ಒದ್ದೆಕಣ್ಣುಗಳ ಪ್ರೀತಿ

Author : ಸುಧಾಶರ್ಮಾ ಚವತ್ತಿ

Pages 40

₹ 15.00
Year of Publication: 1993
Published by: ಕನ್ನಡ ಸಂಘ
Address: ಕ್ರೈಸ್ಟ್ ಕಾಲೇಜ್, ಹೊಸೂರು ರಸ್ತೆ, ಬೆಂಗಳೂರು- 560 029

Synopsys

‘ಒದ್ದೆಕಣ್ಣುಗಳ ಪ್ರೀತಿ’ -ಸುಧಾಶರ್ಮ ಚವತ್ತಿ ಅವರ ಪ್ರಥಮ ಕವನ ಸಂಕಲನ. ಎಂಭತ್ತರ ದಶಕದಿಂದೀಚೆಗೆ ಕನ್ನಡ ಕಾವ್ಯ ಕ್ಷೇತ್ರಕ್ಕೆ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಿದ್ದು ಮಾತ್ರವಲ್ಲ; ಗಮನಾರ್ಹ ಸಾಧನೆಯನ್ನೂ ಮಾಡುತ್ತಿದ್ದಾರೆ. ವಚನ ಚಳವಳಿಯ ನಂತರ ಕನ್ನಡ ಕಾವ್ಯದಲ್ಲಿ ಇದೊಂದು ಮಹತ್ವದ ಬೆಳವಣಿಗೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಈ  ಹಂತದಲ್ಲಿ ಸುಧಾಶರ್ಮ ಚವತ್ತಿ ಅವರ ಈ ಸಂಕಲನ ಹೊಸ ಸೇರ್ಪಡೆ.

ನಿರ್ವಾಜ್ಯ ಪ್ರೀತಿ, ಅಂತಃಕರಣಕ್ಕಾಗಿ ಹಂಬಲ ಮತ್ತು ಹುಡುಕಾಟ -ಇಲ್ಲಿಯ ಬಹುಪಾಲು ಕವಿತೆಗಳ ಮುಖ್ಯ ಕಾಳಜಿ. ವೈಯಕ್ತಿಕ ಸ್ತರದಲ್ಲಿ ನಿಲ್ಲದೇ ಕ್ರಮೇಣ ಸಾಮಾಜಿಕ ಆಯಾಮ ಪಡೆಯುವ ಇಲ್ಲಿಯ ಕವಿತೆಗಳ ಒಟ್ಟು ಸ್ವರೂಪ ಗಮನಾರ್ಹ. ಕವಿ ಬಿ.ಆರ್. ಲಕ್ಷ್ಮಣರಾವ್ ಗಮನಿಸಿರುವಂತೆ, ’ಇಂದಿನ ಕೋಮಲ ಕಳಲೆ ಬಲಿತು ಗಟ್ಟಿ ಬಿದಿರಾಗಿ, ಕೊಳಲಾಗಿ, ಅದರಿಂದ ಅರ್ಥಪೂರ್ಣ ರಾಗಭಾವಗಳು ಹೊಮ್ಮಲು ಸಾಧ್ಯವಾದೀತು” ಎನ್ನುವ ಮೂಲಕ ಕವಿಯತ್ರಿಯ ಕಾವ್ಯಕೃಷಿಯ ಒಲವನ್ನು ಪ್ರಶಂಸಿಸಿದ್ದಾರೆ.

 

About the Author

ಸುಧಾಶರ್ಮಾ ಚವತ್ತಿ

“ಒದ್ದೆ ಕಣ್ಣುಗಳ ಪ್ರೀತಿ” ಕವನ ಸಂಕಲನದ ಮೂಲಕ ಸುಧಾ ಶರ್ಮಾ ಚವತ್ತಿ ಸಾಹಿತ್ಯ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ ಕವಿ. ಮೂಲತಃ ಶಿರಸಿಯವರು.ಪತ್ರಿಕೆಗಳಲ್ಲಿ ಲೇಖನ ಹಾಗೂ “ಆವಿಯಾಗಿದೆ ಮಾತು” (ಮಲ್ಲಿಗೆ), “ಷೇರೆಂಬ ಮಾಯಾಂಗನೆ” ( ವಿಜಯ ಕರ್ನಾಟಕ ), “ಪ್ರಾಫಿಟ್ ಪ್ಲಸ್” (ವಿಜಯವಾಣಿ) ಅಂಕಣಗಳ ಮೂಲಕ ಪರಿಚಿತರು. ’ಅತ್ತು ಬಿಡೆ ಗೆಳತಿ’ ಮತ್ತೊಂದು ಕವನ ಸಂಕಲನ. ಕಿರುತೆರೆ ಕಾರ್ಯಕ್ರಮಗಳ ನಿರ್ದೇಶನ, ನಿರ್ಮಾಣ, ನಿರೂಪಣೆ, ಸಾಕ್ಷ್ಯಚಿತ್ರ ನಿರ್ಮಾಣವೂ ಇವರ ಆಸಕ್ತಿ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಸುಧಾ, ಉತ್ತಮ ವಾಗ್ಮಿ. ಮಾತುಗಾರಿಕೆ ಇವರ ಉತ್ಕಟ ಪ್ರೀತಿಗಳಲ್ಲಿ ಒಂದು.  ಬೇಂದ್ರೆ ಅಡಿಗ ಕಾವ್ಯ ಪ್ರಶಸ್ತಿ, ಗೌರೀಶ ಕಾಯ್ಕಿಣಿ ...

READ MORE

Related Books