ಒಡನಾಟ

Author : ಎಸ್. ಆರ್. ವಿಜಯಶಂಕರ್

Pages 244

₹ 120.00




Published by: ಆನಂದಕಂದ ಗ್ರಂಥಮಾಲೆ
Address: ಮಲ್ಲಾಡಿಹಳ್ಳಿ, ಚಿತ್ರದುರ್ಗ ಜಿಲ್ಲೆ  ಕರ್ನಾಟಕ - 577531
Phone: 9480455604

Synopsys

‘ ಒಡನಾಟ’ ಕೃತಿಯು ಎಸ್.ಆರ್. ವಿಜಯಶಂಕರ ಅವರ ರಚಿಸಿದ ವ್ಯಕ್ತಿಚಿತ್ರಗಳ ಸಂಗ್ರಹವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಬಸವರಾಜ ಕಲ್ಗುಡಿ ಅವರು, ಕಳೆದ ಇಪ್ಪತ್ತಾರು ವರ್ಷಗಳಲ್ಲಿ ಬರೆದ ವ್ಯಕ್ತಿಚಿತ್ರಗಳ ಸಂಗ್ರಹವಾಗಿದೆ. ಇವರಲ್ಲಿ ಅನೇಕರು ಸಾಹಿತ್ಯ, ಸಾಂಸ್ಕೃತಿಕ ಸಂದರ್ಭದ ಗಣ್ಯರು. ಇನ್ನು ಕೆಲವರು ಕೈಗಾರಿಕೆ ಪತ್ರಿಕೋದ್ಯಮಗಳ ಮೂಲಕ ಪರಿಚಿತರಾದವರು. ಮತ್ತೆ ಕೆಲವರು ಬದುಕಲ್ಲಿ ಹೇಗೋ ಬಂದು ನೆನಪಲ್ಲಿ ನಿಂದವರು ಎಂದು ಕೃತಿಯ ಸ್ವರೂಪವನ್ನು ಲೇಖಕರು ವಿವರಿಸಿದ್ದಾರೆ. ದ.ರಾ.ಬೇಂದ್ರೆ, ಬಿ.ಜಿ.ಎಲ್.ಸ್ವಾಮಿ, ಶಿವರಾಮ ಕಾರಂತ, ಕೆ.ವಿ. ಸುಬ್ಬಣ್ಣ, ಕೀರ್ತಿನಾಥ ಕುರ್ತಕೋಟಿ ಅವರ ಕುರಿತ ಬರಹಗಳು ಸೇರಿದಂತೆ ಇಪ್ಪತ್ತಾರು ಲೇಖನಗಳು ಕೃತಿಯಲ್ಲಿವೆ. ಈ ಹಿರಿಯರ ಅನನ್ಯ ಸಾಂಸ್ಕೃತಿಕ ಶ್ರೀಮಂತಿಕೆಯ ಪುಟಗಳ ದಾಖಲೆಯೂ ಹೌದು. ‘ಸಣ್ಣ ಪ್ರಸಂಗಗಳನ್ನೂ ಅನೂಹ್ಯವಾದ ಎತ್ತರದಲ್ಲಿ ಚಿಂತಿಸಬಲ್ಲಂತೆ ಮಾಡುವ ವಿಶ್ಲೇಷಣೆಯಿಂದಾಗಿ ಒಂದು ಬೌದ್ಧಿಕ ಮತ್ತು ಮಾನವೀಯ ನೆಲೆಗಳು ಇಲ್ಲಿಯ ಬರಹಗಳಿಗೆ ತಾನೇ ತಾನಾಗಿ ಒದಗಿಬಂದಿದೆ’ ಎಂದಿದ್ದಾರೆ.

 

About the Author

ಎಸ್. ಆರ್. ವಿಜಯಶಂಕರ್

ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ,  ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ.  ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ  ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ.  ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ  ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...

READ MORE

Related Books