ಓದಿವನಿಂದು ಪ್ರೇರಣೆಗೆಂದು

Author : ಗುರುರಾಜ ಬೆಣಕಲ್

Pages 106

₹ 45.00




Year of Publication: 2017
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020

Synopsys

‘ಓದಿವನಿಂದು ಪ್ರೇರಣೆಗೆಂದು'  ಎಂಬುದು ಮಕ್ಕಳಿಗಾಗಿ ಪ್ರೇರಕ ಪ್ರಸಂಗಗಳ ಪುಸ್ತಕ. ಲೇಖಕ ಗುರುರಾಜ ಬೆಣಕಲ್‌ ರಚಿಸಿದ್ದಾರೆ. “ಎಂದರೋ ಮಹಾನುಭಾವುಲು ಅಂದರಿಕೆ ನಾ ವಂದನಮುಲು” ಎಂಬ ತೆಲುಗು ಕವಿಯೊಬ್ಬ ಹಾಡಿರುವದನ್ನು ನೀವು ಕೇಳಿರಬಹುದು. ಹೇಗೆ ಹಾಡಿಸಿಕೊಳ್ಳಲು ಯೋಗ್ಯರಾದ ಮಹಾನುಭಾವರ ಜೀವನದಲ್ಲಿ ನಡೆದ ಪ್ರಸಂಗಗಳು, ಘಟನೆಗಳು, ಯಾವುವು ಎಂಬ ಕುತೂಹಲ ನಿಮ್ಮಲ್ಲಿ ಇರುವುದು ಸಹಜ. ಅವರ ಜೀವನವೇ ಪ್ರೇರಣಾದಾಯಕ ಆದಾಗ್ಯೂ ವಿಶ್ವದ ಸುಪ್ರಸಿದ್ದ ಚಿಂತಕರು, ವಿಚಾರಕರು ದಾರ್ಶನಿಕರು, ಕವಿ ಲೇಖಕರು, ರಾಜ ನೀತಿಜ್ಞ ಮತ್ತು ಸಂತರ ಜೀವನದಲ್ಲಿ ನಡೆದ ಕೆಲವು ಕುತೂಹಲಕಾರಿ ಹಾಗೂ ನಿಮ್ಮ ಜೀವನಕ್ಕೆ ಪ್ರೇರಣೆದಾಯಕ ಎನಿಸಬಹುದಾದ ಹಲವು ಪ್ರಸಂಗಗಳನ್ನು ಮಾತ್ರ ನಿಮಗೆ ಸ್ಫೂರ್ತಿದಾಯಕವಾಗಲೆಂದು ಇಲ್ಲಿ ಕೊಡುತ್ತಿದ್ದೇನೆ’ ಎಂದು ಲೇಖಕರು ಈ ಪುಸ್ತಕದ ಕುರಿತಾಗಿ ವಿವರಿಸಿದ್ದಾರೆ.

 

About the Author

ಗುರುರಾಜ ಬೆಣಕಲ್ - 09 April 2018)

ಗುರುರಾಜ ಬೆಣಕಲ್ ಅವರು ಮೂಲತಃ ಬಾಗಲಕೋಟೆಯವರು. ಮಕ್ಕಳ ಸಾಹಿತ್ಯವೂ ಒಳಗೊಂಡು ಸುಮಾರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.  ಕೃತಿಗಳು: ಕತೆ ಹೇಳುವೆ, ಅಪೂರ್ವ ದಾನ, ಒಂದೂರಲ್ಲಿ...., ಬುದ್ಧಿವಂತ ಶಿಷ್ಯರು, ಹನಿ ಹನಿ ಮಿನಿ ಮಿನಿ ಕತೆಗಳು, ಕತೆಗಳೋ ಕತೆಗಳು, ಏನ್ ಕತೆ ಏನ್ ಕತೆ, ಗಿಣಿರಾಮ, ಕರಡೀ ಮದುವೆ, ಮಕ್ಕಳ ಕವಿತೆಗಳು, ಗಣಪ ಟೊಣಪ ಮತ್ತು ಮಕ್ಕಳ ಇತರ ಕವಿತೆಗಳು, ಹಾಡು ಹಕ್ಕಿ ಓಡಿ ಬಾರೆ, ಹೂವೇ ಹೂವೇ, ಒಗಟ ಬಿಡಿಸೊ ಜಾಣ ಎನಿಸೊ, ಪ್ರೇರಕ ಪ್ರಸಂಗಗಳು - ಬಾಳದಾರಿಯ ದೀಪಗಳು, ಓದಿವನಿಂದು ಪ್ರೇರಣೆಗೆಂದು, ಮಂಗನ ಮದುವೆ ಮತ್ತು ಮಕ್ಕಳ ಇತರ ...

READ MORE

Related Books