
‘ಒಲವೆಂಬ ಮಾಯೆ’ ಪುಸ್ತಕವು ವೆಂಕಟೇಶ ಮಾಚಕನೂರ ಅವರ ಮೂರನೇ ಪ್ರಬಂಧ ಸಂಕಲನವಾಗಿದೆ. ಲಲಿತ ಪ್ರಬಂಧಗಳು ಸೇರಿದಂತೆ ಗಂಭೀರ ವಿಷಯಗಳ ಕುರಿತು ಲೇಖಕರು ಚರ್ಚಿಸಿದ್ದಾರೆ. ಕೀನ್ಯಾ ದೇಶದ ಪ್ರಸಿದ್ದ ಚಿಂತಕ ಗೂಗಿ ವಾಥಿಯಾಂಗ್ ಅವರ ಪ್ರಬಂಧವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗಂಭೀರ ವಿಷಯಗಳನ್ನು ಅತ್ಯಂತ ಸುಲಲಿತವಾಗಿ ಬರೆದುಕೊಂಡು ಹೋಗಿರುವ ಲೇಖಕರು ಒಂದಷ್ಟು ಪ್ರಬಂಧಗಳಲ್ಲಿ ಹೊಸ ಹೊಳಹುಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ಭಾಷೆ, ಸಂಸ್ಕೃತಿ ಹಾಗೂ ಕಲಿಕಾ ಮಾಧ್ಯಮದ ಬಗ್ಗೆ ಹೆಚ್ಚು ಉಲ್ಲೇಖಿಸಿರುವುದು ಈ ಕೃತಿಯ ವಿಶೇಷತೆ.
©2025 Book Brahma Private Limited.