ಓಹೆನ್ರಿ ಕಥೆಗಳು

Author : ಎನ್.ಎಸ್. ಶಂಕರ್‌

Pages 117

₹ 180.00




Year of Publication: 2021
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: # 375/15, ಕೆಂಪೇಗೌಡ ನಗರ, 1ನೇ ಮೈನ್, 8ನೇ ಕ್ರಾಸ್, ಮಾಗಡಿ ಮುಖ್ಯರಸ್ತೆ, ವಿಶ್ವನೀಡಂ ಅಂಚೆ, ಬೆಂಗಳೂರು-560091

Synopsys

ಓಹೆನ್ರಿ ಕಥೆಗಳು-ಲೇಖಕ ಪ್ರೊ. ಎನ್.ಎಸ್. ಶಂಕರ್ ಅವರ ಅನುವಾದಿತ ಕೃತಿ. ಅಮೆರಿಕಾದ ಸಣ್ಣ ಕಥೆಗಳ ಕ್ಷೇತ್ರದಲ್ಲಿ ಓ ಹೆನ್ರಿ ಕಥೆಗಳೆಂದೇ ಖ್ಯಾತಿ ಪಡೆದ ಓ ಹೆನ್ರಿಯ ಕಥೆಗಳು ಈತನ ಮೂಲ ಹೆಸರು ವಿಲಿಯಂ ಸಿಡ್ನಿ ಪೋರ್ಟರ್. ಈತನ ಕಥೆಗಳಲ್ಲಿ ತೀವ್ರವಾದ ಸಂವೇದನೆಗಳಿದ್ದು, ಮಾನವೀಯತೆಗೆ ಮಿಡಿಯುತ್ತವೆ. ಕಥೆಯ ಅಂತಿಮ ತಿರುವಿನಲ್ಲಿ ಅನಿರೀಕ್ಷಿತವಾದ ಅಂತ್ಯವಿರುತ್ತದೆ. ಪದಪುಂಜಗಳನ್ನು ಅತ್ಯಂತ ಎಚ್ಚರಿಕೆಯಿಂದ ಬಳಸುವ ಸೂಕ್ಷ್ಮತೆಯನ್ನು ಕಾಣಬಹುದು. ಬರಹವನ್ನು ತುಂಬಾ ಗಂಭೀರವಾಗಿ ಸ್ವೀಕರಿಸಿ ಉತ್ತಮ ಸಾಹಿತ್ಯ ರಚಿಸಿದ್ದು ಈತನ ವಿಶೇಷ. ಈತನ ಬಹುತೇಕ ಕಥೆಗಳ ಪೈಕಿ ಆಯ್ದ ಕೆಲವೊಂದನ್ನು ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಎನ್.ಎಸ್. ಶಂಕರ್‌

ಲೇಖಕ, ಪತ್ರಕರ್ತ ಎನ್. ಎಸ್‌. ಶಂಕರ ಅವರು ‘ಸುದ್ದಿ ಸಂಗಾತಿ’ ಮತ್ತು ‘ಮುಂಗಾರು’ ಪತ್ರಿಕೆಯ ಸ್ಥಾಪಕರು. ಪ್ರಜಾವಾಣಿ, ಲಂಕೇಶ್‌ ಪತ್ರಿಕೆಯ ವರದಿಗಾರರಾಗಿಯೂ ಅನುಭವವಿದೆ. ಲಂಕೇಶರ ‘ಮುಟ್ಟಿಸಿಕೊಂಡವರು’ ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ ‘ಮಾನಸೋಲ್ಲಾಸ’ ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. ‘ಅರಸು ಯುಗ, ಚಂಚಲೆ’ ಅವರ ಕೃತಿಗಳು. ಸಮಕಾಲೀನ ಘಟನಾವಳಿಗಳು ಕುರಿತಂತೆ ಬರೆದ ಬರೆಹ ‘ಉಸಾಬರಿ’ ಅವರ ಇತ್ತಿಚಿನ ಕೃತಿ. ...

READ MORE

Related Books