ಊರು

Author : ಬಸವರಾಜ ಕೋಡಗುಂಟಿ

Pages 96

₹ 70.00




Year of Publication: 2015
Published by: ಬಂಡಾರ ಪ್ರಕಾಶನ
Address: ಮಸ್ಕಿ-584124 ರಾಯಚೂರು ಜಿಲ್ಲೆ
Phone: 9916053057

Synopsys

‘ಊರು’ ಕೃತಿಯು ಬಸವರಾಜ ಕೋಡಗುಂಟಿ ಅವರ ವಿವಿಧ ಪ್ರದೇಶಗಳ ಕುರಿತ ಲೇಖನ ಸಂಕಲನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿ: "ಹಯ್ದರಾಬಾದ ಕrರ್‍ನಾಟಕದ ಬಗೆಗೆ ತಿಳಿದುಕೊಳ್ಳುವ ನನ್ನ ಆಸೆಯೆ ಈ ಪ್ರಯತ್ನ. ಈ ಬಾಗ ಇತಿಹಾಸದ ಒಂದು ಅಚ್ಚರಿ, ಸಮಾಜದ ಒಂದು ಬೆರಗು, ಬದುಕಿನ ಒಂದು ಸೋಜಿಗ. ಅದು ಶ್ರೀಮಂತ ಇತಿಹಾಸ. ನನಗೆ ಚೋಜಿಗ (ಸೋಜಿಗ)ವಾಗಿ ಕಾಣುವುದು, ಈ ಬಾಗದ ಮಂದಿಗೆ ದಿನವೂ ಬೆಳಗೆದ್ದು ಬಯಲಿಗೆ ಹೋಗುವಾಗ ಇತಿಹಾಸ ಕಾಲಿಗೆ ತೊಡರುತ್ತದೆ, ಗುಡಿಗುಂಡಾರ, ಶಾನಗಳಿಗೆ ಮನೆಯ ದನಕರುಗಳನ್ನ ಕಟ್ಟುತ್ತೇವೆ, ಸಂದಿಗೊಬ್ಬ ಸಾದು, ಸಂತ, ಸೂಪಿಗಳು, ಓಣಿಗೊಬ್ಬ ತತ್ವಪದಕಾರ, ಊರತುಂಬ ಹಾಡು, ಕತೆ, ಕುಣಿತ, ಕಲೆ, ಈ ರೂಪದಲ್ಲಿ ದೊಡ್ಡ ಪಿಲಾಸಪಿ, ಜಗತ್ತು ಬೆರಗುಗೊಳ್ಳುವ ಕಲೆ, ಶಿಲ್ಪಕಲೆ, ಚಿತ್ರಕಲೆ ಇಲ್ಲಿವೆ, ಕಲ್ಲಿನ ಯುಗದ ಅವಶೇಶಗಳು, ರಾಜಕೇಂದ್ರ, ದರ ಕೇಂದ್ರ, ವ್ಯಾಪಾರ ಕೇಂದ್ರ, ಶಿಲ್ಪಕೇಂದ್ರಗಳು, ಪಾರಿಸರಿಕ ಶ್ರೀಮಂತ ನೆಲೆಗಳು ಕೇಳರಿಲ್ಲದೆ ಹಾದಿಬದಿಯ ಚೆಲುವೆಯರಂತೆ ತುಟಿಯ ಮೇಲೆ ನಗುತ್ತಿವೆ. ಶಕ್ತಿನಗರದ ಕರೆಂಟಿನ ಕೆಳಗೆ ಕತ್ತಲೆಯೊಳಗೆ ಸಾವಿರದ ತಾಕತ್ತಿನ ಹೊಲತಿಯರು ಕುಣಿಯುತ್ತಿದ್ದಾರೆ. ಕನ್ನಡಕ್ಕೆ ಗತಿಯನು ಕಟ್ಟಿಕೊಟ್ಟ ಶ್ರೀವಿಜಯನ ನಗು ಇಲ್ಲಿ ಕೊಳೆತು ನಾರುವ ಗಟಾರದ ನೀರಿನೊಳಗೆ ಪಾಚಿಗೆ ಅಂಟಿಕೊಂಡು ಕೇಳುತ್ತಲೆ ಇದೆ, ಈ ನೆಲವನರಸಿ ಬಂದ ಜಗದ ದರ ಪಂತಗಳೆಲ್ಲ ಇಲ್ಲಿ ಎದ್ದ ದೂಳಿನ ಕೆಳಗೆ ಹೂತುಕೊಂಡಿವೆ, ದೇಶದೇಶಗಳನೆಲ್ಲ ಚೆಂಡಾಡಿದ ರಾಜಮಹಾರಾಜರುಗಳ ತಲಿಮ್ಯಾಗಳ ಬಂಗಾರದ ಕಿರೀಟದ ಮಣಿಗಳು ಮಾಸಿದ ಮಸಿ ಹಚ್ಚಿಕೊಂಡು ಮುನುಗುತ್ತಿವೆ, ಜಗತ್ತಿಗೆ ಬೆಳಕನ್ನು ಕೊಡುವುದಕ್ಕೆ ದುಡಿದು ಮಡಿದ ಅಪಾರ ವಿದ್ವತ್ತು, ಸುಜನಾತ್ಮಕತೆ ಎಲ್ಲವು ಇಲ್ಲಿ ಹರಿಯುತ್ತಿರುವ ನದಿಹಳ್ಳಗಳಲ್ಲಿ ನೀರುಕಮ್ಮಿಯಾಗಿ ಕೊಳೆಯಾಗಿ ಕೂತು ಬಿಟ್ಟಿವೆ, ಅಲ್ಲಮನ ಬೆರಗಿನ ಬಯಲು ದೂಳಿನೊಳಗೆ ಅವಿತುಕೊಂಡಿದೆ, ಪಂಪನ ಬೆರಗಿನ ಕಳವಿಯ ಗದ್ದೆಗಳೊಳಗಿನ ಹಕ್ಕಿಗಳ, ಪ್ರೇಮಿಗಳ ಸರ ಕೇಳರಿಲ್ಲದೆ ಒಳಗೊಳಗೆ ಬೇಸರಿಸಿಕೊಳುತಿವೆ, ಇಲ್ಲಿ ಯಲ್ಲವ್ವನ ಉದೊ ಎಂಬ ದನಿ, ಉಗ್ಗಿದ ಬಂಡಾರ ಮುಗಿಲನ್ನು ಮುಟ್ಟಿಕೊಂಡೆ ಇದೆ, ನೆಲದ ನೂರು ಹಂತಗಳು ಕುಣಿಯದ ಕಾಲಗತಿಯನೆ ಕಳೆದುಕೊಂಡಂತೆ ಹಂಬಲಿಸುತಿವೆ, ಬವುದ್ದನ ಪ್ರೀತಿಯ ಬೀಮೆ ಸದ್ದು ಕಳೆದುಕೊಂಡು ಹರಿದು ಹೋಗುತ್ತಲೆ ಇದೆ, ಕೊಪಣದ ಜಿನಬೆಳಗು ಮಾಸಿ ಅವಿತುಕೊಂಡಿದೆ. ದೇಶಕೆಲ್ಲ ಬೆಳಕು ಕೊಟ್ಟ ಕಲ್ಯಾಣ ಸೋತು ಸೊರಗಿದೆ, ಅದಮ್ಯ ಚೇತನವಾಗಿ ಬೆಳಗಿದ ಮಂತ್ರಾಲಯ ಕೊರಗುತಿದೆ,"

About the Author

ಬಸವರಾಜ ಕೋಡಗುಂಟಿ

ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು.  ...

READ MORE

Related Books