ಆಪರೇಷನ್ ತ್ರಿಶೂಲ

Author : ಡಿ.ವಿ. ಗುರುಪ್ರಸಾದ್

Pages 199

₹ 197.00




Year of Publication: 2021
Published by: ವಿಕ್ರಂ ಪ್ರಕಾಶನ
Address: ಪಿ. ಬಿ #60, ವಿಕ್ರಂ ಬಿಲ್ಡಿಂಗ್, ಕೆ.ಸಿ ರಾಣಿ ರೋಡ್‌, ಬೆಂಗಳೂರು
Phone: 9740994008

Synopsys

‘ಆಪರೇಷನ್ ತ್ರಿಶೂಲ’ ಕೃತಿಯು ಲೇಖಕ ಡಿ. ವಿ ಗುರುಪ್ರಸಾದ್ ಅವರ ಸಮಕಾಲೀನ ಜಾಗತಿಕ ಆಕರ ಗ್ರಂಥವಾಗಿದೆ. ಪೋಲಿಸ್ ಡಿ.ಜಿ.ಪಿ ಆಗಿ ನಿವೃತ್ತಿ ಹೊಂದಿರುವ ಲೇಖಕರು ತಮ್ಮ ಈ ಕೃತಿಯಲ್ಲಿ ಒಸಾಮ ಬಿನ್ ಲಾದೆನ್ ನ ಬೆಳವಣಿಗೆಗೂ ಪಾಕಿಸ್ತಾನ ಭಾರತದ ಮೇಲೆ ನಡೆಸುತ್ತಿರುವ ಪ್ರಾಕ್ಷಿಕದನಕ್ಕೂ ಇರುವ ನಂಟನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಈ ಕೃತಿ ಸಮಕಾಲೀನ ಜಾಗತಿಕ ಇತಿಹಾಸದ ಬಗ್ಗೆ ಕನ್ನಡದಲ್ಲಿ ಬಂದಿರುವ ಅತ್ಯಂತ ಮಹತ್ವದ ಆಕರ ಗ್ರಂಥವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಪ್ರೇಮಶೇಖರ ಅವರು, ಅಮೇರಿಕಾದಲ್ಲಿ ಜರುಗಿದ ಘಟನಾವಳಿಗಳ ಕ್ಷಣಕ್ಷಣಗಳ ವಿವರಗಳನ್ನು ಲೇಖಕರು ಕಟ್ಟಿಕೊಟ್ಟಿರುವ ಬಗೆ ಅತ್ಯಂತ ಪರಿಣಾಮಕಾರಿಯಾಗಿದೆ. ಈ ದಾಳಿಗಳ ಸೂತ್ರಧಾರ ಒಸಾಮಾ ಬಿನ್ ಲಾದೆನ್ ಜಗತ್ತಿನ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಆಗಿ ಬೆಳೆದ ಬಗೆಯನ್ನು ಚಿತ್ರಿಸುತ್ತಾ ಹೋಗುವ ಲೇಖಕರು, ಅವನಿಗಾಗಿ ನಡೆದ ಹುಡುಕಾಟ, ಅದು ಕೊನೆಗೂ ಯಶಸ್ವಿಯಾಗಿ ಅಬ್ಬೊಟಾಬಾದ್ ನಗರದ ಹೊರವಲಯಲ್ಲಿ ಅಮೆರಿಕನ್ ನೇವಿ ಸೀಲ್ “ಆಪರೇಷನ್ ನೆಪ್ಚೂನ್ ಸ್ಪಿಯರ್” ಕಾರ್ಯಾಚರಣೆಯಲ್ಲಿ ಅವನನ್ನು ಹತ್ಯೆಗೈದದ್ದನ್ನು ಹೇಳಿರುವ ರೋಚಕ, ಚಲನಚಿತ್ರದ ಕೊನೆಯ ಭಾಗವನ್ನು ಕುರ್ಚಿಯಂಚಿನಲ್ಲಿಟ್ಟುಕೊಂಡು ನೋಡಿದ ಅನುಭವ ನೀಡುತ್ತದೆ ಎಂದಿದ್ದಾರೆ.

About the Author

ಡಿ.ವಿ. ಗುರುಪ್ರಸಾದ್

ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ.  ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...

READ MORE

Related Books