ಆಫ್ ದಿ ರೆಕಾರ್ಡ್ ಪಾಲಿಟಿಕ್ಸ್

Author : ಎಸ್. ಲಕ್ಷ್ಮೀ ನಾರಾಯಣ

Pages 168

₹ 150.00




Year of Publication: 2019
Published by: ಅನು ಪ್ರಕಾಶನ
Address: 1008,8ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್, 3ನೇ ಹಂತ, ಬಸವೇಶ್ವರನಗರ, ಬೆಂಗಳೂರು-560079
Phone: 9448684033

Synopsys

ಆಫ್ ದಿ ರೆಕಾರ್ಡ್ ಪಾಲಿಟಿಕ್ಸ್ - ಪತ್ರಕರ್ತನೊಬ್ಬನ ಅರಿವಿಗೆ ದಕ್ಕಿದ ರಾಜಕೀಯ ಸ್ಥಿತ್ಯಂತರಗಳ ವಿಡಂಬನ ಕೃತಿ. ಪತ್ರಿಕೋದ್ಯಮದಲ್ಲಿ ಎರಡು ದಶಕಗಳ ಅನುಭವ ಹೊಂದಿರುವ ಎಸ್. ಲಕ್ಷ್ಮಿನಾರಾಯಣ ಅವರು ತಾವು ಕಂಡ ರಾಜಕಾರಣಿಗಳ, ತಮಗೆ ಸಿಕ್ಕ ಮಾಹಿತಿಗಳನ್ನು ಆಮಾಸ ಎಂಬ ಹೆಸರಿನಲ್ಲಿ ವಿಡಂಬನೆ ಮಾಡಿದ್ದಾರೆ. ವಿಭಿನ್ನ ರೀತಿಯಲ್ಲಿ ಮೂಲಕ ರಾಜಕಾರಣವನ್ನು ಅನಾವರಣ ಗೊಳಿಸಿದ್ದಾರೆ. ಖ್ಯಾತ ಅಂಕಣಕಾರ ಎ.ಆರ್.ಮಣಿಕಾಂತ್ ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದು, ರಾಜಕಾರಣವೆಂಬ ರಂಗಭೂಮಿಯಲ್ಲಿ ತೆರೆಯ ಹಿಂದೆ ನಡೆಯುವ ಮಸಲತ್ತಿನ ಅಂಕಗಳನ್ನು ಲಕ್ಷ್ಮಿನಾರಾಯಣ ವಿಶೇಷ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದ್ದಾರೆ ಎನ್ನುತ್ತಾರೆ. ಕೋಲಾರ ಸೀಮೆಯ ಗ್ರಾಮ್ಯ ಭಾಷೆಯ ಸೊಗಡು, ಲಕ್ಷ್ಮಿನಾರಾಯಣ ಅವರ ಬರಹದಲ್ಲಿ ಢಾಳಾಗಿ ಹರಿದಿದ್ದು, ವಿಶಿಷ್ಟ ಒಳನೋಟದ ಬರಹಗಳ ಮೂಲಕ ರಾಜಕೀಯದ ಹಲವು ಮಜಲುಗಳಿಗೆ ಕನ್ನಡಿ ಹಿಡಿದಿದ್ದಾರೆ ಎಂಬುದು ಮಣಿಕಾಂತ್ ಅವರ ಅಭಿಪ್ರಾಯ. 

About the Author

ಎಸ್. ಲಕ್ಷ್ಮೀ ನಾರಾಯಣ
(09 October 1975)

ಹಿರಿಯ ಪತ್ರಕರ್ತ ಎಸ್‌. ಲಕ್ಷ್ಮೀನಾರಾಯಣ ಅವರು ಮೂಲತಃ ಕೋಲಾರದವರು. 1975ರ ಅಕ್ಟೋಬರ್‌ 9ರಂದು ಜನಿಸಿದರು. ಕಠಾರಿಪಾಳ್ಯದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಕೋಲಾರದಲ್ಲಿ ಬಿ.ಎ. ಪದವೀಧರರಾದರು. ಅವರು ಸದ್ಯ ಉದಯವಾಣಿ ದಿನಪತ್ರಿಕೆ ಉಪಮುಖ್ಯ ವರದಿಗಾರರಾಗಿದ್ದಾರೆ. ...

READ MORE

Related Books