`ಓ ಬದುಕೇ ನೀನೆಷ್ಟು ಸೊಗಸು’ ಯತಿರಾಜ್ ವೀರಾಂಬುಧಿ ಅವರು ಕನ್ನಡಕ್ಕೆ ಅನುವಾದಿಸಿದ್ದು, ಡಾ. ಯಂಡಮೂರಿ ವೀರೇಂದ್ರನಾಥ್ ಅವರ ಮೂಲ ಕೃತಿಯಾಗಿದೆ. ವ್ಯಕ್ತಿತ್ವ ವಿಕಸನ ವಿಚಾರಗಳನ್ನೊಳಗೊಂಡಿದೆ. ಕೃತಿಯ ಬೆನ್ನುಡಿಯಲ್ಲಿನ ಸಾಲುಗಳು ಹೀಗಿವೆ; ಶಾಂತಿ, ತೃಪ್ತಿ ಮತ್ತು ಆನಂದ. ನಾವು ಜೀವನದಲ್ಲಿ ಹೇಗಿರಬೇಕು, ಹೇಗಿರಬಾರದು ಮತ್ತು ಹೇಗಿರಬಹುದು- ಈ ವಿಷಯಗಳ ಬಗ್ಗೆ ಓದುಗರನ್ನು ನೇರವಾಗಿ ಮಾತನಾಡಿಸುತ್ತಾ, ಗುರುಗಳು ಶಿಷ್ಯರಿಗೆ ಹೇಳುವಂತೆ ತಿಳಿಯಾದ ಭಾಷೆಯಲ್ಲಿ ವಿವರಿಸುತ್ತಾರೆ ಡಾ. ಯಂಡಮೂರಿ. ಮಕ್ಕಳಿಗೆ ತಾಯಿ ತಂದೆಯರ ಹಣ, ಪ್ರೀತಿ ಮಾತ್ರ ಸಾಲದು. ಮಕ್ಕಳ ಶಿಕ್ಷಣದಲ್ಲಿ ತಾಯಿತಂದೆಯರು ತೊಡಗಿಸಿಕೊಳ್ಳಬೇಕೆಂಬುದು ಯಂಡಮೂರಿಯವರ ಆಶಯ. ಕೆಲವೊಮ್ಮೆ ಓದುಗರನ್ನು ನೇರವಾಗಿ ಮಾತಾಡಿಸುವಂತೆ ಬರೆದಿರುವ, ಬದುಕಿನ ಸೊಗಸನ್ನು ವಿವರಿಸಿರುವ ವಿಶಿಷ್ಟ ಲೇಖನ ಮಾಲೆಯೇ ಓ ಬದುಕೇ… ನೀನೆಷ್ಟು ಸೊಗಸು..!
©2025 Book Brahma Private Limited.