ಒಂಟಿ ದನಿ

Author : ಶಿವರಾಮ ಕಾರಂತ

Pages 287

₹ 140.00
Year of Publication: 2014
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ವ್ಯಕ್ತಿಗಳ ಒಳಗು ಮತ್ತು ಹೊರಗುಗಳಲ್ಲಿರುವ ಅಂತರವನ್ನು ಬಿಂಬಿಸುವ ಕಾದಂಬರಿ ಶಿವರಾಮ ಕಾರಂತರ ’ಒಂಟಿದನಿ’. ತಂತಮ್ಮ ಕ್ಷೇತ್ರಗಳಲ್ಲಿ ದುಡಿಯುವಾಗ; ಪ್ರಾಮಾಣಿಕವಾಗಿ ತಮಗೆ ಅನಿಸಿದ್ದನ್ನು ಇತರರಿಗೆ ಬರಹದ ಮೂಲಕವಾಗಲಿ, ನೃತ್ಯ, ಸಂಗೀತಗಳ ಮೂಲಕವಾಗಲೀ ತಿಳಿಯಪಡಿಸಬೇಕೆನ್ನುವ ಬಯಕೆಗಿಂತ “ಲೋಕ ತನ್ನನ್ನು ಕಾಣಬೇಕು: ಕೇಳಬೇಕು ಎಂಬ ಪ್ರಚಾರಪ್ರಿಯತೆಯೇ ಕಾದಂಬರಿಯ ಹಲವಾರು ಮುಖ್ಯ ಪಾತ್ರಗಳ ಧ್ಯೇಯಧೋರಣೆಗಳಾಗಿರುತ್ತವೆ. ಬದುಕಿಗೂ, ಜೀವನಕ್ಕೂ ಪರಸ್ಪರ ಸಂಬಂಧಗಳಿಲ್ಲದ ಹಲವಾರು ಬಗೆಯ ಇಂತಹ ಮುಖವಾಡಗಳನ್ನು ತೊಟ್ಟ ಜನರ ಸಂತೆಯಲ್ಲಿ 'ಲೋನ್ ವಾಯ್ ಪತ್ರಿಕೆಯಲ್ಲಿ ತನ್ನ ಅನುಭವಗಳನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಬರೆಯುತ್ತಿದ್ದ ಜಗನ್ನಾಥರಾಯನೊಬ್ಬನೇ ಭಿನ್ನ ವ್ಯಕ್ತಿ. ತನ್ನ ತಾಯಿ, ತಂಗಿ ಮತ್ತು ಅವಳ ಮಕ್ಕಳ ಸಂಸಾರಕ್ಕೆ ನೆರವಾಗುವ ಉದ್ದೇಶದಿಂದ ತನ್ನ ಅಲ್ಪ ವೇತನವನ್ನು ಅವರಿಗಾಗಿ ವ್ಯಯಿಸಿ, ಮದುವೆಯಾಗದೆ ಹೋದರೂ, ಪ್ರಾಮಾಣಿಕವಾಗಿ, ಶುದ್ಧ ಚಾರಿತ್ಯ್ರದಿಂದ ಬದುಕನ್ನು ಸಾಗಿಸುತ್ತಿದ್ದ ವ್ಯಕ್ತಿ ಜಗನ್ನಾಥರಾಯ, ಹಲವು ಜನರ ಗದ್ದಲಗಳ ನಡುವೆ ತನ್ನ ದನಿ ಒ೦ಟದನಿ ಎಂಬ ಪರಿವೆ ಇದ್ದರೂ, ಯಾವುದೇ ಆಮಿಷಗಳಿಗೆ ಬಲಿಯಾಗದೆ ಕೊನೆಯವರೆಗೂ ಬಾಳಿದ ವ್ಯಕ್ತಿ. “ಉಸಿರು ಕಡಿಮೆಯಾದರೆ ಹೃತ್ಕ್ರಿಯೆ ನಿಲ್ಲುತ್ತದೆ. ದೇಹ ಸಾಯುತ್ತದೆ. ಪತ್ರಿಕೆ ಸಾಯುವುದು ಹೆಚ್ಚೇ ? ನಾವೇ ಸಾಯುವುದಿಲ್ಲವೆ ? ಆದರೆ, ನನ್ನಂತೆ ಸ್ವಂತ ದನಿಯುಳ್ಳವರು ಎಷ್ಟೋ ಜನರಿರಬಹುದು. ನನ್ನ ಬದಲು ಅವರು ಆಡುತ್ತಾರೆ: ಬರೆಯುತ್ತಾರೆ; ಅಚ್ಚು ಹಾಕಿಸುತ್ತಾರೆ. ಎಲ್ಲ ಜನರೂ ಕೇಳುತ್ತಾರೆಂದಲ್ಲ, ಕೇಳಲು ಯೋಗ್ಯವಾದ ವಿಚಾರಗಳು ನಮ್ಮಲ್ಲಿ ಇರುವ ತನಕ ಹೇಳುತ್ತ ಹೋಗುವುದು ನಮ್ಮ ಧರ್ಮ" ಎಂಬುದೇ 'ಒಂಟಿದನಿ' ಕಾದಂಬರಿಯ ಗಟ್ಟಿ ದನಿ.

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books