಮತ್ತು ಭೂಮಿಯ ಪ್ರಶ್ನೆಯನ್ನು ಇನ್ನೊಂದು ನೆಲೆಯಲ್ಲಿ ಅದನ್ನು ಗ್ರಾಮಾಯಣದವರೆಗೆ ಬೆಳೆಸಿರುವುದು ಕುತೂಹಲಕರವಾಗಿದೆ. ಒಟ್ಟಾರೆ ನೋವು, ಸಂಕಟ, ಹಸಿವುಗಳು ಎಲ್ಲ ಲೇಖನಗಳ ಸ್ಥಾಯಿಯಾಗಿದ್ದು, ಭಾಷೆಯ ಆಕಾರವನ್ನು ಪಡೆದುಕೊಳ್ಳುವ ಮೂಲಕ ಕೃತಿ ಅನನ್ಯವಾಗಿದೆ.

About the Author

ಡಿ. ಅಂಜನಪ್ಪ ಚಳ್ಳಕೆರೆ

ಪ್ರೊ. ಡಿ.ಅಂಜನಪ್ಪ ಚಳ್ಳಕೆರೆ  ಅವರು ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದವರು. ಪ್ರಾಥಮಿಕ, ಮಾಧ್ಯಮಿಕ ಮತ್ತು ಪದವಿ ಶಿಕ್ಷಣವನ್ನು ಚಳ್ಳಕೆರೆಯಲ್ಲಿ ಪೂರೈಸಿದರು. ಪ್ರೌಢಶಾಲಾ ಶಿಕ್ಷಣವನ್ನು ಪರಶುರಾಂಪುರದಲ್ಲಿ ಅಭ್ಯಸಿಸಿದರು. ಕನ್ನಡ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಈಗ ಚಳ್ಳಕರಯ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ ನಿರ್ವಹಿಸುತ್ತಿದ್ದಾರೆ. ಕನ್ನಡದ ವಿಶಿಷ್ಟ ಓದುಗರಾಗಿರುವ ಅವರು ಈಗಾಗಲೇ ಇವರ ‘ಒಡಲ ಭಾಷೆ (2014), ವೈಚಾರಿಕತೆ ಮತ್ತು ಸಾಂಸ್ಕೃತಿಕ ರಾಜಕಾರಣ, ಕಾರಣ ಮೀಮಾಂಸೆ (2017), ;ವಿಮರ್ಶೆಯ ವಿವೇಕ’ ಎಂಬ ನಾಲ್ಕು ಕೃತಿಗಳು ಪ್ರಕಟವಾಗಿವೆ. ...

READ MORE

Related Books