ಒಂದು ಕಾಡಿನ ಪುಷ್ಪಕ ವಿಮಾನ

Author : ಪ್ರಸಾದ್ ಶೆಣೈ

Pages 172

₹ 150.00




Year of Publication: 2020
Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು, ಕೋಡೂರು (ಅಂಚೆ) ಹೊಸನಗರ (ತಾಲ್ಲೂಕು), ಶಿವಮೊಗ್ಗ(ಜಿಲ್ಲೆ) - 577418
Phone: 7338437666

Synopsys

‘ಒಂದು ಕಾಡಿನ ಪುಷ್ಪಕ ವಿಮಾನ’ ಪ್ರಸಾದ್ ಶೆಣೈ ಆರ್.ಕೆ ಅವರ ಲೇಖನಗಳ ಸಂಕಲನ. ಹಿರಿಯ ಸಾಹಿತಿ ಡಾ. ನಾ. ಡಿಸೋಜ ಅವರು ಬೆನ್ನುಡಿ ಬರೆದು ‘ಈ ಕೃತಿ ನಮಗೆ ಕಚಗುಳಿ ಇಡುತ್ತದೆ. ಕವಿಯುತ್ತಿರುವ ಶೂನ್ಯದತ್ತ ನಾವು ತಿರುಗಿ ನೋಡುವಂತೆ ಮಾಡುತ್ತದೆ. ಮನಸ್ಸನ್ನು ಅರಳಿಸುತ್ತದೆ. ಅಚ್ಚರಿ ಪಡಿಸುತ್ತದೆ. ನಾವು ಏನೆಲ್ಲವನ್ನು ಕಳೆದುಕೊಂಡೆವಲ್ಲ ಎಂದು ನಮ್ಮನ್ನು ಗಾಬರಿಗೊಳಿಸುತ್ತದೆ’ ಎನ್ನುತ್ತಾರೆ. 

ಮಾಳ ‘ಪಶ್ಚಿಮ ಘಟ್ಟದ ಕೆಳಗಿನ ಹಸಿರು ತೊಟ್ಟಿಲು’. ಅಷ್ಟೇ ಅಲ್ಲ ಈ ಮಾಳವನ್ನೇ ಬಳಸಿ ಸಹ್ಯಾದ್ರಿ ತಟದ ಊರುಗಳಾದ ಕುದುರೆಮುಖ, ಹೊರನಾಡು, ಕಳಸ, ಶೃಂಗೇರಿಗಳ ದಾರಿ ಹಿಡಿದರಂತೂ ಇಷ್ಟು ದಿನ ಕಳೆದುಕೊಂಡ ಹೊಸ ಜಗತ್ತೊಂದು ಧುತ್ತನೆ ಎದಿರು ಬಂದು ಮೂಡುತ್ತದೆ. ಹೀಗೆ ಎದುರಾಗುವ ದಿವ್ಯ ಜಗತ್ತನ್ನು ನಮ್ಮ ಮುಂದೆ ಇಡುತ್ತಾರೆ ಲೇಖಕರು.

ಈ ಬೆಟ್ಟ, ಕಾಡು, ಕಣಿವೆ, ಗುಡ್ಡ, ಝರಿ, ನದಿ, ಹಳ್ಳ, ಬಳ್ಳಿ, ಕಾಡುಬಂಡೆ, ಹಕ್ಕಿ, ಪ್ರಾಣಿ, ಗಿಡ, ಎಲೆ, ಇವುಗಳೆಲ್ಲದರ ಪರಿಚಯವೂ ಇಲ್ಲಿ ಲಭ್ಯ. ಜೊತೆಗೆ, ಕಾಡನ್ನು ಆವರಿಸಿಕೊಳ್ಳುವ ಬಿಸಿಲು, ಬೆಳದಿಂಗಳು, ಮಳೆ, ಮಂಜು, ಇಬ್ಬನಿಗಳ ಪರಿಚಯ, ಬಿಸಿಲು ಮೂಡುವ ಮುನ್ನ ಒಂದು ಬೆಟ್ಟ ಇರುವ ಪರಿ, ಬಿಸಿಲು ಸರಿದು ಹೋದ ನಂತರ ಅದೇ ಬೆಟ್ಟ ಧರಿಸುವ ಅದರ ರೂಪ. ಹೀಗೆಯೇ ಮಂಜು-ಮಳೆ ಆಡುವ ವಿವಿಧ ಬಗೆಯ ಆಟಗಳ ಜೊತೆ, ನಿಗೂಢ ಅರಣ್ಯದ ನಡುವೆ ಬದುಕಿನ ಜನರ ಪರಿಚಯ ಇಲ್ಲಿದೆ. ಪರಿಸರದ ಬಗ್ಗೆ ಆಸಕ್ತಿ ಇಲ್ಲದ ಸರಕಾರಿ ವ್ಯವಸ್ಥೆ, ನಮ್ಮ ರಾಜಕಾರಣಿಗಳ ಬೇಜವಾಬ್ದಾರಿತನ ನಮ್ಮ ಜನಸಾಮಾನ್ಯರ ಹೊಣೆಗೇಡಿತನ ಪಶ್ಚಿಮ ಘಟ್ಟಗಳ ನಾಶಕ್ಕೆ ಕಾರಣವಾಗುತ್ತಿರುವಾಗ ಈ ಪುಸ್ತಕ ಅದನ್ನು ಉಳಿಸಲು ಸ್ಫೂರ್ತಿ ನೀಡಿಲಿ ಎಂದು ಡಾ.ನಾ. ಡಿಸೋಜ ಹಾರೈಸಿದ್ದಾರೆ.

About the Author

ಪ್ರಸಾದ್ ಶೆಣೈ
(01 October 1991)

ಕಥೆಗಾರ ಪ್ರಸಾದ್ ಶೆಣೈ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. . ಮೂಲತಃ ಕಾರ್ಕಳದವರು. (ಜನನ: !991 ಅಕ್ಟೊಬರ್‌ 01) ಶೈಕ್ಷಣಿಕ ಓದು, ಕಾರ್ಕಳದಲ್ಲಿ.ಉಪನ್ಯಾಸಕರಾಗಿದ್ದಾರೆ. ಸಾಹಿತ್ಯ, ಫೋಟೋಗ್ರಫಿಯೂ ಅಚ್ಚುಮೆಚ್ಚು. 2019 ರ ಕನ್ನಡ ಕ್ರಿಯಾಶೀಲ ಬರವಣಿಗೆಯ ಕಥಾ ವಿಭಾಗದಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನ ಟೋಟೋ ಪುರಸ್ಕಾರ ಲಭಿಸಿದೆ. ‘ಲೂಲು ಟ್ರಾವೆಲ್ಸ್’ ಅವರ ಚೊಚ್ಚಲ ಕಥಾ ಸಂಕಲನ. ...

READ MORE

Related Books