ಓರ್ವ ಭಿಕ್ಷುಕ ಚಕ್ರವರ್ತಿಯ ಕಥೆ

Author : ಗೀತಾ ಶೆಣೈ

Pages 280

₹ 400.00




Year of Publication: 2016
Published by: ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನ
Address: ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ, ಕೊಂಕಣಿಗಾಂವ ಮಂಗಳೂರು -575016

Synopsys

ʼಓರ್ವ ಭಿಕ್ಷುಕ ಚಕ್ರವರ್ತಿಯ ಕಥೆʼ ಕೃತಿಯು ಡಾ.ಬಸ್ತಿ ವಾಮಣ ಶೆಣೈ ಅವರ ಆತ್ಮಕಥನ. ಈ ಪುಸ್ತಕವನ್ನು ಕೊಂಕಣಿ ಭಾಷೆಯಿಂದ ಲೇಖಕಿ ಡಾ.ಗೀತಾ ಶೆಣೈ ಕನ್ನಡಕ್ಕೆ ಅನುವಾದಿಸಿದ್ದಾರೆ. ಗೋವೆಯಿಂದ ನಿರಾಶ್ರಿತರಾಗಿ ಹೊರಬಂದು ನಾಡಿನ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ನೆಲೆನಿಂತ ಕೊಂಕಣಿ ಭಾಷಾ ಸಮುದಾಯದವರು ಮಾಡಿದ ಅದ್ಭುತ ಸಾಧನೆಗಳ ಪಕ್ಷಿನೋಟವನ್ನು ನಮ್ಮ ಮುಂದೆ ಇರಿಸುವ ಅದ್ಭುತ ಕಥಾನಕವು ಇದಾಗಿದೆ. ಸಂಸ್ಕೃತ ಮತ್ತು ಸಮಾಜಸೇವೆಯ ಮಹತ್ತರವಾದ ಧ್ಯೇಯೋದ್ದೇಶಗಳಿಗೆ ಒಬ್ಬ ವ್ಯಕ್ತಿ ಕಟುಬದ್ದನಾಗಿ ನಿಂತರೆ ಅತನನ್ನು ಯಾರಿಂದಲೂ ಕೆಳದೂಡಲು ಸಾಧ್ಯವಿಲ್ಲ ಎಂಬುದನ್ನು ವಾಮಣ ಶೆಣೈ ತಮ್ಮ ಆತ್ಮಕಥನದಲ್ಲಿ ಚಿತ್ರಿಸಿದ್ದಾರೆ. ವಾಮಣ ಶೆಣೈ ಅವರ ಸಾಹಿತ್ಯಿಕ ಪ್ರತಿಭೆ ಮತ್ತು ನಿರೂಪಣಾ ಕೌಶಲ್ಯಗಳಿಂದ ಇದೊಂದು ಸ್ವಾರಸ್ಯಕರ ಕಥಾನಕವಾಗಿಯೂ ನಮ್ಮ ಮನಸನ್ನು ಸೂರೆಗೊಳ್ಳುತ್ತದೆ.

 

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books