ಓದಿನ ಬೆರಗು

Author : ರಮೇಶ ಎಸ್.ಕತ್ತಿ

Pages 98

₹ 80.00




Year of Publication: 2018
Published by: ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ
Address: ಕಲಬುರಗಿ-582 108

Synopsys

ಓದಿನ ಬೆರಗು-ಡಾ. ರಮೇಶ ಎಸ್. ಕತ್ತಿ ಅವರು ರಚಿಸಿದ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಕೃತಿ ಇದು. ಒಟ್ಟು 11 ವಿಮರ್ಶಾ ಲೇಖನಗಳನ್ನು ಒಳಗೊಂಡಿದೆ. ಕಾದಂಬರಿ ಪ್ರಕಾರದ 2 ಲೇಖನಗಳು, ಕಾವ್ಯ ಪ್ರಕಾರದ 4 ಲೇಖನಗಳು, ಕಥಾ ಪ್ರಕಾರಕ್ಕೆ ಸಂಬಂಧಿಸಿದಂತೆ 5 ಲೇಖನಗಳಿವೆ. ಪ್ರಾದೇಶಿಕವಾಗಿ ಮಹತ್ವದ ಬರಹಗಳನ್ನು ಇಲ್ಲಿ ವಿಮರ್ಶೆಗೆ ಒಳಪಡಿಸಿದ್ದು ಈ ಕೃತಿಯ ಹೆಚ್ಚುಗಾರಿಕೆ.

About the Author

ರಮೇಶ ಎಸ್.ಕತ್ತಿ
(28 August 1978)

ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ:  ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ.   ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...

READ MORE

Related Books