ಒಳಗಣ್ಣು

Author : ಶಿವಮೂರ್ತಿ ಜುಪ್ತಿಮಠ



Published by: ಪ್ರಭುದೇವ ಪ್ರಕಾಶನ

Synopsys

ಮೈಸೂರಿನ ಶಿವಮೂರ್ತಿ ಜುಪ್ತಿಮಠ ಬರೆದಿರುವ ಕೃತಿ ‘ಒಳಗಣ್ಣು’. ಈ ಕೃತಿಗೆ ವಿಜಯ ಕರ್ನಾಟಕದ ಪ್ರದಾನ ಸಂಪಾದಕ ಹರಿಪ್ರಕಾಶ್ ಕೋಣಿಮನೆ ಅವರು ಮುನ್ನುಡಿ ಬರೆದಿದ್ದಾರೆ.

ಅಂಗವೈಕಲ್ಯ ಎಂಬುದು ದೇಹಕ್ಕೆ ಹೊರತೂ ಮನಸ್ಸಿಗಲ್ಲ ಎಂಬುದನ್ನು ತಿಳಿಯಲು, ಕಷ್ಟಗಳು ಬರುವುದೇ ಅವುಗಳನ್ನು ಎದುರಿಸಲು ಎಂದು ಅರಿಯಲು, ಜೀವನಕ್ಕೆ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ಪರಿಚಯಿಸಿಕೊಳ್ಳಲು. ಈ ಕೃತಿಯಲ್ಲಿ ಒಟ್ಟು 25 ಅಧ್ಯಾಯಗಳಿವೆ. ಒಂದೊಂದು ಅಧ್ಯಾಯವೂ ಶ್ರೀ ಬಸವಾನಂದರ ಒಂದೊಂದು ಮಾನವತ್ವದ ಅವತಾರವನ್ನು ಪರಿಚಯಿಸುತ್ತದೆ. ಸಾಧಿಸುವ ಮನಸ್ಸಿದ್ದರೆ ಎಲ್ಲವೂ ಎಷ್ಟು ಸಲೀಸು ಎಂಬುದನ್ನು ತಿಳಿಯಬಹುದು.

About the Author

ಶಿವಮೂರ್ತಿ ಜುಪ್ತಿಮಠ
(20 October 1976)

ಸಾಮಾಜಿಕ ಜವಾಬ್ದಾರಿಯುಳ್ಳ ಪ್ರತಿಯೊಬ್ಬ ಪತ್ರಕರ್ತನಿಗೂ ಸರ್ವರಿಗೂ ಒಳಿತನ್ನೇ ಮಾಡಬೇಕು ಎಂಬ ಹಂಬಲವಿರುತ್ತದೆ. ಅಂತಹ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಸನ್ಮಿತ್ರ ಶಿವಮೂರ್ತಿ ಜುಪ್ತಿಮಠ. ವಿಶ್ವನಾಥ-ಶಾಂತಾ ದಂಪತಿ ಪುತ್ರರಾದ ಇವರು, 1976ರ ಅಕ್ಟೋಬರ್ 20ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಹುಬ್ಬಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದ್ದಾರೆ. ಕನ್ನಡ ಎಂಎ, ಶಾಸನ, ಪತ್ರಿಕೋದ್ಯಮ, ಸಂಸ್ಕೃತ ಸಾಹಿತ್ಯ, ವೇದಾಧ್ಯಯನ ಮಾಡಿದ್ದು, ಇವರ ಬರವಣಿಗೆಗೆ ನೆರವಾಗಿವೆ. ಸಕ್ಕರೆ ಉದ್ಯಮದ ಸಿಹಿ-ಕಹಿ, ಅರವತ್ತಾದೃಏನು? ಕೃತಿಗಳು ಈಗಾಗಲೇ ಬಿಡುಗಡೆಗೊಂಡು ರುಕ್ಮಿಣಿಬಾಯಿ ಸ್ಮಾರಕ ರಾಜ್ಯ ಪ್ರಶಸ್ತಿ, ಜೇಡರ ದಾಸಿಮಯ್ಯ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿವೆ. ಅರಣ್ಯ ...

READ MORE

Related Books